ಕ್ರೈಂ ನ್ಯೂಸ್

ಟಿಂಬರ್ ಅಂಡ್ ಫರ್ನಿಚರ್ ಅಂಗಡಿಯ ಹಿಂಭಾಗದ ಕಟ್ಟಡದಲ್ಲಿ ಪತ್ತೆಯಾಯಿತು ಗೋಮೂಳೆ ಮತ್ತು ಚರ್ಮಗಳು

ಸುದ್ದಿಲೈವ್/ಭದ್ರಾವತಿ

ಭದ್ರಾವತಿಯಲ್ಲಿ ಹೊಳೆಯ ದಂಡೆ ಮೇಲಿರುವ ಅಡಿಕೆ ತೋಟದಲ್ಲಿರುವ ಸಿಮೆಂಟ್ ಬ್ಲಾಕ್ ನ ಕಟ್ಟಡದಲ್ಲಿ  ರಾಶಿ ರಾಶಿ ಗೋವಿನ ಮೂಳೆ ಪತ್ತೆಯಾಗಿವೆ. ಭದ್ರಾವತಿಯ ಓಲ್ಡ್ ಟೌನ್ ಪೊಲೀಸರ‌ ಖಡಕ್ ದಾಳಿಯಲ್ಲಿ ನಗದು ಸಹ ಪತ್ತೆಯಾಗಿದೆ.

ಹೊಳೆಹೊನ್ನೂರು ರಸ್ತೆಯಲ್ಲಿರುವ ಭದ್ರ ನದಿಯ ದಡದಲ್ಲಿ ಫರ್ನಿಚರ್ ಹೆಚ್ ಎಂ ಟಿಂಬರ್ ಅಂಡ್ ಫರ್ನಿಚರ್ ಅಂಗಡಿಯ ಹಿಂಭಾಗದ ಸಿಮೆಂಟ್ ಕಟ್ಟಡದಲ್ಲಿ  ಗೋವಿನ ಮೂಳೆ ಚರ್ಮಗಳಿವೆ ಎಂದು ದೇವರಾಜ್ ಅರಳಹಳ್ಳಿವರು ಪಿಎಸ್ ಐಗೆ ಇ ಮೇಲ್ ಮೂಲಕ ಮಾಹಿತಿ ನೀಡಿದ್ದರು.

ಮಾಹಿತಿ ಆಧಾರದ ಮೇರೆಗೆ ಪಿಎಸ್ ಐ ಶರಣಪ್ಪ ಹಾಂದ್ರಗಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಅಪಾರ ಪ್ರಮಾಣದ ಗೋ ಮಾಂಸ ಪತ್ತೆಯಾಗಿದೆ. ಒಂದು ಕೊಠಡಿಯಲ್ಲಿ ದನಗಳ ಬುರುಡೆ, ಗೋವಿನ ತಲೆ, ಗೋಮಾಂಸ, ಗೋವಿನ ಕೊಂಬು ಮತ್ತು ಗೋವಿನ ಚರ್ಮ, ಗೋವಿನ ಎಲುಬುಗಳನ್ನು ಸಂಗ್ರಹಿಸಿಟ್ಟಿರುವುದು ತಿಳಿದು ಬಂದಿದೆ.

ಈ ಕಟ್ಟಡದ ಮೋಮಿನ್ ಬಿನ್ ಬಿ ಆರ್ ದೀನ್ ಈತನು ಸಂಗ್ರಹಿಸಿದ್ದ ಒಟ್ಟು 20,000/-ರೂ ಮೌಲ್ಯದ ಸುಮಾರು 2 ರಿಂದ 3 ಟನ್ ತೂಕದ ಗೋವಿನ ಮೂಳೆಯ ಭಾಗಗಳನ್ನು ಮತ್ತು ಗೋವಿನ ಮಾಂಸ ಮಾರಾಟ ಮಾಡಿದ್ದರಿಂದ ಬಂದ 600/- ರೂ ನಗದು ಹಣವನ್ನು ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.‌

ಇದನ್ನೂ ಓದಿ-https://suddilive.in/archives/8351

Related Articles

Leave a Reply

Your email address will not be published. Required fields are marked *

Back to top button