ರಾಜಕೀಯ ಸುದ್ದಿಗಳು

ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ ಪ್ರಶಸ್ತಿ-ಡಿಹೆಚ್ ಶಂಕರ ಮೂರ್ತಿ ಹೇಳಿದ್ದೇನು?

ಸುದ್ದಿಲೈವ್/ಶಿವಮೊಗ್ಗ

ಎಲ್.ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ವಿಚಾರದ ಬಗ್ಗೆ ಮಾಜಿ ಸಭಾಪತಿ ಡಿ.ಹೆಚ್ ಶಂಕರ್ ಮೂರ್ತಿ ಪ್ರತಿಕ್ರಿಯಿಸಿದ್ದಾರೆ. ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಆಗಿದೆ. ಈ ಸುದ್ದಿ ಕೇಳಿದಾಗ ನನ್ನಂತಹ ಲಕ್ಷಾಂತರ ಕಾರ್ಯಕರ್ತರಿಗೆ ಸಂತೋಷ ಆಗಿದೆ. ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ರಾಮ ಮಂದಿರ ಕಟ್ಟಿದಷ್ಟೆ ಸಂತೋಷ ನಮಗಾಗಿದೆ.ದೆಹಲಿಗೆ ನಿರಾಶ್ರಿತರಾಗಿ ಬಂದಿದ್ದವರು ಅಡ್ವಾಣಿ ಕುಟುಂಬ. ಜನ ಸಂಘದ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ಅವರು ಬೆಳೆದು ಬಂದ ಹಾದಿಯೇ ಅದ್ಬುತ ಎಂದರು.‌

ಸೋತಾಗ ನಾವು ನೋಡುತ್ತಿದದ್ದು ಅಡ್ವಾಣಿ ಅವರನ್ನ 1984 ರ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಯಿತು. ಆಗ ಪಕ್ಷದ ಕಥೆ ಮುಗಿದೆ ಹೋಯ್ತು ಅಂದುಕೊಂಡಿದ್ದರು. ಅಂದಿನಿಂದ ಪಕ್ಷ ಕಟ್ಟಿದ ರೀತಿ ನಾವು ನೆನಪಿಸಿಕೊಳ್ಳಬಹುದು. ಭಾರತೀಯ ಜನತಾ ಪಾರ್ಟಿಯ ಅವಶ್ಯಕತೆ ಯಾಕಿದೆ ಅಂತ ತಿಳಿಸಿದ್ದರು ಎಂದರು.

ಚುನಾವಣಾ ಪ್ರಣಾಳಿಕೆಯಲ್ಲಿ ರಾಮ ಮಂದಿರ ಅಲ್ಲೇ ಕಟ್ಟುತ್ತೇವೆ ಎನ್ನುವ ವಿಷಯದಲ್ಲಿ ಅಡ್ವಾಣಿ ಪಾತ್ರ ಬಹಳ ಮುಖ್ಯವಾಗಿದೆ.ಭಾರತೀಯ ರಾಜಕೀಯ ಇತಿಹಾಸದಲ್ಲಿ ಅವರ ಪಾತ್ರ ಮುಖ್ಯವಾಗಿದೆ. ರಾಮ ರಥಯಾತ್ರೆ ಮಾಡಿದರು ಅದರ ಪರಿಣಾಮ ಏನ್ ಆಯ್ತು ಗೊತ್ತಾಗಿದೆ.ಎರಡು ಸೀಟ್ ಇದ್ದ ಪಕ್ಷ ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆಸಲು ಅವರ ಪಾತ್ರ ದೊಡ್ಡದಿದೆ ಎಂದರು.

ಅಡ್ವಾಣಿ ಅವರ ಹಿಂದಿ ಭಾಷಣವನ್ನು ನಾನೇ ಭಾಷಾಂತರಿಸುತ್ತಿದ್ದೆ.ಅಡ್ವಾಣಿ ಶಿವಮೊಗ್ಗಕ್ಕೆ ಬಂದಾಗ ನಮ್ಮ ಮನೆಗೆ ಬರುತ್ತಿದ್ದರು ಎಂದು ನೆನಪಿಸಿಕೊಂಡರು.

ಇದನ್ನೂ ಓದಿ-https://suddilive.in/archives/8347

Related Articles

Leave a Reply

Your email address will not be published. Required fields are marked *

Back to top button