ಸಿನಿಮಾ ಸುದ್ದಿಗಳು

ನಟ ಯಶ್ ರವರ 39 ನೇ ಹುಟ್ಟುಹಬ್ಬ-ನಗರದಲ್ಲಿ ಏನೇನು ನಡೆಯುತ್ತಿದೆ?

ಸುದ್ದಿಲೈವ್/ಶಿವಮೊಗ್ಗ

ನಟ ಯಶ್ ಹುಟ್ಟುಹಬ್ಬದ ಅಂಗವಾಗಿ ನಗರದ ವಿನೋಬ ನಗರದ ಶಿವಾಲಯ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಅಭಿಮಾನಿಗಳಿಂದ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಜರುಗಲಿದೆ.

ನಟ ಯಶ್ ಗೆ 39 ನೆ ಹುಟ್ಟು ಹಬ್ಬದ ಸಂಭ್ರಮ, ಇದರ ಅಂಗವಾಗಿ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ ಶಿವಾಲಯದ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದೆ.

ಅಭಿಮಾನಿಗಳ ಸಂಘ ಅಂಧರ ಮಕ್ಕಳ ಆಶ್ರಮಲ್ಲಿಯೂ ಸಹ ಹುಟ್ಟುಹಬ್ಬವನ್ನ ಆಚರಿಸಲಿದೆ. ಈಗಾಗಲೇ ಅಭಿಮಾನಿಗಳಿಂದ ಕೆಲ ಆಟೋಗಳ ಮುಂಭಾಗದ ಗ್ಲಾಜುಗಳಿಗೆ ನಟ ಯಶ್ ರವರ ಪೊಟೊ ಅಳವಡಿಸಿ ಹ್ಯಾಪಿ ಬರ್ತ್ ಡೇ ರಾಕಿಂಗ್ ಸ್ಟಾರ್ ಎಂದು ಅಭಿಮಾನ ಮೆರೆಯಲಾಗಿದೆ.

ಇದನ್ನೂ ಓದಿ-https://suddilive.in/archives/6352

Related Articles

Leave a Reply

Your email address will not be published. Required fields are marked *

Back to top button