ಕ್ರೈಂ ನ್ಯೂಸ್

ಎರಡು ಪ್ರತ್ಯೇಕ ಕಳುವು ಪ್ರಕರಣ-ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಕಳುವು ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ.ಹೊಸನಗರ ತಾಲುಕಿನ ನಗರ ಠಾಣ ವ್ಯಾಪ್ತಿಯ ಮೂಡುಗೊಪ್ಪ ನೂಲಿಗೆರೆ ಗ್ರಾಮದಲ್ಲಿ ನಡೆದ ಕಳುವು ಪ್ರಕರಣದಲ್ಲಿ ಮೂವರನ್ನ ಬಂಧಿಸಲಾಗಿದ್ದು, 4,65,000 ರೂ. ಮೌಲ್ಯದ 94 ಗ್ರಾಂ ಚಿನ್ನಾಭರಣ ಮತ್ತು ಮೊಬೈಲ್  ವಶಪಡಿಸಿ ಕೊಳ್ಳಲಾಗಿದೆ.

ಅದೇ ಶಿಕಾರಿಪುರ ಗ್ರಾಮದಲ್ಲಿ ಬಾಳೆಕೊಪ್ಪದ ಹನುಮಂತಪ್ಪ ನಾಯ್ಕರ ಮನೆಯಲ್ಲಿ ನಡೆದ ಕಳುವು ಪ್ರಕರಣದಲ್ಲಿ ಓರ್ವ ಆರೋಪಿಯನ್ನ ಬಂಧಿಸಿದ್ದು, 2 ಲಕ್ಷ ರೂ. ಹಣವನ್ನ ವಶಕ್ಕೆ ಪಡೆಯಲಾಗಿದೆ.

ಶಿವಮೊಗ್ಗ ಜಿಲ್ಲೆಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಗೊಪ್ಪ ನೂಲಿಗರೆ ಗ್ರಾಮದಲ್ಲಿ ರಾಜಮ್ಮ ಎಂಬುವರ  ಮನೆಯ ಹೆಂಚನ್ನ ತೆಗೆದು ಬಾಗಿಲಿನ ಬೀಗ ಒಡೆದು, ನಡೆದ ಕಳುವು ಪ್ರಕರಣ ಜ.29 ರಂದು ವರದಿಯಾಗಿತ್ತು.‌ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹೊಸನಗರ ಸಿಪಿಐ ಗುರಣ್ಣ  ನೇತೃತ್ವದಲ್ಲಿ, ನಗರ ಪೊಲೀಸ್ ಠಾಣೆಯ  ರಮೇಶ್,  ಮತ್ತು ಸಿಬ್ಬಂದಿಗಳಾದ ವೆಂಕಟೇಶ್, ಪ್ರವೀಣ್ ಕುಮಾರ್, ಕಿರಣ್ ಕುಮಾರ್, ವಿಶ್ವನಾಥ್, ಶಾಂತಪ್ಪ ರವರಗಳನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ತನಿಖಾ ತಂಡ ಆರೋಪಿತರಾದ  ನೂಲಿಗೆರೆ ಮೂಡುಗೊಪ್ಪದ 1) ಸುಹಾನ್ @ ಸೋನು, (21), 2) ಆಶೋಕ ಎನ್ .ಎಸ್, (24)  ಮತ್ತು 3) ಗಣೇಶ ಎನ್.ಎಲ್ @ ಗಣಿ (30) ಮೂವರನ್ನ ಬಂಧಿಸಿ ಆರೋಪಿತರಿಂದ ಪ್ರಕರಣದಲ್ಲಿ ಕಳುವಾದ ಅಂದಾಜು ಮೌಲ್ಯ 4,65,000/- ರೂಗಳ 94 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಒಂದು ಮೊಬೈಲ್ ಪೊನ್ ನನ್ನ ವಶಪಡಿಸಿಕೊಳ್ಳಲಾಗಿದೆ.

ಬಾಳೆಕೊಪ್ಪದಲ್ಲಿ ನಡೆದ ಘಟನೆ

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಕೊಪ್ಪ ಗ್ರಾಮದ ವಾಸಿ ಹನುಂತ ನಾಯ್ಕ್ ರವರು  ಬೆಳಿಗ್ಗೆ ಮನೆಗೆ ಬೀಗವನ್ನು ಹಾಕಿ , ಬೀಗದ ಕೀಯನ್ನು ಮನೆಯ ಮೇಲ್ಗಡೆ ಮೊಳೆಯಲ್ಲಿ ನೇತು ಹಾಕಿ ಶಿಕಾರಿಪುರದ ಆಸ್ಪತ್ರೆಗೆ ಹೋಗಿದ್ದ ಸಮಯದಲ್ಲಿ ಮನೆಯ ಕೀಯನ್ನು ಬಳಸಿ ಬೀರುವುನಲ್ಲಿದ್ದ ಹಣವನ್ನು ದೋಚಿಕೊಂಡು ಹೋಗಿದ್ದರು. ಪ್ರಕರಣ ದಾಖಲಿಸಿಕೊಢ ಪೊಲೀಸರು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಶಿಕಾರಿಪುರದ ಪಿಐ ಆರ್ ಆರ್ ಪಾಟೀಲ್ ನೇತೃತ್ವದ ತಂಡ ರಚಿಸಲಾಗಿತ್ತು.

ತಂಡದಲ್ಲಿ ಪಿಎಸ್ಐಗಳಾದ ಎನ್ ವೈ ಒಲೇಕರ್,  ಮಂಜುನಾಥ .ಕೆ,  ತೋಟಪ್ಪ ಎ.ಎಸ್.ಐ, ನಾಗರಾಜ, ಹೆಚ್.ಸಿ, ಲಕ್ಷ್ಮಿಭಾಯಿ, ಮ.ಹೆಚ್.ಸಿ, ಸಿ.ಪಿ.ಸಿಗಳಾದ ಪ್ರಶಾಂತ್, ಹಜರತ್ ಅಲಿ, ಶ್ರೀಶಂಕರ ನಾಯ್ಕ್ ಮತ್ತು ಎ.ಪಿ.ಸಿ ವಿಜಯಕುಮಾರ್ ರವರಗಳನ್ನು ನೇಮಿಸಲಾಗಿತ್ತು.

ತನಿಖಾ ತಂಡವು ಪ್ರಕರಣ ದಾಖಲಾದ ಕೇವಲ ನಾಲ್ಕು ಗಂಟೆಯ ಒಳಗಾಗಿ ಪ್ರಕರಣದ ಆರೋಪಿಯಾದ ಚೀಲೂರಿನ ಆಕಾಶ್ (18) ಎಂಬುವನನ್ನ ಬಂಧಿಸಿ ಆತನಿಂದ 2,00,000/- ರೂ ( ಎರಡು ಲಕ್ಷ ರೂಪಾಯಿ ) ನಗದು ಹಣವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.ಈ ಎರಡೂ  ತನಿಖಾ ತಂಡಗಳಿಗೆ  ಜಿಲ್ಲಾರಕ್ಷಣಾಧಿಕಾರಿಗಳು ಪ್ರಶಂಸಿದ್ದಾರೆ.

ಇದನ್ನೂ ಓದಿ-https://suddilive.in/archives/8217

Related Articles

Leave a Reply

Your email address will not be published. Required fields are marked *

Back to top button