ರಾಜಕೀಯ ಸುದ್ದಿಗಳು

ಈಶ್ವರಪ್ಪನವರನ್ನ ಬಂಧಿಸುವಂತೆ ಎನ್ ಎಸ್ ಯು ಐ ಪ್ರತಿಭಟನೆ

ಸುದ್ದಿಲೈವ್/ಶಿವಮೊಗ್ಗ

ದೇಶ ವಿಭಜನೆ ಹೇಳಿಕೆ ನೀಡಿರುವ ಸಂಸದ ಡಿಕೆ ಸುರೇಶ್ ಮತ್ತು ಅವರ ಹೇಳಿಕೆಯನ್ನ ಬೆಂಬಲಿಸಿದ ಶಾಸಕ ವಿನಯ್ ಕುಲಕರ್ಣಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ದೇಶದಲ್ಲಿ ಜಾರಿಗೊಳ್ಳಬೇಕು ಎಂದು ಹೇಳಿರುವ ಮಾಜಿ ಸಚಿವ ಈಶ್ವರಪ್ಪನವರನ್ನ ಬಂಧಿಸುವಂತೆ ಎನ್ ಎಸ್ ಯು ಐ ಆಗ್ರಹಿಸಿದೆ.

ಇಂದು ಸಂಜೆ ಶಿವಪ್ಪ ನಾಯಕ ವೃತ್ತದಲ್ಲಿ ಜಿಲ್ಲಾ NSUI ವತಿಯಿಂದ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಅಧಿಕಾರ ಕಳೆದುಕೊಂಡು ಅಸ್ವಸ್ಥರಾಗಿ ರಾಮನಗರ ಸಂಸದರಾದ ಡಿ ಕೆ ಸುರೇಶ್ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಅವೇಳನಕಾರಿ ಹೇಳಿಕೆ ಕೊಟ್ಟಿರುವ ಈಶ್ವರಪ್ಪ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟಿಸಿದರು.

ಅರೆಹುಚ್ಚ ಈಶ್ವಪ್ಪನವರನ್ನ ಬಂಧಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ರಮೇಶ್ ಹೆಗಡೆ, PLD ಬ್ಯಾಂಕ್ ಉಪಾಧ್ಯಕ್ಷರಾದ ವಿಜಯ್ ಕುಮಾರ್ , ಕಾಂಗ್ರೆಸ್ ಮುಖಂಡರಾದ ರಂಗೇ ಗೌಡ. ಪ್ರಭಾಕರ.ಸುಡುರು ಶಿವು,

ಅರುಣ್ ನಾಯ್ಡು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್, ಯುವ ಕಾಂಗ್ರೆಸ್ ಮುಖಂಡ ಮಧುಸೂದನ್, ಶಿವು ಮಲಗೊಪ್ಪ ಜಿಲ್ಲಾಧ್ಯಕ್ಷ ವಿಜಯಕುಮಾರ್ ಗ್ರಾಮಾಂತರ ಅಧ್ಯಕ್ಷ ಹರ್ಷಿತ್ ಗೌಡ, ಕಾರ್ಯಧ್ಯಕ್ಷ ರವಿ ಕಾಟಿಕೆರೆ , ಇನ್ನೂ ನೂರಾರು NSUI ಕಾರ್ಯಕರ್ತರು ಭಾಗಿಯಾಗಿದ್ದರು.

ಈಶ್ವರಪ್ಪನವರ ವಿರುದ್ಧ ದೂರು ದಾಖಲು

ಸಂಸದ ಮತ್ತು ಶಾಸಕರ ವಿರುದ್ಧ ಗುಂಡಿಕ್ಕಿ ಕೊಲ್ಲುವಂತೆ ಕಾನೂ‌ನು ಜಾರಿ ಮಾಡುವಂತೆ ಪ್ರಧಾನಿಗೆ ಮನವಿ ಮಾಡಿದ್ದ ಮಾಜಿಸಚಿವ ಈಶ್ವಪ್ಪನವರ ವಿರುದ್ಧ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹನುಮಂತು ಎಂಬುವರಿಂದ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/8745

Related Articles

Leave a Reply

Your email address will not be published. Required fields are marked *

Back to top button