ಬಂದ್ ಗೆ ಶಿವಮೊಗ್ಗದಲ್ಲಿ ಇಲ್ಲ ರೆಸ್ಪಾನ್ಸ್-ಪ್ರತಿಭಟಿಸಿದ ಕಾರ್ಯಕರ್ತರು ಪೊಲೀಸರ ವಶಕ್ಕೆ

ಸುದ್ದಿಲೈವ್/ಶಿವಮೊಗ್ಗ

ರಾಜ್ಯಾದ್ಯಂತ ಕರ್ನಾಟಕ ಬಂದ್ ಕರೆಕೊಟ್ಟರೂ ಶಿವಮೊಗ್ಗದಲ್ಲಿ ಉತ್ತಮ ಪ್ರತಿಕ್ರಿಯೆ ಇಲ್ಲವಾಗಿದೆ. ಕೆಲ ಸಂಘಟನೆಗಳು ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರೂ ಸಹ ಎಂದಿನಂತೆ ಬಸ್ ಗಳ ಸಂಚಾರ ಆರಂಭವಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಬೆಳ್ಳಂಬೆಳಿಗ್ಗೆ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಾಟಾಳ್ ಮಂಜು ಮತ್ತು ಕಿರಣ್ ಕುಮಾರ್ ನೇತೃತ್ವದಲ್ಲಿ ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಮ್ಮದು, ನಮ್ಮದು ಕಾವೇರಿ ನಮ್ಮದು ಎಂದು ಕರವೇ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಯಾವುದೇ ಕಾರಣಕ್ಕೂ ಬಿಡಬಾರದೆಂದು ಆಗ್ರಹಿಸಲಾಯಿತು.
ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಕರ್ನಾಟಕ ಬಂದ್ ಎಫೆಕ್ಟ್ ಇಲ್ಲವಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರೆ ನೀಡಿದ್ದ ಬಂದ್ ಶಿವಮೊಗ್ಗದಲ್ಲಿ ಯಾವ ಪರಿಣಾಮವೂ ಬೀರಿಲ್ಲ
ಶಿವಮೊಗ್ಗದಲ್ಲಿ ಬಂದ್ ಗೆ ಇಲ್ಲ ಯಾವುದೇ ರೆಸ್ಪಾನ್ಸ್ ಇಲ್ಲ. ಎಂದಿನಂತೆ ಸಂಚರಿಸುತ್ತಿರುವ ಖಾಸಗಿ, ಸರ್ಕಾರಿ ಬಸ್ ಗಳು ಸಂಚರಿಸುತ್ತಿವೆ.ಎಂದಿನಂತೆ ಆಟೋಗಳು, ಖಾಸಗಿ ವಾಹನಗಳ ಸಂಚಾರ ಮುಂದುವರೆದಿದೆ. ಶಿವಮೊಗ್ಗದಲ್ಲಿ ಎಂದಿನಂತೆ ಜನಜೀವನ ಮುಂದುವರೆದಿದೆ.ಅಂಗಡಿ, ಮುಂಗಟ್ಟುಗಳೆಲ್ಲಾ ಸಂಪೂರ್ಣ ಓಪನ್ ಆಗಿವೆ.
ಇದನ್ನೂ ಓದಿ-https://suddilive.in/2023/09/28/ಸಾವರ್ಕರ್-ಬಾವುಟ-ಹಿಡಿದು-ಕು/
