ರಾಜಕೀಯ ಸುದ್ದಿಗಳು

ಸಧ್ಯಕ್ಕೆ ನಿಟ್ಟುಸಿರು ಬಿಟ್ಟ ಮಲಗೊಪ್ಪದ ಗ್ರಾಮಸ್ಥರು

ಸುದ್ದಿಲೈವ್/ಶಿವಮೊಗ್ಗ

ಶುಗರ್ ಫ್ಯಾಕ್ಟರಿಗೆ ಜಾಗ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಆಗ್ರಹಿಸಿ ಇಂದು ಮಲವಗೊಪ್ಪ, ಬೀರನಹಳ್ಳಿ ಸದಾಶಿವನಗರ, ಜಾವಳ್ಳಿಯಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಈ ಊರಿನಲ್ಲಿ ಸರ್ವೆಗೆ ಬಂದಿದ್ದ ಕಂದಾಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಗ್ರಾಮಸ್ಥರ ಪ್ರತಿಭಟನೆಯ ಬಿಸಿ‌ ಅಧಿಕಾರಿಗಳಿಗೆ ತಗುಲಿದ್ದರಿಂದ ಸರ್ವೆಯನ್ನ ರದ್ದುಪಡಿಸಲಾಗಿದೆ. ಎಸಿ ಸತ್ಯನಾರಾಯಣ್ ಇಂದು ಮಲವಗೊಪ್ಪಕ್ಕೆ ತೆರಳಿದಾಗ ಗ್ರಾಮಸ್ಥರು ತೀವ್ರ ವಿರೋಧ ಎದುರಿಸಿದ್ದಾರೆ. ಇದರಿಂದ ಸರ್ವೆ ಕಾರ್ಯವನ್ನ ರದ್ದು ಪಡಿಸಲಾಗಿದ್ದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸುವುದಾಗಿ ಎಸಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದಿದ್ದಾರೆ.

ಶುಗರ್ ಫ್ಯಾಕ್ಟರಿ ಜಾಗವನ್ನ ಸರ್ವೆ ಮಾಡಲು ಬಂದಿದ್ದ ಆರ್ ಐ ಮತ್ತು ವಿಎ ಗಳನ್ನ ಮುತ್ತಿಗೆ ಹಾಕಿದ ಗ್ರಾಮಸ್ಥರು ನೋಟೀಸ್ ನೀಡಿ ಸರ್ವೆ ಮಾಡಬೇಕು ಎಂದು ಆಗ್ರಹಿಸಿದ್ದರು. ನಂತರ ಅದು ಕಂದಾಯ ಗ್ರಾಮ ಮಾಡಲು ಸರ್ವೆ ನಡೆಯುತ್ತಿರುವುದಾಗಿ ಉಪವಿಭಾಗಾಧಿಕಾರಿ ಹೇಳಿದ್ದಾರೆ. ಇದರಿಂದ ಗೊಂದಲಗಳು ಮುಂದುವರೆದಿದೆ.

ಗ್ರಾಮಸ್ಥರ ಮುತ್ತಿಗೆಯಿಂದ ಕಂದಾಯ ಅಧಿಕಾರಿಗಳು ಪರಾರಿಯಾಗಿದ್ದರು.ಮಧ್ಯಾಹ್ನದ ವೇಳೆ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ(ಎಸಿ) ಸತ್ಯನರಾಯಣ್ ಸಧ್ಯಕ್ಕೆ ಸರ್ವೆ ಕಾರ್ಯ ಸ್ಥಗಿತಗೊಳಿಸಿರುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಮುಂದುವರೆಯುವುದಾಗಿ ಭರವಸೆ ನೀಡಿದ್ದಾರೆ

ಇದನ್ನೂ ಓದಿ-https://suddilive.in/archives/8284

Related Articles

Leave a Reply

Your email address will not be published. Required fields are marked *

Back to top button