ಸ್ಥಳೀಯ ಸುದ್ದಿಗಳು

ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘದ ಪದಾಧಿಕಾರಿಗಳ ಅವಿರೋಧ ಆಯ್ಕೆ

ಸುದ್ದಿಲೈವ್/ಶಿವಮೊಗ್ಗ

ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ ಶಿವಮೊಗ್ಗ ವೃತ್ತ ಶಿವಮೊಗ್ಗ ಸಂಘದ ಪದಾಧಿಕಾರಿಗಳ ಚುನಾವಣೆಯು ಸರ್ಕಾರಿ ನೌಕರರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ ಸಭಾಂಗಣದಲ್ಲಿ ನಡೆದಿದೆ. ಸಂಘದ ಪದಾಧಿಕಾರಿಗಳನ್ನ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ರಾಜು ಲಿಂಬು ಚವ್ಹಾಣ, ಕಾರ್ಯದರ್ಶಿಯಾಗಿ ರಶೀದ್ ಹೆಚ್ ಬೇಗ್. ಹಾಗೂ ಖಜಾಂಚಿ ಸ್ಥಾನಕ್ಕೆ ಶ್ರೀ ಅವಿನಾಶ್ ಜಿ ಇವರು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಆಯ್ಕೆಯಾದ ನಂತರ ಮಾತನಾಡಿದ ಅಧ್ಯಕ್ಷ ರಾಜ ಲಿಂಬೂ  ಚೌಹ್ಹಾಣ್ ಸಂಘದ ಅವಿರತ ಪ್ರಯತ್ನದಿಂದ ೬ನೇ ವೇತನ ಆಯೋಗದ ಶಿಫಾರಸ್ಸಿನಂತೆ ಗಸ್ತು ಅರಣ್ಯ ಪಾಲಕರ ವೇತನ ಶ್ರೇಣಿ ಬದಲಾವಣೆ ಮಾಡಲಾಗಿದೆ. ಸುಮಾರು ಹತ್ತು ವರ್ಷದ ಹೋರಾಟದ ಪ್ರಯುಕ್ತ ನಮ್ಮ ಅವಧಿಯಲ್ಲಿ ಅರಣ್ಯ ರಕ್ಷಕರ ಪದನಾಮ ಗಸ್ತು ಅರಣ್ಯ ಪಾಲಕರು ಎಂದು ಬದಲಾವಣೆ ಮಾಡಲಾಗಿದೆ. ಶಿವಮೊಗ್ಗ ವೃತ್ತದ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ವೃಂದದ ಜೇಷ್ಠತಾ ಪಟ್ಟಿಯನ್ನು ಪ್ರಕಟಣೆ ಮಾಡಿಸಲಾಗಿದೆ ಎಂದರು.

ಸದರಿ ಜೇಷ್ಠತಾ ಪಟ್ಟಿಯಂತೆ 35 ಜನ ಸದಸ್ಯರಿಗೆ ನಿಯಮ 42ರಡಿಯಲ್ಲಿ ಮುಂಬಡ್ತಿ ನೀಡಲು ಶ್ರಮಿಸಲಾಗಿದೆ.35 ಜನ ಉಪ ವಲಯ ಅರಣ್ಯಾಧಿಕಾರಿಗಳು ಇವರಿಗೆ ತಾತ್ಕಾಲಿಕವಾಗಿ ಸ್ಥಳ ನಿಯುಕ್ತಿ ಮಾಡಿಸಲು ಸಹಕಾರ ನೀಡಲಾಗಿದೆ.ನಿಯಮ 32 ರಡಿ 5 ಜನ ಸದಸ್ಯರಿಗೆ ಮುಂಬಡ್ತಿ ನೀಡಲಾಗಿದೆ ಎಂದು ತಿಳಿಸಿದರು.

ಈ ವರ್ಷ 2024ನೇ ಸಾಲಿನ ಗುರಿಗಳು

7ನೇ ವೇತನ ಆಯೋಗದಿಂದ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ವೇತನ ಶ್ರೇಣಿ ಬದಲಾವಣೆ ಮಾಡಿಸುವುದು(ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ)ವಾರದ ಭತ್ಯೆ ಪರಿಸ್ಕರಣೆ ಮಾಡಿಸುವುದು (ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.)

೬ನೇ ಕರ್ನಾಟಕ ಆಡಳಿತ ಸುಧಾರಣೆ ಆಯೋಗದ ವರದಿಯಂತೆ ೧೦೦% ರಷ್ಟು ಉಪ ವಲಯ ಅರಣ್ಯಧಿಕಾರಿ ಹುದ್ದೆಯನ್ನು ಮುಂಬಡ್ತಿಯಿಂದ ಭರ್ತಿ ಮಾಡಲು ಕ್ರಮ ವಹಿಸುವುದು. 2010ನೇ ಸಾಲಿನ ಉಳಿದ 8 ಜನ ಸದಸ್ಯರಿಗೆ ನಿಯಮ 32ರಲ್ಲಿ ಮುಂಬಡ್ತಿ ಸಹ ನೀಡಲು ಸಂಘ ಶ್ರಮಿಸಿದೆ ಎಂದರು.

ಇದನ್ನೂ ಓದಿ-https://suddilive.in/archives/8378

Related Articles

Leave a Reply

Your email address will not be published. Required fields are marked *

Back to top button