ಸ್ಥಳೀಯ ಸುದ್ದಿಗಳು

ಮಲವಗೊಪ್ಪದಲ್ಲಿ ಸರ್ವೆಗೆ ಬಂದ ಕಂದಾಯ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಪ್ರತಿರೋಧ

ಸುದ್ದಿಲೈವ್/ಶಿವಮೊಗ್ಗ

ಮಲವಗೊಪ್ಪದ ಸರ್ವೆ ನಂಬರ್ 71, 73, 50 ಮತ್ತು 55 ರಲ್ಲಿ ಜಾಗದಲ್ಲಿ ಶುಗರ್ ಫ್ಯಾಕ್ಟರಿ‌ ಜಾಗ ಬರುತ್ತದೆ ಎಂದು ಸರ್ವೆಗೆ ಇಳಿದಿದ್ದ ಆರ್ ಮತ್ತು ವಿಐಗಳನ್ನ ಗ್ರಾಮಸ್ಥರು ಹಿಡಿದು ಕೂರಿಸಿದ್ದು, ಗ್ರಾಮಸ್ಥರ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಆರ್ ಐ ಮತ್ತು ವಿಐಗಳು ಓಡಿಹೋಗಿದ್ದಾರೆ.

ಮಲವಗೊಪ್ಪದಲ್ಲಿರುವ ಸುಮಾರು 2000 ಕ್ಕೂ ಹೆಚ್ಚು ಮನೆಗಳನ್ನ ಸರ್ವೆ ಮಾಡಲು ಬಂದ ಆರ್ ಐ ವಿಜಯ ಕುಮಾರ್ ಮತ್ತು ವಿಎ ಪ್ರಸಾದ್ ಅವರನ್ನ ಗ್ರಾಮಸ್ಥರೆಲ್ಲಾ ಒಂದಾಗಿ ಓಡಿಸಿದ್ದಾರೆ.

ಶುಗರ್ ಫ್ಯಾಕ್ಟರಿ ಜಾಗವನ್ನ ರಾಜ್ಯ ಹೈಕೋರ್ಟ್ ಕಂದಾಯ ಇಲಾಖೆಯ ಜೊತೆಯಲ್ಲಿ ಸರ್ವೆ ಮಾಡಲು ಸೂಚಿಸಿದ್ದರ ಹಿನ್ನಲೆಯಲ್ಲಿ ಇಂದು ಬಂದ ಅಧಿಕಾರಿಗಳು ಗ್ರಾಮಸ್ಥರ ಪ್ರತಿರೋಧ ಎದುರಿಸಬೇಕಾಯಿತು.

ಖಾಲಿ ಜಾಗದಲ್ಲಿ ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳು ಸರ್ವೆ ಮಾಡಿತ್ತಿದ್ದ ವೇಳೆ ಗ್ರಾಮಸ್ಥರು ಆಕ್ಷೇಪಿಸಿದ್ದಾರೆ. ಮಲವಗೊಪ್ಪದ ರಾಮಮಂದಿರದ ಹಿಂಭಾಗದಲ್ಲಿ ಸರ್ವೆ ಮಾಡಲಾಗುತ್ತಿದೆ. ಹಣ ಇದ್ದವರು ಮನೆ ಕಟ್ಟಿಕೊಂಡಿದ್ದಾರೆ. ಬಡವರಾದ ನಾವು ಹಣ ಇಲ್ಲದಿದ್ದಕ್ಕೆ ಖಾಲಿ ಜಾಗವನ್ನ ಬಿಟ್ಟುಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಅಗ್ರಹಿಸಿದ್ದಾರೆ.

ಸ್ಥಳದಲ್ಲಿ ತುಂಗ ನಗರ ಪೊಲೀಸರು ಮೊಕ್ಕಂ ಹೂಡಿದ್ದಾರೆ. ಡಿಎಆರ್ ವ್ಯಾನ್ ಸಹ ಧಾವಿಸಿದೆ. ಅದರಂತೆ ಜಾವಳ್ಳಿ ಮತ್ತು ಬೀರನಹಳ್ಳಿಯಲ್ಲಿ ಸರ್ವೆಗೆ ಅಡ್ಡಿಪಡಿಸಿರುವುದಾಗಿ ತಿಳಿದು ಬಂದಿದೆ. ಮಲವಗೊಪ್ಪದಲ್ಲಿ ಸರ್ವೆ ನಡೆಸಲು ಬಂದವರಿಗೆ ಪ್ರತಿರೋಧ ತೋರುವಂತೆ ಮೈಕ್ ಅನೌನ್ಸ್ಮೆಂಟ್ ಗೂ ವಾಹನ ವ್ಯವಸ್ಥೆ ಮಾಡಿಕೊಳ್ಳುತ್ತಿರುವುದು ತಿಳಿದು ಬಂದಿದೆ.

ಇದನ್ನೂ ಓದಿ-https://suddilive.in/archives/8251

Related Articles

Leave a Reply

Your email address will not be published. Required fields are marked *

Back to top button