ಕ್ರೈಂ ನ್ಯೂಸ್

ಬೆಳ್ಳಂ ಬೆಳಿಗ್ಗೆ ನಡೆದ ಚಿನ್ನಾಭರಣ ಕಳುವು ಪ್ರಕರಣ-ಮೂರು ಎಫ್ಐಆರ್ ದಾಖಲು

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ನಿನ್ನೆ ಬೆಳ್ಳಂ ಬೆಳಿಗ್ಗೆ ಮಲ್ಲೇಶ್ವರಂ ಗುಂಡಪ್ಪಶೆಡ್ ನಲ್ಲಿ ವಿಳಾಸ ಕೇಳಿಕೊಂಡು ಬಂದ ಬೈಕ್ ಸವಾರರು 35 ಗ್ರಾಂ ಚಿನ್ನಾಭರಣವನ್ನ ಕದ್ದುಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ ಸಂಗ್ರಹವಾಗಿದೆ.

ನಿನ್ನೆ ಕೇವಲ ಒಂದು ಕಡೆ ಮಾತ್ರ ಚಿನ್ನಾಭರಣ ವನ್ನ ಕದ್ದ ಪ್ರಕರಣ ದಾಖಲಾಗಿಲ್ಲ.  ಎರಡು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸರಗಳ್ಳತನ ವರದಿಯಾಗಿದೆ. ಜೊತೆಗೆ ಈ ಪ್ರಕರಣ ನಡೆಸಲು  ಬಳಸಿರುವ ಬೈಕ್ ಸಹ ಕಳುವು ಮಾಡಿಕೊಂಡು ಕೃತ್ಯಕ್ಕೆ ಬಳಸಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಶಿವಮೊಗ್ಗದ ಮಲ್ಲೇಶ್ವರಂ-ಗುಂಡಪ್ಪ ಶೆಡ್ ನಲ್ಲಿ ಬೆಳಿಗ್ಗೆ ದೇವರ ಪೂಜೆಗೆಂದು ಹೂವು ಕೊಯ್ದುಕೊಂಡು ಬರುವ ವೇಳೆ ಬೈಕ್ ನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಮಹಿಳೆಯ ಕುತ್ತಿಗೆಯಲ್ಲಿದ್ದ 35 ಗ್ರಾಂ ಚಿನ್ನಾಭರಣವನ್ನ ಕಿತ್ತುಕೊಂಡು ಹೋಗಿದ್ದಾರೆ.

ಪ್ರಿಂಟಿಂಗ್ ಪ್ರೆಸ್ ನ ವಿಳಾಸವನ್ನ ಹಿಂದಿ ಮತ್ತು ಕನ್ನಡ ಭಾಷೆಯ ಮಿಕ್ಸ್ ಮಾಡಿ ವಿಳಾಸ ಕೇಳಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನ ಕಿತ್ತುಕೊಂಡು ಹೋಗಿದ್ದಾರೆ. ಈ ಬಗ್ಗೆ ಸುಶೀಲಮ್ಮ ಎಂಬುದವರು ದೂರು ದಾಖಲಿಸಿದ್ದಾರೆ.

ಅದರಂತೆ ಆದಿಚುಂಚನಗಿರಿ ಶಾಲೆಯ ಬಳಿ ನಡೆದುಕೊಂಡು ಸರ್ಕ್ಯೂಟ್ ಹೌಸ್ ನಲ್ಲಿ ವಾಕ್ ಮಾಡಲು ಹೋಗುತ್ತಿದ್ದ ವೇಳೆ ಕೆಂಪು ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಬೈಕ್ ಸವಾರರ ಪೈಕಿ ಹಿಂಬದಿಯ ಸವಾರ ಮಹಿಳೆ ಮುಂದೆ ಹೋಗುತ್ತಿದ್ದಂತೆ ಹಿಂದಿನಿಂದ ಬಂದು ಚಿನ್ನಾಭರಣವನ್ನ ಕಿತ್ತುಕೊಂಡು ಹೋಗಿದ್ದಾನೆ.

ಬಲ್ಪ್ ಮಾದರಿಯ ಚಿನ್ನಾಭರಣವನ್ನ ಕಿತ್ತುಕೊಳ್ಳಲು ಮುಂದಾದ ಅಪರಿಚಿನಿಂದ ಸರವನ್ನ ಗಟ್ಟಿಯಾಗಿ ಹಿಡಿದ ಪರಿಣಾಮ ಕೇವಲ 8 ಗ್ರಾಂ ಚಿನ್ನಾಭರಣವನ್ನ‌ ಕಿತ್ತುಕೊಂಡು ಹೋಗಿದ್ದಾನೆ. ಲೋಕಮಾತೆ ಎಂಬುದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸುದ್ದಿಲೈವ್ ಓ

ಅದರಂತೆ ಗೋಪಾಳ ಗೌಡ ಬಡಾವಣೆಯ  ಕೃಷ್ಣ ಮಠದ ಬಳಿಯ ಪಾರ್ಕ್ ಬಳಿ ವಾಕ್ ಮಾಡುವಾಗ ಬೈಕ್ ನಲ್ಲಿ ಬಂದ ಅಪರಿಚಿತರಲ್ಲಿ ಹಿಂಬದಿ ಸವಾರ ಮಹಿಳೆಯ ಕುತ್ತಿಗೆಯಲ್ಲಿದ್ದ 25 ಗ್ರಾಂ ಚಿನ್ನಾಭರಣವನ್ನ ಕಿತ್ತುಕೊಂಡು ಹೋಗಿದ್ದಾನೆ.

ಈ ಪ್ರಕರಣ ನಡೆಸುವ ಮೊದಲು ಶೇಷಾದ್ರಿಪುರಂನ 5 ನೇ ತಿರುವಿನಲ್ಲಿದ್ದ ಸುಹೀಬ್ ಅಹಮದ್ ಎಂಬುವರ ಬಜಾಜ್ 200 ಎಸ್ ಎಸ್ ಬೈಕ್ ನ್ನ ಕದ್ದುಕೊಂಡು ಹೋಗಿ ಈ ಕೃತ್ಯ ನಡೆಸಿದ್ದಾರೆ.

ಈ ಬಗ್ಗೆ ಸುದ್ದಿಲೈವ್ ಗೆ ಮಾತನಾಡಿರುವ ಎಸ್ಪಿ ಮಿಥುನ್ ಕುಮಾರ್ ಚಿನ್ನಾಭರಣ ಕಳುವಿಗೆ ವಿಶೇಷ ತಂಡವನ್ನ ರಚಿಸಲಾಗಿದೆ. ಕೃತ್ಯಕ್ಕೆ ಬಳದಿರುವ ಬೈಕ್ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ-https://suddilive.in/archives/12168

Related Articles

Leave a Reply

Your email address will not be published. Required fields are marked *

Back to top button