ಸಾಮಾಜಿಕ ಜಾಲತಾಣದ ಮೇಲೆ ಖಾಕಿ ಹದ್ದಿನ ಕಣ್ಣು-ಮತ್ತೊಂದು ಎಫ್ಐಆರ್ ದಾಖಲು

ಸುದ್ದಿಲೈವ್/ಶಿವಮೊಗ್ಗ

ಸಾಮಾಜಿಕ ಜಾಲತಾಣದಲ್ಲಿ ಏನೇನೋ ಪೋಸ್ಟ್ ಮಾಡುದ್ರೆ ಅವರ ವಿರುದ್ಧ ಪ್ರಕರಣ ದಾಖಲಾಗುವುದು ಗ್ಯಾರೆಂಟಿ. ಶಾಂತಿ ಕದಡುವ ಪೋಸ್ಟ್ ಗಳನ್ನ ರಂಚಿಸುವಂತೆ ಪೋಸ್ಟ್ ಮಾಡುವುದು, ಮಹಿಳೆಯನ್ನ ಅವಹೇಳನ ಮಾಡುವುದು, ಹೀಗೆ ವಿವಿಧ ಕಾನೂನು ಬಾಹಿರ ಪೋಸ್ಟ್ ಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕುವುದರಿಂದ ಸಂಕಷ್ಟಕ್ಕೆ ಸಿಲುಕುವುದು ಗ್ಯಾರೆಂಟಿ!
ಮೊನ್ನೆ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯಲ್ಲಿ ನಿರ್ಮಿಸಿರುವ ಉಗ್ರ ನರಸಿಂಹನ ಫೊಟೊ ಮತ್ತು ಈದ್ ಗೆ ಮಾಡಿರುವ ಟಿಪ್ಪು ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಬೆರಯಿಸಿ ಟಿಪ್ಪು ಸುಲ್ತಾನ್ ನನ್ನ ರಂಜಿಸಲು ಹೊರಟವನ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈಗ ಹರ್ಷನ ವಿರುದ್ಧ ಅವಹೇಳನ ಪೋಸ್ಟ್ ಮಾಡಿದವನ ವಿರುದ್ಧ ಮತ್ತೊಂದು ಸುಮೋಟೋ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್, ವಾಟ್ಸ್ ಅಪ್, ಇನ್ಸ್ಟಾಗ್ರಾಮ್ ಮೊದಲಾದ ಸಾಮಾಜಿಕ ಜಾಲತಾಣದ ಮೇಲೆ ಮಾನಿಟರಿಂಗ್ ಮಾಡುವ ಸೆಲ್ ನಿಂದ ಯಾರು ಯಾರು ಏನೇನು ಪೋಸ್ಟ್ ಮಾಡ್ತಾರೆ ಅವರ ಮೇಲೆ ಹದ್ದಿನ ಕಣ್ಣು ಇಡಲಾಗುತ್ತದೆ.
ಸೋಶಿಯಲ್ ಮೀಡಿಯಾವಾದ ವಾಟ್ಯಪ್ ನಲ್ಲಿ ನಿಹಾಲ್ ಎಂಬು ವ್ಯಕ್ತಿಯು ತನ್ನ ವಾಟ್ಸಪ್ ಸ್ಟೇಟಸ್ ನಲ್ಲಿ ಶಿವಮೊಗ್ಗದಲ್ಲಿ, ಹತ್ಯೆಯಾದ ಹಿಂದೂ ಹರ್ಷನ ಬಗ್ಗೆ ಸ್ಫೋಟಸ್ ಹಾಕಿ ಕೊಂಡಿದ್ದನು. 24 ಸೆಕೆಂಡ್ ವಿಡಿಯೋ ಉರ್ದು ಭಾಷೆಯಲಿತ್ತು, ಅದರಲ್ಲಿ ಹರ್ಷನ ಬಾವ ಚಿತ್ರಕ್ಕೆ ಓಂ ಶಾಂತಿ ಎಂದು ಇತ್ತು.
ನಂತರ ಹರ್ಷ ಕೊಲೆಯಾದ ಸಂದರ್ಭದಲ್ಲಿ, ರಕ್ತಸಿಕ್ತವಾಗಿ ಬಿದ್ದಿದ್ದ ವಿಡಿಯೋವಿದ್ದು, ಉರ್ದು ಭಾಷೆಯಲ್ಲಿ ಇಸ್ಲಾಂ ಧರ್ಮವನ್ನು ದ್ವೇಶಿಸುವವರಿಗೆ ಇದೆ ಆಗುವುದು ಎಂಬ ವಿಡಿಯೋ ಇದ್ದು ವಿಡಿಯೋವನ್ನು ಆರೋಪಿ ನಿಹಾಲ್ ತನ್ನ ವಾಟ್ಸ್ ಪ್ ಸ್ಫೋಟಿಸ್ ಗೆ ಹಾಕಿಕೊಂಡು ಮತ್ತು ಇತರೆಯವರಿಗೆ ಶೇರ್ ಮಾಡಿರುವುದು ತಿಳಿದು ಬಂದಿದೆ.
ಒಂದು ಕೋಮಿನ ಜನರನ್ನು ಎತ್ತಿಕಟ್ಟುತ್ತಾ ಜನರನ್ನು ಉದ್ರಿಕ್ತಗೊಳಿಸಿ ಪ್ರೇರೇಪಿಸುತ್ತಾ ಸಮಾಜದ ಶಾಂತಿ ಕದಡುತ್ತಿರುವ ವಿಡಿಯೋದೊಂದಿಗೆ ಆರೋಪಿ ನಿಹಾಲ್ ವಾಸ್ಕ್ರಿಪ್ ಸ್ಟೇಟಸ್ ಹಾಕಿಕೊಂಡಿದ್ದ ಬಗ್ಗೆ ಸ್ಕ್ರೀನ್ ಶಾಟ್ ಪ್ರತಿಯನ್ನು ಪಡೆದು ಕೊಂಡ ಪೊಲೀಸರು ವಿಡಿಯೋವನ್ನು ಸಿಡಿ ಯಲ್ಲಿ ಡೌನ್ ಲೋಡ್ ಮಾಡಿ ಕೊಂಡು ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ-https://suddilive.in/archives/1325
