ಕ್ರೈಂ ನ್ಯೂಸ್

ಚಕ್ರವರ್ತಿ ಸೂಲಿಬೆಲೆಯ ವಿರುದ್ಧ ಎಫ್ಐಆರ್-ಕುತೂಹಲ ಮೂಡಿಸಲಿದೆಯಾ ಸೂಲಿಬೆಲಿಯವರ ಫೆ.19ರ ಶಿವಮೊಗ್ಗ ಭೇಟಿ?

ಸುದ್ದಿಲೈವ್/ಶಿವಮೊಗ್ಗ

ವಾಗ್ಮಿ ಚಕ್ರವರ್ತಿ ಸೂಲಿಬೆಲಿ ವಿರುದ್ಧ ಎನ್ ಎಸ್ ಯು ಐ ಜಿಲ್ಲಾ ಅಧ್ಯಕ್ಷ ನಿನ್ನೆ ದೂರು ನೀಡಿದ ಹಿನ್ನಲೆಯಲ್ಲಿ ಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪರೀಕ್ಷಾ ವೇಳ ಪಟ್ಟಿಯಲ್ಲೂ  ಧಾರ್ಮಿಕ ಭಾವನೆಯನ್ನ‌ ಕೆರಳಿಸುವ ಪೋಸ್ಟ್ ಹಾಕಲಾಗಿದೆ ಎಂದು ಆರೋಪಿಸಿ ಎನ್ ಎಸ್ ಯುಐ ನಿನ್ನೆ ಜಯನಗರ ಠಾಣೆಗೆ ದೂರು ನೀಡಿತ್ತು‌

ಸಂಘಟನೆಯ ಜಿಲ್ಲಾಧ್ಯಕ್ಷ ವಿಜಯಕುಮಾರ್‌ ನೇತೃತ್ವದಲ್ಲಿ ನಿನ್ನೆ ನೀಡಲಾಗಿದ್ದ ದೂರಿನ ಅನ್ವಯ ಎಫ್ ಐ ಆರ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಎನ್‌ಎಸ್‌ಎಲ್‌ಸಿ ಪರಿಕ್ಷಾ ವೇಳಾಪಟ್ಟಿಯ ವಿಷಯವಾಗಿ ಜನರಲ್ಲಿ ಧಾರ್ಮಿಕ ಭಾವನೆಯನ್ನು ಕೆರಳಿಸುತ್ತಿರುವ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯ ವಿರುದ್ಧ ಎನ್ ಎಸ್ ಯು ಐ ಜಿಲ್ಲಾ‌ಘಟಕ ಜಯನಗರ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಿಸಿತ್ತು.
ಕರ್ನಾಟಕ ಸರ್ಕಾರವು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿಯನ್ನು ಹೊರಡಿಸಿದ್ದು, ಸದರಿ ಪಟ್ಟಿಯಲ್ಲಿ ದಿನಾಂಕ 01.03.2024ರ ಶುಕ್ರವಾರ ವಿಜ್ಞಾನ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2 ರಿಂದ 5.15 ಗಂಟೆಯ ವರೆಗೆ ನಿಗದಿ ಮಾಡಿರುತ್ತಾರೆ.

ಆ ದಿನ ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆಯು ಆರಂಭವಾಗುತ್ತಿದ್ದು ಬೆಳಗಿನ ಸಮಯದಲ್ಲಿ ಸದರಿ ಪರೀಕ್ಷೆಯು ಇರುವ ಕಾರಣ ಈ ರೀತಿ ಸಮಯವನ್ನು ಬದಲಿಸಲಾಗಿದೆ. ಉಳಿದ ಎಲ್ಲಾ ಪರೀಕ್ಷೆಗಳು ಸಹ ಬೆಳಗಿನ ಸಮಯಕ್ಕೆ ನಿಗದಿಪಡಿಸಾಗಿದೆ. ಇದನ್ನೆ ಬಂಡವಾಳ ಮಾಡಿಕೊಂಡ ಚಕ್ರವರ್ತಿ ಸೂಲಿಬೆಲೆ  ಸದರಿ ಪರೀಕ್ಷಾ ವೇಳಾಪಟ್ಟಿಯಲ್ಲಿ ದಿನಾಂಕ 1.03.2024ರ ಶುಕ್ರವಾರ ಪರೀಕ್ಷಾ ದಿನಕ್ಕೆ ನೋಡಿದ ತಕ್ಷಣ ಎದ್ದು ಕಾಣುವಂತೆ ಮಾಡಿ “KARNATAKA STATE 10 STANDARD EXAM TIME TABLE RELEASED. ALL THE EXAM IN THE MORNING SESSION BUT FOR FRIDAY, WHY ?, OH.. TIME FOR NAMAZ ?’ ಈ ರೀತಿ ಅನ್ಯ ಧರ್ಮವನ್ನು ಹಿಯಾಳಿಸಿ ಬರೆದಿದ್ದಾರೆ ಎಂದು ಆರೋಪಿಸಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕವಾಗಿ ಫೇಸ್‌ಬುಕ್‌ನಲ್ಲಿ ಹಾಕಿರುವ ಚಕ್ರವರ್ತಿ ಸೂಲಿಬೆಲೆಯವರು ಅನ್ಯ ಧರ್ಮದವರಿಗೆ ನೋವಾಗಲಿ, ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಮುಸಲ್ಮಾನರ ಧರ್ಮದ ಬಗ್ಗೆ ಕೆಟ್ಟ ಭಾವನೆ ಬರಲಿ ಎಂದು ಹಾಗೂ ಈ ಮೂಲಕ ಸರ್ಕಾರವು ಸಹ ಒಂದು ಧರ್ಮದ ವರವಿದೆ ಎಂಬ ಭಾವನೆ ಬರುವಂತೆ ಮಾಡಿ ಸಮಾಜದ ಅಶಾಂತಿಗೆ ಕಾರಣಿಭೂತರಾಗಿರುತ್ತಾರೆ ಎಂದು ದೂರಲಾಗಿದೆ.

ಎರಡನೇ ದೂರು

ವಾಗ್ಮಿ ಚಕ್ರವರ್ತಿ ಸೂಲಿಬೆಲೆಯ ವಿರುದ್ಧ ಶಿವಮೊಗ್ಗದಲ್ಲಿ ಎರಡನೇ ದೂರು ದಾಖಲಾಗುತ್ತಿರುವುದು. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಮಹಿಳಾ ಮುಖಂಡರು ದೂರು ದಾಖಲಿಸಿದ್ದರು.‌ ಮಹಿಳೆಗೆ ಅವಮಾನ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಈ ಪ್ರಕರಣ ಶಿವಮೊಗ್ಗದ ಕಾರ್ಯಕ್ರಮವೊಂದಕ್ಕೆ ಭಾಷಣಕಾರರಾಗಿ ಬಂದಿದ್ದ ಸೂಲಿಬೆಲಿಯರನ್ನ ಠಾಣ ಮೆಟ್ಟಿಲೇರುವಂತೆ ಮಾಡಿತ್ತು.

ಫೆ.19 ಕ್ಕೆ ಶಿವಮೊಗ್ಗಕ್ಕೆ ಸೂಲಿಬೆಲಿ

ಫೆ19 ರಂದು ಚಕ್ರವರ್ತಿ ಸೂಲಿಬೆಲೆ ನಮೋ ಭಾರತ್ ಕಾರ್ಯಕ್ರಮದ ಅಡಿಯಲ್ಲಿ ಶಿವಮೊಗ್ಗಕ್ಕೆ ಬರಲಿದ್ದಾರೆ. ಕಳೆದ ಬಾರಿ ಬಂದ ಚಕ್ರವರ್ತಿ ಸೂಲಿಬೆಲೆಯರನ್ನ ಠಾಣೆ ಮೆಟ್ಟಿಲೇರುವಂತೆ ಮಾಡಿದಂತೆ ಈ ಬಾರಿ ಜಯನಗರ ಪೊಲೀಸ್ ಠಾಣೆಯ ಮೆಟ್ಟಿಲೇರುವಂತೆ ಮಾಡಲಿದೆಯಾ ಕಾದು ನೋಡಬೇಕಿದೆ. ಹಾಗಾಗಿ ಫೆ.19 ರಂದು ಸೂಲಿಬೆಲಿಯವರ ಶಿವಮೊಗ್ಗ ಭೇಟಿ ಕುತೂಹಲ ಮೂಡಿಸಲಿದೆ.

ಇದನ್ನೂ ಓದಿ-https://suddilive.in/archives/8676

Related Articles

Leave a Reply

Your email address will not be published. Required fields are marked *

Back to top button