ಸ್ಥಳೀಯ ಸುದ್ದಿಗಳು

ಶಿವಮೊಗ್ಗದಲ್ಲಿ ಓರ್ವರಿಗೆ ಕೆಎಫ್ ಡಿ ಸೋಂಕು

ಸುದ್ದಿಲೈವ್/ಶಿವಮೊಗ್ಗ

ಮಂಗನ ಕಾಯಿಲೆ ಕುರಿತಂತೆ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಮೂರು ಜಿಲ್ಲೆಯಿಂದ ಇಬ್ಬರಿಗೆ ಜನರಿಗೆ ಕೆಎಫ್ ಡಿ ಕಾಯಿಲೆ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಒಬ್ಬರಿಗೆ ಪಾಸಿಟಿವ್ ಕಾಣಿಸಿಕೊಡಿದೆ ಎಂದು ಬುಲಿಟಿನ್ ತಿಳಿಸಿದೆ.

11 ಜಿಲ್ಲೆಯಲ್ಲಿ ಈ ಕೆಎಫ್ ಡಿಯ ಎಫೆಕ್ಟೆಡ್ ಜಿಲ್ಲೆಗಳಾಗಿವೆ.  11ರಲ್ಲಿ ಇವತ್ತು ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಎಫ್ ಡಿ  ಪಾಸಿಟಿವ್ ಕಾಣಿಸಿಕೊಂಡಿದೆ.  ಮತ್ತು ಶಿರಸಿ ಜಿಲ್ಲೆಯಲ್ಲಿ ಯಾವುದೂ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಬುಲಿಟಿನ್ ತಿಳಿಸಿದೆ.

ಇಂದು 210 ಜನರಲ್ಲಿ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 153 ಜನ ಶಿವಮೊಗ್ಗದ ಜಿಲ್ಲೆಯವರನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು ಒಬ್ವರಿಗೆ  ಸೋಂಕು ಪತ್ತೆಯಾಗಿದೆ. ಶಿರಸಿ ಜಿಲ್ಲೆಯಲ್ಲಿ 25 ಜನರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಯಾರಿಗೂ ಪಾಸಿಟಿವ್ ಕಾಣಿಸಿಕೊಂಡಿಲ್ಲ. ಚಿಕ್ಕಮಗಳೂರಿನ 27 ಜನರಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಓರ್ವರಿಗೆ ಸೋಂಕು ತಗುಲಿದೆ ಎಂದು ಬುಲಿಟಿನ್ ತಿಳಿಸಿದೆ.

ಜನವರಿ 1, 2024 ರಿಂದ ಇವತ್ತಿನ ವರೆಗೆ 3768 ಜನರನ್ನ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. 99 ಜನರಲ್ಲಿ ಸೋಂಕು ಪತ್ತೆಯಾಗಿದೆ. 70 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಲ್ಲಿ ಎರಡು ಸಾವಾಗಿದೆ. ಒಟ್ಟು 27 ಜನರಲ್ಲಿ ಸೋಂಕು  ಆಕ್ಟಿವ್ ಆಗಿದೆ.

Related Articles

Leave a Reply

Your email address will not be published. Required fields are marked *

Back to top button