ವಿಐಎಸ್ ಎಲ್ ಶತಮಾನೋತ್ಸವದ ಕುರಿತು ಶಿಕ್ಷಣ ಸಚಿವರು ಹೇಳಿದ್ದೇನು ಗೊತ್ತಾ?

ಸುದ್ದಿಲೈವ್/ಶಿವಮೊಗ್ಗ

ವಿಎಸ್ ಐಎಲ್ ಶತಮಾನೋತ್ಸವ ಸಮಾರಂಭ ವಿಚಾರದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ ಕೊಂಚ ಸಂತೋಷ ಕೊಙಚ ಬೇಸರ ಹಾಗೂ ಕೊಂಚ ಮುಜುಗರನೂ ಆಗಿದೆ ಎಂದು ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದ ಕಾಙಗ್ರೆಸ್ ಕಚೇರಿಯಲ್ಲಿ ಮಾತನಾಡಿ, ಕಾರ್ಯಕ್ರಮ ತುಂಬಾ ಚನ್ನಾಗಿ ಆಯ್ತು. ಮನಸ್ಸಿಗೆ ಬೇಸರ ಸಹ ಆಯ್ತು. ವಿಶ್ವೇಶ್ವರಯ್ಯ ಮಾಡಿರುವಂತಹ ದೊಡ್ಡ ಕಾರ್ಖಾನೆ ಯಾವ ರೀತಿ ಉಳಿಸಿಕೊಳ್ಳಬೇಕು ಎಂಬ ಮುಜುಗರ ಆಯ್ತು ಎಂದರು.
ಸಂಭ್ರಮಕ್ಕೆ ಯಾರು ಯಾರು ಶ್ರಮ ಹಾಕಿದ್ದರೋ ಅವರೆಲ್ಲಾ ಬಂದಿದ್ದರು. ಆಸಕ್ತಿ ತಗೊಂಡು ಉಳಿಸುವ ಕೆಲಸ ಮಾಡಬೇಕು ಎಂದರು.
ಈ ಕಾರ್ಖಾನೆ ಕೇಂದ್ರ ಸರಕಾರದ ನಿಯಂತ್ರಣಕ್ಕೆ ಬರುತ್ತದೆನಾನೊಬ್ಬ ಉಸ್ತುವಾರಿ ಸಚಿವನಾಗಿ ವಿಐಎಸ್ ಎಲ್ ಉಳಿಸಿ ಬೆಳೆಸುವ ಪ್ರಯತ್ನ ಮಾಡ್ತೇನೆ. ಸಂಸದರು ಈ ಬಗ್ಗೆ ಕೇಂದ್ರ ಸರಕಾರದಲ್ಲಿ, ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದರು.
ಅದಕ್ಕೆ ಬೇಕಾಗುವ ಅವಶ್ಯಕತೆ ಇರುವ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಸಿಎಂ ಜೊತೆ ಸಚಿವರ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಸಿಎಂ 15 ಜನ ಸಚಿವರನ್ನು ಸಭೆಗೆ ಕರೆದಿದ್ದರು. ಲೋಕಸಭೆ ಚುನಾವಣೆಗೆ ನಾನು ಮಂಗಳೂರು ಉಸ್ತುವಾರಿ ಆಗಾಗಿ ಮುಂದಿನ ಬಾರಿ ನಮಗೆ ಕರೆಯುತ್ತಾರೆ ಎಂದರು.
ಮಾಜಿ ಸಚಿವ ವಿಶ್ವನಾಥ್ ಬಿಜೆಪಿ ಆಪರೇಷನ್ ವೇಳೆ ಕಳೆದ ಬಾರಿಯೇ 50 ಕೋಟಿ ನೀಡಿದ್ದರುಎಂಬ ಆರೋಪದ ಬಗ್ಗೆ ಮಾತನಾಡಿದ ಅವರು ಹೇಳಿರುವ ಬಗ್ಗೆ ನಾನು ವಿಶ್ಲೇಷಣೆ ಮಾಡಲ್ಲ. ಹಣ ತೆಗೆದುಕೊಂಡಿರುವವರು ಆ ಬಗ್ಗೆ ಉತ್ತರ ಕೊಡಬೇಕು ಎಂದರು.
ಬಹುತೇಕರಿಗೆ ಜನ ವಿಧಾನ ಸಭೆ ಚುನಾವಣೆಗೆ , ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಚುನಾವಣೆ ವ್ಯವಸ್ಥೆ ಎಲ್ಲಿಯವರೆಗೆ ಹೋಗಿದೆ ಅಂದ್ರೆ ಇಂತಹದರಲ್ಲಿ ನಾವು ರಾಜಕಾರಣ ಮಾಡ್ತಿದ್ದೇವೆ.ರಾಜಕಾರಣ ಮಾಡಿ ಅಧಿಕಾರ ಬಂದಾಕ್ಷಣ ಕೋಡು ಬಂದಿದೆ ಅಂತಾಲ್ಲ. ಘನತೆ ಗೌರವದಿಂದ ರಾಜಕಾರಣ ಮಾಡಬೇಕು. ಅದೇ ರೀತಿಯಲ್ಲಿ ಜನ ಮತ ಕೊಟ್ಟಿರುತ್ತಾರೆ.
ಜನ ಮತ ಮಾರಿಕೊಂಡಿರಲ್ಲ, ಘನತೆ ಗೌರವದಿಂದ ಕೊಟ್ಟಿರುತ್ತಾರೆ. ಆ ಗೌರವ ಉಳಿಸುವ ಕೆಲಸ ನಾವು ಮಾಡಬೇಕು. ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ವಿಚಾರಲ್ಲಿ ಅದು ಮಾಧ್ಯಮದ ಸೃಷ್ಟಿ, ಬಿಜೆಪಿಯವರು ಬರಿ ಸುಳ್ಳು ಹೇಳ್ತಿದ್ದಾರೆ. ನೀವು ಅದನ್ನೇ ಬಿತ್ತರಿಸುತ್ತಿದ್ದೀರ. ಕಾಂಗ್ರೆಸ್ ನಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದರು.
ನಮ್ಮನೆಯ ವಿಚಾರವನ್ನು ನಾವು ಸರಿ ಮಾಡಿಕೊಳ್ಳುತ್ತೇವೆ.ನಾವು ಗ್ಯಾರಂಟಿ ಯೋಜನೆ ಕೊಟ್ಟಿದ್ದೇವೆ. ಬೇಡಿಕೆ ಈಡೇರಿಸಿದ್ದೇವೆ. ಧೈರ್ಯದಿಂದ ಜನರ ಬಳಿ ಚುನಾವಣೆಗೆ ಹೋಗ್ತೇವೆ ಮಾನ, ಮರ್ಯಾದೆ, ಗೌರವ ಉಳಿಸಿಕೊಂಡಿದ್ದೇವೆ ಬಿಜೆಪಿಯವರು ಅದನ್ನು ಕಳೆದುಕೊಂಡಿದ್ದಾರೆ ಎಂದರು.
