ರಾಜಕೀಯ ಸುದ್ದಿಗಳು

ಕೆಎಫ್ ಡಿ ಜಿಲ್ಲೆಯಲ್ಲಿ ಒಂದು ಪ್ರಕರಣ ಪತ್ತೆ

ಸುದ್ದಿಲೈವ್/ಶಿವಮೊಗ್ಗ

ಮಂಗನ ಕಾಯಿಲೆ ಕುರಿತಂತೆ ಆರೋಗ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ಜಿಲ್ಲೆಯಲ್ಲಿ  ಕೆಎಫ್ ಡಿ ಪಾಸಿಟಿವ್ ಕಾಣಿಸಿಕೊಡಿದೆ.

ಆದರೆ 11 ಜಿಲ್ಲೆಯಲ್ಲಿ ಈ ಕೆಎಫ್ ಡಿ ಕಾಣಿಸಿಕೊಳ್ಳುತ್ತಿದ್ದು 11ರಲ್ಲಿ ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕೆಎಫ್ ಡಿ ಪಾಸಿಟಿವ್ ಕಾಣಿಸಿಕೊಂಡಿದೆ. ಚಿಕ್ಕಮಗಳೂರು ಮತ್ತು ಶಿರಸಿ ಜಿಲ್ಲೆಯಲ್ಲಿ ಒಂದು ಪ್ರಕರಣ ಕಾಣಿಸಿಕೊಂಡಿಲ್ಲ.
ಇಂದು 174 ಜನರಲ್ಲಿ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 138 ಜನ ಶಿವಮೊಗ್ಗದ ಜಿಲ್ಲೆಯವರನ್ನ ಪತೀಕ್ಷೆಗೆ ಒಳಪಡಿಸಲಾಗಿದ್ದು ಓರ್ವರಿಗೆ   ಸೋಂಕು ಪತ್ತೆಯಾಗಿದೆ. ಶಿರಸಿ ಜಿಲ್ಲೆಯಲ್ಲಿ 13 ಜನರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಚಿಕ್ಕಮಗಳೂರಿನ 14 ಜನರಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾರಿಗೂ ಸೋಂಕು ಪತ್ತೆಯಾಗಿಲ್ಲ.

ಇದರಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಜನವರಿ 1, 2024 ರಿಂದ ಇವತ್ತಿನ ವರೆಗೆ 3012 ಜನರನ್ನ ಕೆಎಫ್ ಡಿ ಪರೀಕ್ಷೆಗೆ ಒಳಪಡಿಸಲಾಗಿದೆ. 70 ಜನರಲ್ಲಿ ಸೋಂಕು ಪತ್ತೆಯಾಗಿದೆ. 41 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರಲ್ಲಿ ಎರಡು ಸಾವಾಗಿದೆ. ಒಟ್ಟು 18 ಜನರಲ್ಲಿ ಸೋಂಕು  ಆಕ್ಟಿವ್ ಆಗಿದೆ.

ಇದನ್ನೂ ಓದಿ-https://suddilive.in/archives/8739

Related Articles

Leave a Reply

Your email address will not be published. Required fields are marked *

Back to top button