ರಾಗಿಗುಡ್ಡದಲ್ಲಿ ಒಂದೇ ಒಂದು ಮುಸ್ಲೀಂ ಮನೆಯ ಮೇಲೆ ದಾಳಿಯಾಗಿಲ್ಲ-ಗಲಭೆ ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಈದ್ ಹಬ್ಬದ ಮೆರವಣಿಗೆಯ ವೇಳೆ ಹಿಂದೂ ಮನೆಗಳ ಮೇಲೆ ನಡೆದ ದಾಳಿಯ ಬಗ್ಗೆ ಇಂದು ಭೇಟಿನೀಡಲಾಗಿದ್ದು ಪೂರ್ವ ನಿಯೋಜಿತ ಕೃತ್ತವೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತ್ಯಕ್ಷ ದರ್ಶಿಗಳ ಮಾಹಿತಿ ಪಡೆದಿದ್ದೇನೆ.ಕಾಂಗ್ರೆಸ್ ಸರ್ಕಾರ ಬಂದಮೇಲೆ, ರಾಜ್ಯದ ಐದಾರು ಕಡೆಗಳಲ್ಲಿ ಘಟನೆ ನಡೆದಿದೆ. ರಾಗಿಗುಡ್ಡದ ಗಲಭೆಯನ್ನ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಈದ್ ಮೆರವಣೆಗೆ ಮೊದಲು ಗಣೇಶ ಚತುರ್ಥಿ ನಡೆದಿದ್ದವು. ಶಾಂತಿ ರೀತಿಯಲ್ಲಿ ಮೆರವಣಿಗೆ ನಡೆದಿದೆ. ರಾಗಿಗುಡ್ಡದಲ್ಲಿ ಗಣೇಶೋತ್ಸವ ನಡೆದ ಮೇಲೆ ಈದ್ ಮೆರವಣಿಗೆ ಮಾಡಲಾಗಿದೆ. ಈದ್ ಮೆರವಣಿಗೆಯ ವೇಳೆ ಟಿಪ್ಪು, ಔರಂಗ ಜೇಬ್, ಅಖಂಡ ಭಾರತದ ಕಟೌಟ್ ನಿರ್ಮಿಸಿ ಸಾಬರ ಸಾಮಾಜ್ಯ ಎಂದು ಉಲ್ಲೇಖಿಸಲಾಗಿದೆ. ಇದು ಹಿಂದೂಗಳನ್ನಕೆರಳಿಸಲು ಹಾಕಲಾಗಿದೆ. ಇದನ್ನ ತೆರವುಗೊಸಲಿಸುವಲ್ಲಿ ಪೊಲೀಸ್ ಇಲಾಖೆ ವೈಫಲ್ಯವಾಗಿದೆ. ಎಂದು ಗುಡುಗಿದರು.
ಗಲಭೆ ನಡೆದಾಗ ಪೊಲೀಸ್ ಸಂಖ್ಯ ಕಡಿಮೆ ಇತ್ತು. ಇಲ್ಲಿಯ ಪೊಲೀಸ್ ವರಿಷ್ಠಾಧಿಕಾರಿಗಳ ಮೇಲೆ ಕಲ್ಲುತೂರಲಾಗಿದೆ. ಪೊಲೀಸರಿಗೆ ರಕ್ಷಣೆ ಇಲ್ಲವಾಗಿದೆ. ಇಲ್ಲಿ ಪೊಲೀಸ್ ವೈಪಲ್ಯ ಎದ್ದು ಕಾಣುತ್ತದೆ. ಟಾರ್ಗೆಟ್ ಮಾಡಿ ಹೊಡೆಯಲಾಗಿದೆ.ಗಣೇಶೋತ್ಸವದಲ್ಲಿ ಭಾಗಿಯಾದವರ ಹುಡುಗರ ಮೇಲೆ ಟರ್ಗೆಟ್ ಮಾಡಲಾಗಿದೆ. ಮಹಿಳೆಯರನ್ನ ಗುರುತಿಸಲಾಗಿದೆ. ರಕ್ಷಿಸಲು ಬಂದವರ ಮೇಲೆ ಮಾರಾಣಾಂತಿಕ ಹಲ್ಲೆಯಾಗಿದೆ ಎಂಬ ಮೂರು ಅಂವನ್ಶನ ಬಿಜೆಪಿ ರಾಜ್ಯಾಧ್ಯಕ್ಷರು ಪ್ರಸ್ತಾಪಿಸಿದರು.
ಪೂರ್ವ ನಿಯೋಜಿತ ಕೃತ್ಯ ಎನ್ಲುವುದರಲ್ಲಿ ಎರಡು ಮಾತಿಲ್ಲ. ಮೆರವಣಿಗೆಯಲ್ಲಿ ಮಹಿಳೆಯರನ್ನ ಬಳಸಿಕೊಂಡು ಮುಸ್ಲೀಂರು ಗಲಭೆ ಮಾಡಿದ್ದಾರೆ. ಮಹಿಳೆ ಮತ್ತು ವಯಸ್ಸಿನವರ ನೋಡಲಾಗಿಲ್ಲ. ಕ್ರಿಶ್ಚಿಯನ್ ಮತ್ತು ಹಿಂದೂ ಮನೆಗಳ ಮೇಲೆ ಕಲ್ಲುತೂರಲಾಗಿದೆ. ಮುಸ್ಲೀಂ ಮನೆಯ ಮೇಲೆ ಕಲ್ಲು ತೂರಲಾಗಿಲ್ಲ. ಹಿಂದೂ ಬಾಣಂತಿಯರ ಮೇಲೆ ಹಲ್ಲೆ ನಡೆದಿದೆ ಎಂದರು.
ಮಹಿಳೆರನ್ನ ರಕ್ಷಿಸಲು ಬಂದವರ ಮೇಲೆ ಕೇಸ್ ಹಾಕಲಾಗಿದೆ. ಕ್ರಿಮಿನಲ್ ಹಿನ್ನಲೆಯಿಲ್ಲದವರನ್ನ ಜೈಲಿಗೆ ಹಾಕಲಾಗಿದೆ. ಕ್ರಿಶ್ಚಿಯನ್ ರನ್ನ ಜೈಲಿಗೆ ಕಳುಹಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಬಂದ ಮೇಲೆ ಹಿಂದೂಗಳನ್ನಟಾರ್ಗೆಟ್ ಮಾಡಿ ಜೈಲಿಗೆ ಕಳುಹಿಸಲಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ, ಮಂಗಳೂರು, ಭಟ್ಕಳದಲ್ಲಿ ಪಾಕಿಸ್ತಾನ್ ಜಿಂದಾಬಾದ ಎಂದು ಘೋಷಿಸಲಾಗಿತ್ಯು. ಯಾವ ಕ್ರಮವೂ ತೆಗೆದುಕೊಳ್ಳಲಾಗಲಿಲ್ಲ.
ನಮ್ಮ ಸರ್ಕಾರ ಪ್ರವೀಣ್ ನೆಟ್ಟಾರು, ಹರ್ಷನ ಹತ್ಯೆಯಾದಾಗ ಕಠಿಣ ಕ್ರಮ ತೆಗೆದುಕೊಂಡಿತು. ಶಾರೀಕ್ ಕುಕ್ಜರ್ ಬಾಂಬ್ ಬ್ಲಾಸ್ಟ್ ನಡೆದಾಗ ಎನ್ಐಗೆ ವಹಿಸಲಾಗಿತ್ತು. ಡಿಜೆ ಹಳ್ಳಿ ಕೆಜಿ ಹಳ್ಳಿ, ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರ ವಿರುದ್ದ ಸರ್ಕಾರ ಪ್ರಕರಣ ಹಿಂಪಡೆಯಲು ಮುಂದಾಗಿದೆ. ಹಿಂದೂಗಳನ್ನ ನಿರ್ನಾಮ ಮಾಡುತ್ತೇವೆ ಎಂದು ಓವೈಸಿ ಹೇಳಿದಂತೆ ಸ್ತಳೀಯ ಮುಸ್ಲೀಂ ಒಬ್ಬ ಗದರಿಸಿದ್ದಾನೆ. ಆತಂಕ ವಾದಿಗಳು ಇರುವ ಸಂಶಯವಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಮೊದಲಿಗೆ ಟಿಪ್ಪು, ಎರಡನೇ ಅಧ್ಯಾಯನ ಔರಂಗಜೇಬ್ ಇದರ ಹಿಂದೆ ಆತಂಕವಾದಿಗಳಿರುವ ಶಂಕೆ ಇದೆ. ಇವರಿಗೆ ಸಿದ್ದರಾಮಯ್ಯರ ಸರ್ಕಾರ ಬೆಂಬಲವಿದೆ. ಆರೋಪಿತರು ಯಾರಿದ್ದಾರೆ ಅವನ್ವೆಲ್ಲಾ ಬಂಧಿಸಬೇಕು. ಪುರುಷರಿಗಿಂತ ಮಹಿಳೆಯರ ಮೇಲೆ ಹಲ್ಲೆಯಾಗಿದೆ. ಸರ್ಕಾರ ಹಿಂದೂ ವಿರೋದಿ ಮಾತ್ರವಲ್ಲ ಮಹಿಳೆಯ ವಿರೋಧಿ ಸರ್ಕಾರವಾಗಿದೆ. ಪ್ರಕರಣ ಮುಚ್ಚುಹಾಕಲು ಕಾಂಗ್ರೆಸ್ ಯತ್ನಿಸಿದೆ ಹಾಗಾಗಿ ನ್ಯಾಯಾಂಗ ತನಿಖೆಯಾಗಬೇಕಿದೆ ಎಂದರು.
ಒಂದೇ ಒಂದು ಮುಸ್ಲೀಂಮನೆಯ ಮೇಲೆ ಕಲ್ಲು ತೂರಿಲ್ಲ. ಕೇಸ್ ಗಳಿಗಾಗಿ ಮುಸ್ಲೀಂ ಮನೆಯ ಮೇಲೆ ಕಲ್ಲುತೂರಲಾಗಿದೆ ಎಂದು ದಾಖಲಾಗಿದೆ ಎಂದು ಕಟೀಲ್ ಆರೋಪಿಸಿದರು. ಉಪಮುಖ್ಯಮಂತ್ರಿಗಳು ಯಾರ ಶಿಷ್ಯ, ಒಬ್ಬ ಭಯೋತ್ಪಾದಕ ನನ್ನಬ್ರದರ್ ಎಂದರು.
ಇದನ್ನೂ ಓದಿ-https://suddilive.in/archives/558
