ಶೈಕ್ಷಣಿಕ ಸುದ್ದಿಗಳು

ಸರ್ಕಾರಿ ಉರ್ದು ಶಾಲೆಗೆ ಕೆಲವರ ಆಕ್ಷೇಪ-ರಿಯಲ್ ಎಸ್ಟೇಟ್ ಮಾಫಿಯಾ ಕಾರಣವಿರಬಹುದೇ?

ಸುದ್ದಿಲೈವ್/ಶಿವಮೊಗ್ಗ

ನ್ಯೂ ಮಂಡ್ಲಿಯ ಸರ್ಕಾರಿ ಉರ್ದು ಶಾಲೆಯನ್ನ ಇಲಿಯಾಜ್ ನಗರದ ಸರ್ವೆ ನಂಬರ್ 138 ರಲ್ಲಿ ನೂತನ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಶಿಕ್ಷಣ ನೀಡುವ ರಿಯಾಜ್ ಅಹ್ಮದ್ ಅವರ ಹೋರಾಟಕ್ಕೆ ಕೆಲವರ ಆಕ್ಷೇಪಣೆ ಇದೆ. ಈ ಆಕ್ಷೇಪಣೆ ಎಷ್ಟು ಸರಿ ಎಷ್ಟು ತಪ್ಪು ಎನ್ನುವುದಕ್ಕಿಂತ ಒಂದು ಶಾಲೆಗೆ ಅಡ್ಡಿಪಡಿಸುವುದು ಸರಿನಾ ಎಂಬ ಚರ್ಚೆ ಆರಂಭವಾಗಿದೆ.

ಈ ಹಿನ್ನಲೆಯಲ್ಲಿ ಇಂದು ಶಾಸಕ ಚೆನ್ನಬಸಪ್ಪನವರ ಭೇಟಿ ಅರ್ಥಪೂರ್ಣವಾಗಿದೆ. ಶಾಸಕರು ಇಲಿಯಾಜ್ ನಗರದ ಸರ್ವೇನಂಬರ್ 138 ಕ್ಕೆ ಅಧಿಜಾರಿಗಳೊಂದಿಗೆ ಭೇಟಿಗೆ ಹೋದಾಗ ಕೆಲವರು ಆಕ್ಷೇಪಿಸಿದ್ದಾರೆ. ಇದರಲ್ಲಿ ನಮ್ಮ ತುಂಡು ಭೂಮಿಯೂ ಇದೆ ಎಂದು ಅಹವಾಲು ಹೇಳಿದ್ದಾರೆ.

ಶಾಸಕರು ಸಹ ಬಹಳ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಜಾಗ ಸರ್ಕಾರಿ ಜಾಗವಿದೆ.ಸರ್ಕಾರಿ ಜಾಗಕ್ಕೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟು ಭೂಮಿಯನ್ನ ಸರ್ವೆ ಮಾಡಿ ಕುಡಿಯುವ ನೀರಿನ ಟ್ಯಾಂಕಿ, ಮತ್ತು ಶಾಲೆ ನಿರ್ಮಿಸಲಾಗುವುದು. ಇದು ಖಾಸಗಿಯವರ ಕಾಮಗಾರಿ ಅಲ್ಲ.ಸರ್ಕಾರಿ ಜಾಗದಲ್ಲಿ ಎಲ್ಲರ ಸಹಭಾಗಿತ್ವದಲ್ಲಿ ಕಾಮಗಾರಿ ನಡೆಸಲಾಗುವುದು ಎಂದು ಖಡಕ್ ಆಗಿ ಹೇಳಿದ್ದಾರೆ.

ಖಾಸಗಿಯವರ ಜಾಗ ಒಂದಿಂಚು ಬೇಡ 1ಎಕರೆ 2 ಗುಂಟೆ ಜಾಗ ಸರ್ಕಾರಿ ಜಾಗ ಅದನ್ನ ಬಿಟ್ಟುಕೊಡುವ ಮಾತೇ ಇಲ್ಲ.ನಮ್ಮ ಜಾಗದಲ್ಲಿ ಶಾಲೆ ನಿರ್ಮಾಣ ಖಙಡಿತವಾಗಿ ನಡೆಯಲಿದೆ ಎಂದು ಸೂಚಿಸಿದರು. ಶಾಸಕರ ಈ ಖಡಕ್ ನಾತಿನ‌ನಂತರವೂ ರಿಯಾಜ್ ಮತ್ತು ಮುಹೀಬ್ ಅವರ ಜೊತೆ ಕೆಲವರು ಆಕ್ಷೇಪಿಸಿದ್ದಾರೆ.

ಈ ಆಕ್ಷೇಪಣೆಯಿಂದಲೇ ಶಾಲೆಯ ನಿರ್ಮಾಣ ನಿಧಾನಗತಿಯಲ್ಲಿ ನಡೆಯುತ್ತಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಆಕ್ಷೇಪಣೆ ಮಾಡುವರು ಕಾನೂನು ಹೋರಾಟ ಮಾಡಬೇಕೆ ವಿನಃ ಬೀದಿಯಲ್ಲಿ ಗುದ್ದಾಡಿದರೆ ನ್ಯಾಯ ದೊರಕುತ್ತದೆಯೇ?

ಇದನ್ನೂ ಓದಿ-https://suddilive.in/archives/4101

Related Articles

Leave a Reply

Your email address will not be published. Required fields are marked *

Back to top button