ರಾಜಕೀಯ ಸುದ್ದಿಗಳು

ಮುಂದುವರೆದ ಮಾತಿನ ಸಮರ-ಅವರು ಯಾಕೆ ಬಗ್ಗಿ ನೋಡಲು ಬಂದಿದ್ದರು?ಎಸ್ ಪಿ ದಿನೇಶ್

ಸುದ್ದಿಲೈವ್/ಶಿವಮೊಗ್ಗ

ನೈರುತ್ಯ ಪದವೀಧರ ಕ್ಷೇತ್ರಕ್ಕೆ ಎಸ್.ಪಿ ದಿನೇಶ್ ಮತ್ತು‌ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಅವರ ನಡುವಿನ ಮಾತಿನ ಸಮರ ಮುಂದು ವರೆದಿದೆ. ಆಯನೂರು ಹೇಳಿದ್ದ ಜ್ಯೋತೀಷಿ, ಅವರ ಕಚೇರಿಯಲ್ಲಿರುವ ಫ್ಲೆಕ್ಸ್ ನಲ್ಲಿರುವ ಫೋಟೊಗಳ ಬಗ್ಗೆ, ಕೆಪಿಸಿಸಿಯಿಂದ ಚುನಾವಣೆಗೆ ಶಿಫಾರಸು ಆಗಿರುವ ಪತ್ರಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಯನೂರು ಮಂಜುನಾಥ್ ಅವರೇ ನಾನೇ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಅಭ್ಯರ್ಥಿ ಎಂಬ ಹೇಳಿಕೆ ವಿಡಂಬನಾತ್ಮಕವಾದುದ್ದು ಯಾಕೆಂದರೆ ಕೆಪಿಸಿಸಿಯು, ಎಐಸಿಸಿಗೆ ಬರೆದ ಪತ್ರದಲ್ಲಿ ನನ್ನ ಹೆಸರೇ ಮೊದಲಿದೆ. ಇಬ್ಬರ ಹೆಸರನ್ನ ಸೂಚಿಸಲಾಗಿದೆ.‌ಅದರಲ್ಲಿ ನನ್ನ‌ಹೆಸರೇ ಮೊದಲಿನಲ್ಲಿದೆ ಎಂದರು.

ಆಯನೂರು ಬಗ್ಗಿ ನೋಡಲು ಯಾಕೆ ಬಂದಿದ್ದರು?

ಗುರುಬಲ ಮತ್ತು ಕುರಬಲದ ಬಗ್ಗೆ ಮಾತನಾಡಿದ ದಿನೇಶ್ ಗ್ರಾಮೀಣ ಭಾಷೆಯಲ್ಲಿ ಕುರ ಎಂದರೆ ಗಾಯ ಅದನ್ನ ಆಯನೂರು ಬಗ್ಗಿ ನೋಡಲು ಯಾಕೆ ಬಂದಿದ್ದಾರೆ. ಈ ಬಗ್ಗೆ ಯಾರಿಗೂ ದೂರು ಕೊಡಲ್ಲ. ಹೆಚ್ ಸಿ ಯೋಗೀಶ್ ಗೆ ಹೂ ಇಸ್ ಯೋಗೀಶ್ ಎಂದಿರುವ ಬಗ್ಗೆ ಹಾಸ್ಯವಾಡಿದ ದಿನೇಶ್ ಅವರಿಗೆ ವಯಸ್ಸಿನ ಕಾರಣದಿಂದ ಮರುವಾಗಿದೆ. ಯಾಕೆಂದರೆ ಜೆಡಿಎಸ್ ನಲ್ಲಿ ಯೋಗೀಶ್ ಇದ್ದಾರೆ. ಅವರನ್ನ ನೆನಪಿಸಿಕೊಂಡು ಬಹುಶ ಕಾಂಗ್ರೆಸ್ ನ ಯೋಗೀಶ್ ನ್ನ ಮರೆತು ಹೂ ಇಸ್ ಯೋಗೀಶ್ ಎಂದು ಹೇಳಿರಬಹುದು ಎಂದು ತಿಳಿಸಿದರು.

ಪಕ್ಷ ಬಲವರ್ಧನೆ ಮಾಡಿರುವೆ

ನಾನು ಆರೋಪ ಮಾಡಿಲ್ಲ. ಅವರ ಆರೋಪಗಳಿಗೆ ನಾನು ಉತ್ತರಿಸಿರುವೆ. ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟ ಮೇಲೆ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಹಾಗಾಗಿ ಪಕ್ಷ ಗಟ್ಟಿ ನಿಲುವು ತೆಗೆದುಕೊಳ್ಳಲಿದೆ. 32 ವರ್ಷದ ಅನುಭವದಲ್ಲಿ ದಿನೇಶ್ ಯಾವ ಚುನಾವಣೆ ಗೆದ್ದಿಲ್ಲ ಎಂಬ ಆರೋಪ ವನ್ನ ತಳ್ಳಿಹಾಕಿದ ದಿನೇಶ್ ಚುನಾವಣೆಯಲ್ಲಿ ಹತ್ತಿರದ ಸೋಲಾಗಿದೆ. 16 ಸಾವಿರ ಮತವನ್ನ ಸಂಪಾದಿಸಿದ್ದೇನೆ.

ಜ್ಯೋತಿಷಿಯಾಗಿ ಹೇಳಿರಲಿಲ್ಲ

ನಾನು ಬಂದು ಆಯನೂರನ್ನ ಗೆಲ್ಲಿಸುತ್ತೀನಿ ಎಂದಿಲ್ಲ. ಅವರಿಗೆ ಗುರುಬಲ ಬಿಜೆಪಿಯಲ್ಲಿದ್ದಾಗ ಎಂದು ಹೇಳಿರುವೆ. ಅದಕ್ಕೆ ಅವರು ಜ್ಯೋತಿಷಿ ಯಾವಾಗ ಆದರು ಎಂದು ಟಾಂಗ್ ನೀಡಿದರು. ಜೆಡಿಎಸ್ ನಲ್ಲಿ ಸ್ಪರ್ಧಿಸಿದಾಗ‌ ಆಯನೂರು ಮಂಜುನಾಥ್ ಗೆ ಎಷ್ಟು ಮತ ಬಂತು. ಬಿಜೆಪಿಯಲ್ಲಿದ್ದಾಗ ಏನಾದ್ರು ಅಯನೂರು? ನಾಲ್ಕು ಮನೆಗಳಿಗೆ ಆಯ್ಕೆಯಾಗಿದ್ದರು. ಹಾಗಾಗಿ ನೇರವಾಗಿ ಅವರನ್ನ ಬಿಜೆಪಿಗೆ ಹೋಗಿ ಎಂದು ಹೇಳಲ್ಲ. ಜ್ಯೋತಿಷಿ ಆಗಿ ಹೇಳಿರಲಿಲ್ಲ. ಆದರೆ ಸತ್ಯಾಂಶ ಬಿಚ್ಚಿಟ್ಟಿದ್ದೇನೆ ಎಂದರು.

ಫ್ಲೆಕ್ಸ್ ನಲ್ಲಿ ಫೋಟೊ‌ ಹಾಕಲು‌ಮರೆತಂತೆ ನನ್ನ‌ಬಳಿ ಬಂದ ವ್ಯಕ್ತಿ ಬಂದಿರುವುದನ್ನ‌ ಮತೆತಿದ್ದಾರೆ. ಪಕ್ಷಕ್ಕೆ ಸೇರ್ಪಡೆಯ ವೇಳೆ ಅವರ ಸಹಾಯಕರು ಬಂದು ಮಾತನಾಡಿ ಅಡ್ಡಿಪಡಿಸಬಾರದು ಎಂಬ ಹೇಳಿಕೆಗೆ ಸರಿಯಾದ ಸಮಯದಲ್ಲಿ ಬಿಚ್ಚಿಡುವೆ ಎಂದರು.

ಕರೆ ಮಾಡಿ

ಅತಿಥಿ ಉಪನ್ಯಾಸಕರು 7353763555, 7353793555 ಈ ನಂಬರ್ ಗೆ ಕರೆ ಮಾಡಿದಲ್ಲಿ ಸರಿಯಾದ ನೋಂದಣಿ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.ನನ್ನ ಪತ್ರ ಹೋಗದೆ ಇದ್ದವರು ನೋಂದಣಿ ಫಟ್ಟಿಯಲ್ಲಿ ತಮ್ಮ‌ಹೆಸರು ಇದೆಯೋ ಇಲ್ಲವೋ ಎಂದು ಪರಿಶೀಲಿಸಬಹುದಾಗಿದೆ ಎಂದರು.

ಶ್ರೀಗಳಿಗೆ ಭಾರತ ರತ್ನ ಕೊಡಿ

ಸಿದ್ದಗಂಗಶ್ರೀಗಳಿಗೆ ಭಾರತ ರತ್ನ ಪ್ರಶಸ್ನಿ ನೀಡಬೇಕು.
ಪ್ರತಿದಿನ 10-15 ಸಾವಿರಮಕ್ಕಳಿಗೆ ದಾಸೋಹ ಮಾಡುತ್ತಿದ್ದ ಮಠದಲ್ಲಿ ಅನೇಕರು ಪ್ರಮುಖರು ದೇಶದ ವಿವಿಧ ಸ್ಥರಗಳಲ್ಲಿ ಸ್ಥಾನಪಡೆದುಕೊಂಡು ಗೌರವಯುತವಾಗಿ ಬದುಕುತ್ತಿದ್ದಾರೆ.

ಅಂತಹವರ ಬದುಕು ಹಸನಾಗಿಸಿದ ಸಿದ್ದಗಂಗಾ ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದ ಅವರು, ಅತಿಥಿ ಉಪನ್ಯಾಸಕರಿಗೆ ವಾರ್ಷಿಕ ಆರೋಗ್ಯ ವಿಮೆ, ಮಾಸಿಕ ರಜೆ, ಸೇವಾ ಭದ್ರತೆ. ಐತಿಹಾಸಿಕ ತೀರ್ಮಾನವನ್ನ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿದೆ. ವಿಧಾನ ಪರಿಷತ್ ನ ಮಾಜಿ ಸದಸ್ಯ ಪುಟ್ಟಣ್ಣನವರ ಶ್ರಮ ಇದರಲ್ಲಿ ಹೆಚ್ಚಿದೆ. ಅವರಿಗೆ ಅಭಿನಂದನೆಗಳು ಎಂದರು.

ಅತಿಥಿ ಉಪನ್ಯಾಸಕರ ವೇತನದಲ್ಲಿ ವಿಳಂಬ

ಕುವೆಂಪು ವಿವಿಯ ಅತಿಥಿ ಉಪನ್ಯಾಸಕರ ಆಯ್ಕೆಯನ್ನ ವಿವಿಯೇ ಮಾಡ್ತಾ ಇತ್ತು. ಇತ್ತೀಚಿನ ದಿನಗಳಲ್ಲಿ ಕುಲಸಚಿವರು ಖಾಯಂ‌ ಆಗಿಲ್ಲ. ಉನ್ನತ ಶಿಕ್ಷಣ ಸಚಿವರನ್ನ ನಾವು ಭೇಟಿಯಾಗಿ ಕುಲಸಚಿವರನ್ನ‌ ನೇಮಿಸಲು ಒತ್ತಾಯಿಸಲಾಹಿದೆ.

ಯಾವ ಅಧಿಕಾರಿಗಳು ವಿವಿಗೆ ಬರುತ್ತಿಲ್ಲ. ಸೀನಿಯರ್ ಪ್ರೊಫೆಸರ್ ನ್ನ ಕುಲಸಚಿವರನ್ನಾಗಿ ಮಾಡಲಾಗುತ್ತಿತ್ತು. ಈಗ ಸರ್ಕಾರಕ್ಕೆ ಈಗಿನ ಕುಲಸಚಿವರು ಬರೆದಿದ್ದಾರೆ. ಬಜೆಟ್ ಸ್ಯಾಕ್ಷನ್ ಗೆ ಸರ್ಕಾರಕ್ಕೆಕಳುಹಿಸಲಾಗಿದೆ.ಖಾಯಂ ಕುಲಸಚಿವರು ಇಲ್ಲದ ಕಾರಣ ಇಂಟರ್ನಲ್ ಹಣ ಸಿಗುತ್ತಿಲ್ಲ. ಹಾಗಾಗಿ ಅತಿಥಿ ಉಪನ್ಯಾಸಕರಿಗೆ ಮೂರು ತಿಂಗಳು ಸಂಬಳ ವಿಳಂಭವಾಗುತ್ತಿದೆ ಎಂದರು

ಸುದ್ದಿಗೋಷ್ಠಿಯಲ್ಲಿ ರಾಜಶೇಖರ್, ರೆಷ್ಮಾ, ಮಾಜಿ ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ, ರಂಗೇಗೌಡ, ವಿಶ್ವನಾಥ್ ಕಾಶಿ, ಕೆ.ರಂಗನಾಥ್, ಮಧುಸೂಧನ್, ಎನ್ ಎಸ್ ಯುಐನ ಚೇತನ್ ಗೌಡ, ಯುವ ಕಾಂಗ್ರೆಸ್ ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/8435

Related Articles

Leave a Reply

Your email address will not be published. Required fields are marked *

Back to top button