ರಾಜಕೀಯ ಸುದ್ದಿಗಳು

ಕಳ್ಳ ಯಾವತ್ತಿದ್ರು ಕಳ್ಳನೇ-ಹೀಗಂತ ಈಶ್ವರಪ್ಪ ಜರಿದಿದ್ದು ಯಾರಿಗೆ?

ಸುದ್ದಿಲೈವ್/ಶಿವಮೊಗ್ಗ

ಉಪಮುಖ್ಯಮಂತ್ರಿ ಅವರ ಪ್ರಕರಣವನ್ನ ಸಿಬಿಐನಿಂದ ಹಿಂಪಡೆಯಲು ತೀರ್ಮಾನಿಸಿರುವುದು ಬಿಜೆಪಿ ನಾಯಕರಿಗೆ ಪ್ರಬಲ ಅಸ್ತ್ರದೊರೆತಂತಾಗಿದೆ. ಕಾಂಗ್ರೆಸ್ ನ ಈ ತೀರ್ಮಾನಕ್ಕೆ  ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಈಶ್ವರಪ್ಪ ಡಿಕೆಶಿ ಸಿಬಿಐ ಕೇಸನ್ನ ಸಚಿವ ಸಂಪುಟ ವಾಪಸ್ ತಗೊಂಡಿರೋದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಕಳ್ಳ ಎಂದಿದ್ದರೂ‌ ಕಳ್ಳನೇ. 135 ಸೀಟ್ ಬಂದಿದೆ ಅಂತಾ ಮಾಡು ಬಾರದ್ದನ್ನೆಲ್ಲಾ ಮಾಡ್ತಿದ್ದಾರೆ ಎಂದು ಗರಂ ಆಗಿದ್ದಾರೆ.

23 ಕೋಟಿ ಇದ್ದ ವರಮಾನ 163 ಕೋಟಿಗೆ ಹೆಚ್ಚಳವಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಿಬಿಐಗೆ ಕೊಟ್ಟಿದ್ದರು. ನ್ಯಾಯಾಲಯಕ್ಕೆ ಹೋದ್ರು ನ್ಯಾಯಾಲಯ ತಿರಸ್ಕಾರ ಮಾಡ್ತು. ಇದು ಇಡಿ ದೇಶಕ್ಕೆ ಗೊತ್ತು. ಸಿಬಿಐ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಕೇಡಿ ಸಿದ್ದು ಸಚಿವ ಸಂಪುಟ ಕಳ್ಳರ ಗುಂಪಾಗಿದ್ದು, ಕೇಡಿ ಸಿದ್ದು ಅವರ ದರೋಡೆಕೋರರ ತಂಡ ಕಾನೂನು ದುರುಪಯೋಗ ಮಾಡಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.

ಜಾರ್ಜ್ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಟ್ಟು‌ನಂತರ ಸಚಿವ ಸಂಪುಟಕ್ಕೆ ಸೇರಿದರು. ನನ್ನ ಮೇಲೆ ಆಪಾದನೆ ಬಂತು‌ ನಾನು ರಾಜೀನಾಮೆ ಕೊಟ್ಟೆ. ಸುಪ್ರೀಂ ಕೋರ್ಟ್ ತಜ್ಞರು ಹೇಳ್ತಿದ್ದಾರೆ. ಸಿಬಿಐಗೆ ತನಿಖೆಗೆ ವಹಿಸಲು ಅನುಮತಿ‌ ಇದೆ. ಆದರೆ ಹಿಂಪಡೆಯಲು ಅನುಮತಿ ಬೇಕಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಈ ವಿಷಯ ಗೊತ್ತಿಲ್ವಾ? ಡಿಕೆಶಿ ಪ್ರಕರಣ ವಾಪಸ್ ಪಡೆಯಬೇಕು ಅಂತಾ ಅಚ್ವುಕೊಟ್ಟು ಸಚಿವ ಸಂಪುಟ ಸಭೆಗೆ ಹೋಗಿಲ್ಲ. ಇದು ದೇಶದಲ್ಲೇ ದೊಡ್ಡ ಅಪರಾಧವಾಗಿದೆ. ಸಚಿವ ಸಂಪುಟ ದುರ್ಬಳಕೆ ‌ಮಾಡಿಕೊಳ್ಳುತ್ತಿರುವ ಮೊದಲ ವ್ಯಕ್ತಿ ಡಿಕೆಶಿ ಆಗಿದ್ದಾರೆ ಎಂದು ಕಾಂಗ್ರೆಸ್ ನಾಯಕರ ಮೇಲೆ‌ ಆರೋಪಗಳ ಸುರಿ ಮಳೆಗೈದಿದ್ದಾರೆ.

ನಮಗು ಮುಂದೆ ಇಂತಹ‌ ಸ್ಥಿತಿ ಬರಬಹುದು ಅಂತಾ ಅವರ ಕೇಂದ್ರದ ನಾಯಕರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಒಪ್ಪಿಕೊಂಡಿರಬಹುದು. ಸಿದ್ದರಾಮಯ್ಯ ಅವರಿಗೆ ಖುರ್ಚಿ ಮುಖ್ಯನಾ ಹೊರತು ನ್ಯಾಯವಲ್ಲ. ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಮಾಡುವ ನಾಯಕರಿಗೆ ಇದು ಗೊತ್ತಿಲ್ವಾ. ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕು. ದೇಶದಲ್ಲಿ ಕಾಂಗ್ರೆಸ್ ಅನ್ನು ಜನ ಕಿತ್ತು ಹಾಕಿದ್ದಾರೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಯಲ್ಲಿ ಮೋಸ ಮಾಡಿ ಅಧಿಕಾರಕ್ಕೆ ‌ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನ ಬುದ್ದಿ ಕಲಿಸುತ್ತಾರೆ ಎಂದು ವಾಗ್ದಾಳಿ ಮುಂದುವರೆಸಿದರು.

ಸಚಿವ ಸಂಪುಟಕ್ಕೆ ಬೆಲೆ ಇಲ್ಲ ಅಂತಾ ಇವರು ತೀರ್ಮಾನ ಮಾಡಿದ್ರು. ಸಂವಿಧಾನಕ್ಕೆ ಬೆಲೆ ಇದೆ ಅಲ್ಲಿ ಸರಿಯಾದ ತೀರ್ಪು ಬರುತ್ತದೆ. ಸಿಬಿಐ ತನಿಖೆ ಹಿಂಪಡೆಯುವುದನ್ನೇ ವಾಪಸ್ ಪಡೆಯಬೇಕು. ಸಚಿವ ಸಂಪುಟ ತೀರ್ಮಾನಿಸಿ ಕಾಂಗ್ರೆಸ್ ಗೂಂಡಾಗಳಿಗೆ ರಕ್ಷಣೆ ಕೊಡಲು ಮುಂದಾಗಿದೆ ಎಂದರು.

ಸಿಬಿಐ ತಪ್ಪಿತಸ್ಥನಲ್ಲ ಅಂದ್ರೆ ಡಿಕೆಶಿ ಡಿಸಿಎಂ ಅಲ್ಲ ಸಿಎಂ ಬೇಕಾದರೂ ಆಗಲಿ. ಕಳ್ಳ ಯಾವತ್ತು ಇದ್ದರೂ ಕಳ್ಳನೇ ಎಂದು ಡಿಕೆಶಿಯನ್ನ ಮತ್ತೊಮ್ಮೆ ಕುಟುಕಿದ್ದಾರೆ.

ಜಾತಿ ಜನಗಣತಿ‌ ವಿಚಾರ

9 ವರ್ಷದ ಹಿಂದೆ ಸಿದ್ದರಾಮಯ್ಯ ಜಾತಿ ಗಣತಿ ವರದಿ ಬಿಡುಗಡೆ ಮಾಡ್ತೀನಿ ಅಂದ್ರು ಕಾಂಗ್ರೆಸ್ ಮಾಡಲಿಲ್ಲ. ಆಗ ಮಾಡಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ. ಆಗ ಜಾತಿ‌ಜನಗಣತಿ‌ ವರದಿ ಬಿಡುಗಡೆ ಮಾಡಿದ್ದರೆ ಜಾತಿ ಜಾತಿ ನಡುವೆ ಸಂಘರ್ಷ ಆಗ್ತಿರಲಿಲ್ಲ. ಜಾತಿ ಜನಗಣತಿಯ ಸಂಘರ್ಷಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ ಎಂದು ಆರೋಪಿಸಿದರು.

ಮೂಲ ಪ್ರತಿ ಕಳೆದಿದೆ ಅಂತಾ ಸಿಎಂ ಹೇಳ್ತಾರೆ. ಮೂಲ ಪ್ರತಿ ಕಳೆದಿಲ್ಲ ಅಂತಾ ಪರಮೇಶ್ವರ್ ಹೇಳ್ತಾರೆ. ಹಾಗಾದರೆ ಯಾರು ಸರಿ ಯಾರು ತಪ್ಪು ಎಂದು ಜನ ತೀರ್ಮಾನಿಸಲಿ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button