ಬೊಮ್ಮನ್ ಕಟ್ಟೆಯಲ್ಲಿ ಅಕ್ರಮ ಮರಳು ಫಿಲ್ಟರ್ ಆರೋಪ-ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಪ್ ಚುಪ್?

ಸುದ್ದಿಲೈವ್/ಶಿವಮೊಗ್ಗ

ನಗರದ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೊಮ್ಮನ ಕಟ್ಟೆ ಜಿ ಬ್ಲಾಕ್ ನ ಖಾಲಿ ಜಾಗದಲ್ಲಿ ಅಕ್ರಮ ಮರಳನ್ನ ಫಿಲ್ಟ್ರು ಮಾಡಿಕೊಂಡು ಬಂದು ಸಂಗ್ರಹಿಸಿ ಇಲ್ಲಿಂದ ಮರಳುಗಳನ್ನ ಸಾಗಿಸಲಾಗುತ್ತಿದ್ದು, ಇದನ್ನ ಸ್ಥಳೀಯರು ಅಕ್ರಮ ಮರಳು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಶಿವಮೊಗ್ಗದ ಹೊರವಲಯದಿಂದ ಬರುವ ಮರಳನ್ನ ಅಬ್ಬಲಗೆರೆ ಕೆರೆಯಲ್ಲಿ ಫಿಲ್ಟ್ರು ಮಾಡಿಕೊಂಡು ನಂತರ ಅಬ್ಬಲಗೆರೆಯಿಂದ ಬಿಮ್ಮನ್ ಕಟ್ಟೆ ಜಿ ಬ್ಲಾಕ್ ನ ಖಾಲಿ ಜಾಗಕ್ಕೆ ತಂದು ಶೇಖರಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬೆಳಗ್ಗಿನ ಜಾವ ಇಲ್ಲಿಂದ ಫಿಲ್ಟ್ರು ಮಾಡಿಕೊಂಡು ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಸಾಗಿಸಲಾಗುತ್ತಿದೆ. ಇದು ಅಕ್ರಮ ಮರಳು ಎಂಬುದಕ್ಕೆ ಬಲವಾದ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ. ಆದರೆ ಫಿಲ್ಟ್ರು ಮಾಡಿದ ಮರಳನ್ನ ಟ್ರ್ಯಾಕ್ಟರ್ ಒಂದಕ್ಕೆ ಸಂಗ್ರಹಿಸಿದ ಚಾಲಕನನ್ನ ಮಾತನಾಡಿಸಿದ ವಿಡಿಯೊವೊಂದು ವೈರಲ್ ಆಗಿದೆ.
ಇದರಲ್ಲಿ ಯಾರ ಒಡೆತನದ ವಾಹನ ಎಂದು ಹೇಳಲಾಗುತ್ತದೆ. ಆದರೆ ಚಾಲಕ ಯಾರ ಒಡೆತನದ ವಾಹನ ಎಂದು ಹೇಳುವುದಿಲ್ಲ. ಟ್ರ್ಯಾಕ್ಟರ್ ಮರಳಿಗೆ ಎಷ್ಟು ಎಂದರೆ 6 ಸಾವಿರ ರೂ. ಎಂದು ಹೇಳುತ್ತಾನೆ. ಇವೆಲ್ಲವೂ ಸ್ಥಳೀಯರು ಅಕ್ರಮ ಮರಳು ಎಂದು ಸ್ಥಳೀಯರು ಆರೋಪಿಸುತ್ತಾರೆ.
ಅಂದರೆ ಜಿಲ್ಲೆಯಲ್ಲಿ ಯಾವ ಕಾನೂನುಗಳಿಗೆ ದಂಧೆಕೋರರು ಬಗ್ಗುತ್ತಿಲ್ಲವೆಂಬ ಸ್ಪಷ್ಟ ಸಂದೇಶ ರವಾನೆಯಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆಯಲು ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗೆ ಕರೆ ಮಾಡಿದರೂ ಫೊನ್ ಸ್ವೀಜರಿಸುವ ಸೌಜನ್ಯವನ್ನು ಉಳಿಸಿಕೊಂಡಿಲ್ಲ. ಮಾಹಿತಿ ನೀಡಲು ಮಾಧ್ಯಮಗಳನ್ನ ಅಧಿಕಾರಿಗಳು ಮರೆಮಾಚಲಾಗುತ್ತಿದೆ ಎಂಬ ಅನುಮಾನವೂ ಇದರಲ್ಲಿ ಅಡಕವಾಗಿದೆ.
ಇದನ್ನೂ ಓದಿ-https://suddilive.in/archives/1439
