ಸಿನಿಮಾ ಸುದ್ದಿಗಳು

ಕಾಂತಾರ ಫ್ರೀಕ್ವೆಲ್ ಪೋಸ್ಟರ್ ಬಿಡುಗಡೆ, ಅಬ್ಬಾ ಎಂಥಾ ಪೋಸ್ಟರ್ ಎಂದ ಸಂಸದರು!

ಸುದ್ದಿಲೈವ್/ಶಿವಮೊಗ್ಗ

ಬಹುನಿರೀಕ್ಷಿತ ಸಿನಿಮಾ ಕಾಂತರಾ-ಪ್ರೀಕ್ವೆಲ್​ ಟೀಸರ್​​​ ಔಟ್​ ಆಗಿದ್ದು, ರಿಲೀಸ್​ ಆದ ಕೆಲವೇ ನಿಮಿಷಗಳಲ್ಲಿ ಲಕ್ಷ-ಲಕ್ಷ ಜನರ ವೀಕ್ಷಣೆ ಮಾಡಿದ್ದಾರೆ. ಅದರಂತೆ ಶಿವಮೊಗ್ಗ‌ಲೋಕ ಸಭಾ ಸದಸ್ಯ ಬಿ.ವೈ.ರಾಘವೇಂದ್ರ ಫೇಸ್ ಬುಕ್ ಮತ್ತು ಟ್ವೀಟರ್ ನಲ್ಲಿ ಸಿನಿಮಾ ಪೋಸ್ಟರ್ ನ್ನ ಪೋಸ್ಟ್ ಮಾಡಿ ಅಬ್ಬಾ ಎಂಥಾ ಪೋಸ್ಟರ್! ಎಂದಿದ್ದಾರೆ.

ಆನೆಗುಡ್ಡ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ವೇಳೆಯೇ ಚಿತ್ರತಂಡ ಕಾಂತಾರಾ ಪ್ರೀಕ್ವೆಲ್​​ ಟೀಸರ್​ ರಿಲೀಸ್ ಮಾಡಿದೆ. ಆ‌ ಪೋಟಸ್ಟರ್ ನ್ನ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಬಿ.ವೈ.ರಾಘವೇಂದ್ರ ಅಬ್ಬಾ ಎಂತಹ‌ ಪೋಸ್ಟರ್! ಎಂದು ಉದ್ಘರಿಸಿದ್ದಾರೆ.

ನಿಗೂಢವಾಗಿಯೂ, ಕುತೂಹಲಕಾರಿಯಾಗಿಯೂ, ಆಕರ್ಷಕವಾಗಿಯೂ ಇದೆ. ಇವತ್ತು ಬಿಡುಗಡೆಯಾಗಿರುವ ಕಾಂತಾಂರ-2 ಸಿನಿಮಾ ಪೋಸ್ಟರ್ ಸಿನಿಮಾ ನೋಡಲು ಕಾತುರದಿಂದ ಕಾಯುವಹಾಗೆ ಮಾಡಿದೆ. ಕನ್ನಡವೂ ಸೇರಿದಂತೆ ಏಳು ಭಾಷೆಯಲ್ಲಿ ಬರುತ್ತಿದೆ. ಚಿತ್ರ ಯಶಸ್ವಿ ಕಾಣಲಿ ಎಂದು ಪೋಸ್ಟ್ ಮಾಡಿದ್ದಾರೆ.

ಒಂದು ಗಂಟೆಯಲ್ಲಿ ಫೇಸ್ ಬುಕ್ ನಲ್ಲಿ ಹಂಚಿಕೊಂಡ ಪೋಸ್ಟರ್ 41 ಶೇರ್ ಆಗಿದೆ. ಸಂಸದರ ಕಾಂತಾರ-2 ಎಂಬ ಪೋಸ್ಟ್ ಗೆ ಓರ್ವರು ಕಾಂತಾರ-2 ಅಲ್ಲ  ಕಾಂತಾರ-1 ಎಂದು ಕಾಮೆಂಟ್ಸ್ ಮಾಡಿದ್ದಾರೆ. ಆದರೆ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಅಂತ ಕಾಣುತ್ತೆ. ಕಾರಣ ಯಾವಾಗಲು ಚಿತ್ರ ಬಿಡುಗಡೆಯಾದಾಗ ಮೊದಲನೇ ಪಾರ್ಟ್  ಭಾಗ-1 ಎಂದು ನಂತರ ಬರುವ ಸಿನಿಮಾ  ಭಾಗ-2 ಆಗಲಿದೆ. ಆದರೆ ಈ ಚಿತ್ರ ಮೊದಲನೆಯದೇ ಭಾಗ-2 ಎಂದು ನಿರ್ದೇಶಕರು ತಿಳಿಸಿದ್ದು ನಂತರ ಬರುತ್ತಿರುವುದು ಭಾಗ-1 ಎಂದು ಹೇಳಿರುವುದು ಪ್ರಚಾರದ ಗಿಮಿಕ್ ಇದ್ದಂತೆ ಕಂಡು ಬರುತ್ತಿದೆ.

ಎನಿವೇ…! ಕಾಂತಾರ-2(ಸೀಕ್ವೆಲ್​) ಮುಹೂರ್ತ ಇದೇ ಆನೆಗುಡ್ಡದಲ್ಲಿ ನಡೆದಿತ್ತು. ಮತ್ತೊಂದು ಮ್ಯಾಜಿಕ್​​ ಮಾಡಲು ಕಾಂತಾರಾ-1 ಸಿನಿಮಾ ತೆರೆಗೆ ಬರಲಿದೆ. ಆನೆಗುಡ್ಡೆ ವಿನಾಯಕನ ಭಕ್ತರಾಗಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿ ಹಲವರು ಭಾಗಿಯಾಗಿದ್ದರು. ಕರಾವಳಿ ಭಾಗದಲ್ಲಿ ಇಷ್ಟಾರ್ಥ ಸಿದ್ದಿಗೆ ಹೆಸರಾದ ವಿನಾಯಕ ದೇಗುಲವಾಗಿದೆ. ಕಾಂತಾರಾ-1 ಸಿನಿಮಾ 7 ಭಾಷೆಗಳಲ್ಲಿ ಒಂದೇ ಬಾರಿ ತೆರೆಗೆ ಬರಲಿದೆ.

ರಿಷಬ್​ ಶೆಟ್ಟಿ ಟೀಸರ್​​​ ರಿಲೀಸ್​ ಸಂತಸ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. ಕಾಂತಾರದ ವಿಸ್ಮಯಗಳ ಪ್ರಪಂಚಕ್ಕೆ ಮತ್ತೊಮ್ಮೆ ಸ್ವಾಗತ, ಮೊದಲ ಅಧ್ಯಾಯದ ಫಸ್ಟ್ ಲುಕ್ ಇಲ್ಲಿದೆ. ಈ ಹೊಸ ಪಯಣಕ್ಕೆ ನಿಮ್ಮ ಹಾರೈಕೆ ಇರಲಿ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ-https://suddilive.in/archives/3783

Related Articles

Leave a Reply

Your email address will not be published. Required fields are marked *

Back to top button