ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ವ್ಯಾನಿಟಿಬ್ಯಾಗ್ ನಿಂದ ಕಳುವು ಮಾಡಿದ್ದ ಮಹಿಳೆಯ ಬಂಧನ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್ ನಲ್ಲಿದ್ದ 22 ಗ್ರಾಂ ಬಂಗಾರದ ಸರವನ್ನ ಕಳವು ಮಾಡಿದ್ದ ಮಹಿಳೆಯೋರ್ವಳನ್ನ ದೊಡ್ಡ ಪೇಟೆ ಪೊಲೀಸರು ಬಂಧಿಸಿ ಬಂಗಾರದ ಸರವನ್ನ ವಶಕ್ಕೆ ಪಡೆದಿದ್ದಾರೆ.
ದಸರಾ ರಜೆ ಪ್ರಯುಕ್ತ ತನ್ನ ಹೆಂಡತಿ ಮಕ್ಕಳನ್ನು ದಾವಣಗೆರೆಗೆ ಕಳುಹಿಸಲು ದಿನಾಂಕ: 15-10-2023 ರಂದು ಸಂಜೆ 04-15 ಗಂಟೆಗೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಗೆ ಬಂದು ಪ್ಲಾಟ್ ಪಾರಂ ನಂ-08 ರಲ್ಲಿ ದಾವಣಗೆರೆ ಕಡೆ ಹೋಗುವ ಬಸ್ ಹತ್ತುವಾಗ ಜನ ಹೆಚ್ಚಿನ ಜನಸಂದಣಿ ಇದ್ದುದ್ದರಿಂದ ಪತಿ ಬಸ್ ಹತ್ತಿ ಸೀಟ್ ಹಿಡಿದು ಹೆಂಡತಿ ಮಕ್ಕಳನ್ನು ಬಸ್ ಹತ್ತಿಸಿ ದಾವಣಗೆರೆಗೆ ಕಳುಹಿಸಿಕೊಟ್ಟಿದ್ದರು,
ನಂತರ ಹೆಂಡತಿನಿಗೆ ಪೋನ್ ಮಾಡಿ ನ್ಯೂಮಂಡ್ಲಿ ಸರ್ಕಲ್ ಬೈಪಾಸ್ ರಸ್ತೆಯಲ್ಲಿ ಬಸ್ಸಿನಲ್ಲಿ ಹೋಗುವಾಗ ವ್ಯಾನಿಟಿ ಬ್ಯಾಗ್ ನ್ನು ಚೆಕ್ ಮಾಡಿದಾಗ ವ್ಯಾನಿಟಿ ಬ್ಯಾಗ್ ನಲ್ಲಿಟ್ಟಿದ್ದ ಸುಮಾರು 01,13,000/-ರೂ ಬೆಲೆಬಾಳುವ 22 ಗ್ರಾಂ ತೂಕದ ಒಂದು ಬಂಗಾರದ ನೆಕ್ಸಸ್, ಮತ್ತು 1 ಗ್ರಾಂ ತೂಕದ ಒಂದು ಜೊತೆ ಬಂಗಾರದ ಜುಮಕಿ ಕಳುವಾಗಿದ್ದನ್ನ ತಿಳಿಸಿದ್ದರು.
ಬಸ್ ಹತ್ತುವ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಅಂಜನ್ ಕುಮಾರ್, ಶ್ರೀನಿವಾಸ್, ಹಾಗು ಸಿಬ್ಬಂದಿಗಳಾದ ಪಾಲಾಕ್ಷನಾಯ್ಕ ಲಚ್ಚಾನಾಯ್ಕ, ಚಂದ್ರನಾಯ್ಕ ರಮೇಶ್ ನಿತಿನ್, ಸುಮಿತ್ರಾ ಬಾಯಿ ರವರನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ಮಂಜುನಾಥ ಬಡಾವಣೆ ನಿವಾಸಿಯಾಗಿರುವ ಆರೋಪಿ ತಾಹೀರಾ ರೋಹಿ ಕೊಂ ತಾಹೀರ್ ಅಹಮ್ಮದ್ 30 ವರ್ಷ ರವರನ್ನ ಬಂಧಿಸಲಾಗಿದೆ. 01,29,300/-ರೂ ಬೆಲೆಬಾಳುವ 22 ಗ್ರಾಂ ತೂಕದ ಒಂದು ಬಂಗಾರದ ನೆಕ್ಸಸ್, ಮತ್ತು ಒಂದು ಜೊತೆ ಬಂಗಾರದ ಜುಮಕಿ 11 ಗ್ರಾಂ ತೂಕದ ತೂಕದ ಬಂಗಾರದ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿತನನ್ನು ಪತ್ತೆ ಮಾಡಲು ಸತತ ಪ್ರಯತ್ನ ಮಾಡಿ ಆರೋಪಿತನನ್ನು ಬಂದಿಸಿದ್ದು ಸದರಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ರವರು ಅಭಿನಂದನೆ ಸಲ್ಲಿಸಿರುತ್ತಾರೆ.
ಇದನ್ನೂ ಓದಿ-https://suddilive.in/archives/2077
