ರಾಗಿಗುಡ್ಡದಲ್ಲಿ ಗಲಭೆ ಶಾಸಕರ ಮೊದಲ ರಿಯಾಕ್ಷನ್

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದಲ್ಲಿ ಗಲಾಟೆ ಪ್ರಕರಣ ಕುರಿತಂತೆ ಶಾಸಕ ಚೆನ್ನಿಬಸಪ್ಪ ಪ್ರತಿಕ್ರಿಯಿಸಿದ್ದು ಸುದ್ದಿ ಬಂದ ತಕ್ಷಣ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಸುಮಾರು ಘಟನೆ ನಡೆದಿದೆ ಎಂದರು
ರಾಗಿಗುಡ್ಡದಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ಮಾಧ್ಯಮಗಳಿಗೆ ಮಾತನಾಡಿದ ಅವರು ಮೆರವಣಿಗೆ ಹೋಗುವ ವೇಳೆ ಹಿಂದೆಗಡೆಯಿಂದ ಬಂದು ಒಂದು ಗುಂಪು ಈ ರೀತಿ ಮಾಡಿದೆ.ನನಗೆ ಇರುವ ಮಾಹಿತಿ ಪ್ರಕಾರ ಎಸ್ ಪಿ ಗನ್ ಮ್ಯಾನ್ ಗೆ, ಒಬ್ಬರು ಪೊಲೀಸರಿಗೆ ಏಟು ಆಗಿದೆ ಅಂತ ಇದೆ. ಹಬ್ಬ ಶಾಂತಿಯುತವಾಗಿ ನಡೆದಿದೆ ಎಂದರು.
ಕೆಎ 35, ka ೧೯ ಯುಪಿಯಿಂದ ಗಾಡಿ ಏಕೆ ಬಂತು? ಎಂದು ಪ್ರಶ್ನಿಸಿದ ಅವರು, ಈ ರೀತಿಯ ವಾಹನಗಳನ್ನ ಹೊರಗೆ ಹೋಗದ ರೀತಿ ನೋಡಿಕೊಳ್ಳಬೇಕು. ಯಾರು ಹೊಡೆದ್ರು, ಯಾಕೆ ಹೊಡೆದ್ರು ಗೊತ್ತಾಗಬೇಕು. ಗಣಪತಿ ಮೆರವಣಿಗೆ, ಈದ್ ಮಿಲಾದ್ ಮೆರವಣಿಗೆ ಚನ್ನಾಗಿ ಆಗಿದೆ. ಮುಗಿದ ನಂತರ ಈ ರೀತಿ ನಡೆದಿದೆ ಎಂದರು.
ಅನೇಕ ಮನೆಗಳು, ವಾಹನಗಳು ಜಖಂ ಆಗಿದೆ. ಮನೆಯಲ್ಲಿದ್ದವರು ಭಯದ ವಾತಾವರಣ ಇದೆ. ಟಿಪ್ಪುವಿನ ಕಾರಣ ಬಲಿಷ್ಠವಾಗಿ ನಿಂತುಕೊಂಡು ಬಿಡ್ತು ಅನಿಸುತ್ತದೆ. ಪೊಲೀಸ್ ಇಲಾಖೆ ಬಂದೋಬಸ್ತ್ ಮಾಡಿದೆ. ಹೊರಗಡೆಯಿಂದ ಬಂದವರು ಯಾರೋ ಈ ರೀತಿ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.
ಸದ್ಯಕ್ಕೆ ಪರಿಸ್ಥಿತಿ ಶಾಂತಿಯುತವಾಗಿದೆ. ನಾಗರೀಕರು ಎದರಿಕೊಳ್ಳುವ ಅವಶ್ಯಕತೆ ಇಲ್ಲ. ನಿಮಗೆ ಏನಾದರೂ ತೊಂದರೆ ಆಗಿದ್ದರೆ ನಮ್ಮ ಗಮನಕ್ಕೆ ತನ್ನಿ. ನಾವು ನಿಮ್ಮ ಜೊತೆ ಇದ್ದೇವೆ. ಮೂರು ವರ್ಷದಿಂದ ಶಾಂತಿ ನಗರದಲ್ಲಿ ಇಂತಹ ಘಟನೆ ನಡೆಯುತ್ತಿದೆ. ಇಂತಹ ಘಟನೆ ಏನು ಹೊಸದಲ್ಲ ಎಂದರು.
ಮನೆಗೆ ನುಗ್ಗಿ ಹೊಡೆಯುತ್ತಾರೆ ಅಂದ್ರೆ ಇದು ಪೂರ್ವ ನಿಯೋಜಿತ ಕೃತ್ಯ ಅನಿಸುತ್ತದೆ. ಶಾಂತಿನಗರ ಶಾಂತಿಯುತವಾಗಿ ಇರುವಂತಹ ಕೆಲಸ ನಾವು ಮಾಡ್ತೇವೆ. ಎಲ್ಲರೂ ಧೈರ್ಯವಾಗಿರಿ ಯಾರು ಹೆದರಬೇಡಿ, ಯಾರೋ ಹೊರಗಡೆಯಿಂದ ಬಂದಿದ್ದಾರೆ ಅಂದ್ರೆ ಬಾಲ ಬಿಚ್ಚುವ ಕೆಲಸ ಮಾಡಬೇಡಿ ಎಂದರು.
ಇದನ್ನೂ ಓದಿ,-https://suddilive.in/2023/10/01/ರಾಗಿಗುಡ್ಡದಲ್ಲಿ-ಲಾಠಿ-ಚಾರ್/
