ಕ್ರೈಂ ನ್ಯೂಸ್

ಯುವಕನ ಕರೆ ಬಂದ ನಂತರ ಅಪ್ರಾಪ್ತ ಬಾಲಕಿ ನೇಣಿಗೆ ಶರಣು

ಸುದ್ದಿಲೈವ್/ಶಿವಮೊಗ್ಗ

ಪಕ್ಕದ ಮನೆಯ ಹುಡುಗನನ್ನ ತಾನು ಪ್ರೀತಿಸುತ್ತಿದ್ದ ಅಪ್ರಾಪ್ತೆ ಬಾಲಕಿ ಮನೆಯ ಬಳಿ ಕಳುಹಿಸಿ ಆತನ ಫೋನ್ ನಿಂದ ಕರೆ ಮಾಡಿ ಯುವತಿಯೊಂದಿಗೆ ಮಾತನಾಡಿದ ನಂತರ ಆ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ಗೋಂದಿ ಚಟ್ನಹಳ್ಳಿಯಲ್ಲಿ ನಡೆದಿದೆ.

ಇದೊಂದು ಪಕ್ಜಾ ಲವ್ ಸ್ಟೋರಿ, ಆದರೆ ಇದೊಂದು ಒನ್ ಸೈಡೆಡ್ ಲವ್ ಎನ್ನುತ್ತೆ ಮೃತ ಬಾಲಕಿಯ ಕುಟುಂಬ. ಆತನ ಟಾರ್ಚರ್ ನಿಂದಲೇ ಬಾಲಕಿ ನೇಣುಬಿಗಿದುಕೊಂಡು ಸಾವನ್ನಪ್ಪಿರುವುದಾಗಿ ಆರೋಪಿಸಲಾಗಿದೆ.

ಪ್ರೀತಿಸುವಂತೆ  ದುಂಬಾಲು ಬಿದ್ದಿದ್ದ ಯುವಕನ ಟಾರ್ಚರ್ ನಿಂದ ಬೇಸತ್ತು ಅಪ್ರಾಪ್ತ ಬಾಲಕಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದಾಗಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲವು ತಿಂಗಳ ಹಿಂದೆ ಗೋಧಿ ಚಟ್ನಹಳ್ಳಿಯ ಗ್ರಾಮದ ನಿವಾಸಿ ತ್ಯಾಗರಾಜ್ ಎಂಬ 23 ವರ್ಷದ ಯುವಕ 16 ವರ್ಷದ ವರ್ಷಿಣಿ ಎಂಬ ಅಪ್ರಾಪ್ತೆ ಬಾಲಕಿಯ ಹಿಂದೆ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದನು. ಆತನ ಪ್ರೀತಿಯನ್ನ ವರ್ಷಿಣಿ ನಿರಾಕರಿಸಿದ್ದಳು ಎಙದು ಕುಟುಂಬ ತಿಳಿಸಿದೆ.

ಮೂರು ತಿಂಗಳು ಹಿಂದೆ ಬಾಲಕಿ ಶಾಲೆಯ ಬಳಿ ತ್ಯಾಗರಾಜ್ ಕಾಣಿಸಿಕೊಂಡು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದನು. ಇದನ್ನ ಬಾಲಕಿಯ ಕುಟುಂಬ ಕಂಡು ಪ್ರೀತಿ ಪ್ರೇಮವನ್ನ ಬಿಡುವಂತೆ ಇಬ್ಬರಿಗೂ ತಿಳಿ ಹೇಳಿದ್ದರು. ಬಾಲಕಿ ಶಿವಮೊಗ್ಗದ ರಾಷ್ಟ್ರೀಯ ಪದವಿ‌ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ‌ ಓದುತ್ತಿದ್ದಳು.

ನಾಳೆಯಿಂದ ಎಸ್ ಎಸ್ ಎಲ್ ಸಿ‌ ಅವರಿಗೆ ಸ್ಟೇಟ್ ಪ್ರಿಪ್ರೇಟರಿ ಪರೀಕ್ಷೆ ಆರಂಭವಾಗಲಿದೆ. ಆದರೆ ಶಾಲೆಗೆ ಟಾಪ್ ಆಗಿದ್ದ ಬಾಲಕಿ ನೇಣಿಗೆ ಶರಣಾಗಿದ್ದಾಳೆ. ಕುಟುಂಬಸ್ಥರು ಬುದ್ದಿವಾದ ಹೇಳಿದ ಮೇಲೆ ಯುವತಿಯಿಂದ ದೂರನಾಗಿದ್ದ ತ್ಯಾಗರಾಜ್ . ಸ್ವಲ್ಪದಿನಗಳ ನಂತರ ‌ಬಾಲಕಿಯ ಬಳಿ ಬಂದು ಲವ್ ಮಾಡು ಇಲ್ಲವಾದಲ್ಲಿ ನಾನು ಸಾಯಿತೀನಿ ಎಂದು ಹೇಳಿಕೊಂಡಿದ್ದನು.

ಈ ರೀತಿ ಹೆದರಿಸುತ್ತಿರುವ ಬಗ್ಗೆ ವರ್ಷಿಣಿ ತನ್ನ ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಳು. ಫೆ.24 ರಂದು ಸಂಜೆ 7 ಗಂಟೆಗೆ ತ್ಯಾಗರಾಜ್ ತನ್ನ ಪಕ್ಕದ ಮನೆಯ ಯುವಕನನ್ನ‌ ವರ್ಷಿಣಿ ಮನೆಯ ಬಳಿ ಕಳುಹಿಸಿ ಆತನ ಮೊಬೈಲ್ ಮೂಲಕ ಬಾಲಕಿಯನ್ನ ಮಾತನಾಡಿಸಿದ್ದಾನೆ.

ಇದಾದ ಮೇಲೆ ವರ್ಷಿಣಿ ಮನೆಯ ಸರಳಿಗೆ ವೇಲು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವರ್ಷಿಣಿ ತಂದೆ ಮರುಗೇಶ್ ಕೂಲಿ ಕಾರ್ಮಿಕರಾಗುದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ವರ್ಷಿಣಿ ಎರಡನೇ ಮಗಳಾಗಿದ್ದಾಳೆ. ಅಪ್ರಾಪ್ತೆ ಬಾಲಕಿ ನೇಣುಬಿಗಿದುಕೊಂಡು ಸಾವನ್ನಪ್ಪಿರುವ ಬಗ್ಗೆ ತನಿಕೆ ಮಾಡುವಂತೆ ಕುಟುಂಬ ಆಗ್ರಹಿಸಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ತ್ಯಾಗರಾಜ್ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ-https://suddilive.in/archives/9538

Related Articles

Leave a Reply

Your email address will not be published. Required fields are marked *

Back to top button