ನನ್ನ ಲೆಟರ್ಸ್ ಗಳನ್ನ ಅಡ್ಡಹಾಕಲು ಯಾರಿಂದಲೂ ಸಾಧ್ಯವಿಲ್ಲ

ಸುದ್ದಿಲೈವ್/ಸಾಗರ

ವರ್ಣರಂಚಿತ ರಾಜಕಾರಣಿ ಎಂದೇ ಬಿಂಬಿಸಿಕಡಿರುವ ಶಾಸಕ ಗೋಪಾಲಕೃಷ್ಣ ಬೇಳೂರು ಮತ್ತೆ ಸಚಿವ ಮಧು ಬಂಗಾರಪ್ಪನವರ ವಿರುದ್ಧ ಗುಡುಗಿದ್ದಾರೆ. ವಿಧಾನ ಸಭೆ ಫಲಿತಾಂಶ ಬಂದು ಐದು ತಿಂಗಳಲ್ಲೇ ಜಿಲ್ಲೆಯಲ್ಲಿ ಶಾಸಕ ಗೋಪಾಲ ಕೃಷ್ಣ ಬೇಳೂರು ಜಿಲ್ಲಾ ಉಸ್ತುವಾರಿ ಸಚಿವ ಯಾರೆಂದು ಗೊತ್ತಿಲ್ಲವೆಂದು ಗುಡುಗಿದ್ದರು.
ಇದರ ಬೆನ್ನಲ್ಲೇ ಸಚಿವ ಮಧು ಬಂಗಾರಪ್ಪನವರ ಬೆಂಬಲಿಗರು ಡಿಕೆಶಿಗೆ ಶಾಸಕ ಬೇಳೂರು ವಿರುದ್ಧ ದೂರು ಕೊಂಡೊಯ್ದಿದ್ದರು. ಈ ವಿಚಾರದ ಬಗ್ಗೆನೂ ಸೂಕ್ಷ್ಮವಾಗಿ ಮಾತನಾಡಿದ್ದ ಬೇಳೂರು ಮಧು ಬಂಗಾರಪ್ಪ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿ ಎಂದು ಹೇಳಿರುವೆ ಎಂದು ಸಮರ್ಥಿಸಿಕೊಂಡಿದ್ದರು.
ಮೆಗ್ಗಾನ್ ಆಸ್ಪತ್ರೆಯ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆಯ ಭೂಮಿಪೂಜೆಯ ದಿನ ಸಚಿವ ಮಧು ಬಂಗಾರಪ್ಪನವರ ಜೊತೆ ಕಾಣಿಸಿಕೊಂಡರು, ಸಚಿವ ಶರಣ ಪ್ರಕಾಶ್ ಪಾಟೀಲರು ಕಾರ್ಯಕ್ರಮಕ್ಕೆ ಕರೆದಿದ್ದಾರೆ ಹೋಗುತ್ತಿದ್ದೇನೆ ಎಂಬ ಹೇಳಿಕೆಯನ್ನ ಮಾಧ್ಯಮದ ಮುಂದೆ ಹೇಳಿದ್ದರು.
ಅದಾದ ಒಂದು ವಾರದಲ್ಲಿಯೇ ಸಚಿವ ಮಧು ಬಂಗಾರಪ್ಪನವರ ವಿರುದ್ಧ ಪರೋಕ್ಷವಾಗಿ ಸಾಗರದಲ್ಲಿ ಶಾಸಕ ಬೇಳೂರು ಅಸಮಾಧಾನ ಹೊರಹಾಕಿದ್ದಾರೆ.ಯಾವುದೇ ಮುಸುಕಿನ ಗುಡ್ಡಾಟ ಇಲ್ಲ. ನಮ್ಮ ಹಕ್ಕುಗಳನ್ನು ಕೇಳಿದ್ದೇವೆ. ನಾನು ಹಿರಿಯ ಎಂಎಲ್ಎ ಮೂರು ಬಾರಿ ಶಾಸಕನಾಗಿದ್ದೇನೆ. ನನ್ನ ಗಮನಕ್ಕೆ ಬಾರದೆ ಇರುವ ಸಂದರ್ಭದಲ್ಲಿ ಈ ರೀತಿ ಪ್ರಶ್ನೆ ಮಾಡುವುದು ಸಹಜ ಎಂದಿದ್ದಾರೆ.
ನನ್ನ ವೇಗವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ಲೆಟರ್ಸ್ಗಳಿಗೆ ಅಡ್ಡ ಹಾಕಲು ಯಾರಿಗೂ ಶಕ್ತಿ ಇಲ್ಲ. ಅಂತಹ ಯೋಚನೆ ಇದ್ದರೆ ಬಿಟ್ಟು ಬಿಡಿ ಎಂದು ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಗುಟರ್ ಹಾಕಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಯ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಮಧ್ಯಮಗಳಿಗೆ ಹೇಳಿಕೆ ನೀಡಿದ ಸಾಗರ ಶಾಸಕರು, ಇಂಡೈರೆಕ್ಟ್ ಆಗಿ ಸಚಿವ ಮಧು ಬಂಗಾರಪ್ಪಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ-https://suddilive.in/archives/3395
