ಕ್ರೈಂ ನ್ಯೂಸ್

ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ರಾಜಕೀಯ ಬೆರೆತಿದೆಯಾ?

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡದ ಗಲಭೆ ಪ್ರಕರಣದಲ್ಲಿ ಓರ್ವ ಠಾಣಾಧಿಕಾರಿ ಮತ್ತು ಮೂವರು ಸಿಬ್ಬಂದಿಗಳನ್ನ ಕರ್ತವ್ಯದಿಂದ ಅಮಾನತ್ತುಗೊಳಿಸಲಾಗಿದೆ. ಕರ್ತವ್ಯದಲ್ಲಿ ನಿರ್ಲಕ್ಷ ಎಂಬ ಆರೋಪದ ಅಡಿ ಈ ನಾಲ್ವರನ್ನ ಸಸ್ಪೆಂಡ್ ಮಾಡಲಾಗಿದೆ.

ರಾಗಿಗುಡ್ಡದ ಗಲಭೆ ಪ್ರಕರಣದಲ್ಲಿ ಪೊಲೀಸರ ಅಮಾನತ್ತನ್ನ ಸಮರ್ಥಿಸಿಕೊಳ್ಳಲಾಗದು. ಇಲ್ಲಿ ಪೊಲೀಸರ ವೈಫಲ್ಯವಿದೆ ಎಂಬುದಕ್ಕೆ ಈ ನಾಲ್ವರು ಸಸ್ಪೆಂಡ್ ಆದೇಶ ಇನ್ನೂ ಹೆಚ್ಚು ಪುಷ್ಟಿ ನೀಡುತ್ತದೆ. ಹಾಗಂತ ಈ ನಾಲ್ವರಿಂದಲೇ ಕರ್ತವ್ಯ ಲೋಪ ಆಗಿದೆಯಾ? ಎಂದು ಪ್ರಶ್ನಿಸಿದರೆ ಸಮರ್ಥಿಸಿಕೊಳ್ಳುವುದು ಕಷ್ಟನೇ!

ಹುಣಸೋಡು ಸ್ಪೋಟ

ಅದೇನೇ ಇರಲಿ ಓದುಗರಿಗೆ ಎರಡು ಉದಾಹರಣೆ ಹೇಳಲೇ ಬೇಕು.  2021 ಜನವರಿ 21 ರಂದು  ನಡೆದ ಹುಣಸೋಡು ಬಾಂಬ್ ಸ್ಪೋಟ, ಬಾಂಬ್ ಸ್ಪೋಟದಲ್ಲಿ ಆದ 7 ಜನರ ಸಾವು, ಇಬ್ಬರು ಮಿಸ್ಸಿಂಗ್ ಪ್ರಕರಣ ಇನ್ನೂ ಕಣ್ಣುಮುಂದೆನೇ ಇದೆ. ಇಲ್ಲಿ ಜಿಲ್ಲಾಡಳಿತದ ಒಬ್ಬ ಅಟೆಂಡರ್ ವಿರುದ್ಧ ಕ್ರಮ ಜರುಗಿಸಲಿಲ್ಲ. ಇದೇ ದೂರದ ಜಿಲ್ಲೆ ಚಿಕ್ಕಬುಳ್ಳಾ ಪುರದಲ್ಲಿ ಕ್ವಾರೆಯಲ್ಲಿ ನಡೆದ ಬಾಂಬ್ ಸ್ಪೋಟದ ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸಸ್ಪೆಂಡ್ ಮಾಡಲಾಗುತ್ತದೆ.

ಹರ್ಷನ ಹತ್ಯೆ

ಇನ್ನೊಂದು ಉದಾಹರಣೆ, ಇದೇ 2022 ಫೆಬ್ರವರಿ 20 ಮತ್ತು 21 ರಂದು ನಡೆದ ಬಜರಂಗ ದಳದ ಕಾರ್ಯಕರ್ತ ಹರ್ಷನ ಕೊಲೆ,  ನಂತರದ ಗಲಭೆ ಪ್ರಕರಣದಲ್ಲಿ ಯಾವ ಪೊಲೀಸ್ ಅಧಿಕಾರಿ ಸಸ್ಪೆಂಡ್ ಆಗಲಿಲ್ಲ ಸಿಬ್ಬಂದಿಗಳು ಅಮಾನತ್ತುಗೊಳಿಸಲಿಲ್ಲ. ಹಾಗಂತ ಇಲ್ಲಿ ಪೊಲೀಸ್ ವೈಫಲ್ಯವಾಗಿರಲಿಲ್ಲವಾ ಎಂದರೆ ಆತ್ಮಸಾಕ್ಷಿಯನ್ನ‌ ವಂಚಿಸಿಕೊಳ್ಳೋದು ಒಂದೇ ಈ ಘಟನೆಯಲ್ಲಿ ಕ್ರಮವಾಗಿದೆ ಎಂದು  ಸುಳ್ಳು ಹೇಳುವುದೂ ಒಂದೇ.

ಸ್ವಂತ ಬುದ್ದಿನಾ ರಾಜಕೀಯ ಪ್ರೇರಿತಾನಾ?

ಎರಡು ಇತ್ತೀಚಿನ ವರ್ಷಗಳಲ್ಲಿ ನಡೆದ ಕೋಮು ಗಲಭೆ ಮತ್ತೊಂದು ಇಡೀ ಶಿವಮೊಗ್ಗವೇ ಬೆಚ್ಚಿಬೀಳಿಸಿದ  ಪ್ರಕರಣವಾಗಿದೆ. ನನ್ನ ನೆನಪಿನ ಶಕ್ತಿಯ ಸರಿಯಿದ್ದರೆ, ಒಂದು ಪ್ರಕರಣದಲ್ಲಿ ದಾವಣಗೆರೆ ಐಜಿಪಿ ಆಗಿದ್ದವರುಸಲೀಂ ಮತ್ತೊಂದರಲ್ಲಿ  ತ್ಯಾಗರಾಜನ್ ಅವರೇ ಈ ಎರಡೂ ಘಟನೆ ನಡೆದಾಗ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬ ನೆನಪಿದೆ.  ಆಗಲೂ ಪೊಲೀಸ್ ಇಲಾಖೆಗೆ ವೈಪಲ್ಯವೆನಸದ ಕರ್ತವ್ಯ ಲೋಪ ರಾಗಿಗುಡ್ಡದಲ್ಲಿ ನಡೆದ ಗಲಭೆ ವೇಳೆ ನೆನಪಾಗಿರುವುದು ಸ್ವಂತ ಬುದ್ದಿಯಿಂದಲಾ ಅಥವಾ ರಾಜಕೀಯ ಪ್ರೇರಿತಾನಾ?

ಅಂದರೆ ಕಾನೂನು ಸುವ್ಯವಸ್ಥೆಯಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಬಿಜೆಪಿ ಕೈ ಆಡಿಸಿದೆ. ಈಗ ಕಾಂಗ್ರೆಸ್ ಸರದಿ ಕಾಂಗ್ರೆಸ್ ಯಾರನ್ನೋ ಮೆಚ್ಚಿಸಲು ಕೈಯಾಡಿಸಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಹಾಗಂತ ಕರ್ತವ್ಯ ಲೋಪದಲ್ಲಿ ಅಮಾನತ್ತು ಆದೇಶವನ್ನ ಸರಿಯಿಲ್ಲವೆನ್ನಲು ಸಾಧ್ಯವೇ ಇಲ್ಲ. ಬದಲಿಗೆ ಕಾನೂನು ಸುವ್ಯವಸ್ಥೆಯನ್ನ ರಾಜಕೀಯ ಪಕ್ಷಗಳು ಮೂರಾಬಟ್ಟೆ ಮಾಡಿರುವುದನ್ನ‌ ಹೇಳಲಾಗುತ್ತಿದೆ.

ಕಾನೂನು ಸುವ್ಯವಸ್ಥೆಯಲ್ಲಿ ಕೈ ಆಡಿಸದಿರಿ

ಎಲ್ಲಿ ರಾಜಕೀಯ ಬೆರೆಯ ಬಾರದಿತ್ತೋ ಅಲ್ಲಿ ರಾಜಕೀಯ ಬೆರೆತಿದೆ. ಮಿನುಟ್ ಮೇಲೆ ಬರುವ ಅಧಿಕಾರಿಗಳಿಂದ ಮತ್ತೆ ಏನು ನಿರೀಕ್ಷಿಸಲು ಸಾಧ್ಯ? ಅದೇ ರಾಜಕೀಯದವರ ಹಿಂದೆ ಮುಂದೆ ಸುತ್ತಾಡಿಕೊಂಡು ಕರ್ತವ್ಯ ನಿಭಾಯಿಸುವುದು ಬಿಟ್ಟರೆ ಬೇರೆ ನಿರೀಕ್ಷಿಸಲು ಸಾಧ್ಯವಾ? ಠಾಣಾಧಿಕಾರಿಗಳ ಕೈ ಕಟ್ಟಿಹಾಕಿ ಮುಂದಿನ ಆದೇಶದ ವರೆಗೂ ಶಾಂತಿ ಕಾಪಾಡು ಎಂದರೆ ಉದ್ವಿಗ್ನಗೊಂಡ ಜನರ ಮುಂದೆ ಶಾಂತಿ ಕಾಪಾಡಲು ಸಾಧ್ಯವಾ?

ಕಾನೂನು ಸುವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ಎಲ್ಲಿಯ ವರೆಗೆ  ಕೈ ಆಡಿಸುವುದನ್ನ ಬಿಡುವುದಿಲ್ಲವೋ ಅಲ್ಲಿಯ ವರೆಗೆ ಕಾನೂನು ಸುವ್ಯವಸ್ಥೆ ಬೇರೆಯವರ ಕೈಯಲ್ಲಿ ನರಳುತ್ತೆ ಎಂಬುದು ಅಷ್ಟೇ ಸತ್ಯ. ಇದರಿಂದ  ಸಾರ್ವಜನಿಕರು ನರಳಾಡಬೇಕಾಗುತ್ತೆ.  ಬಿಜೆಪಿಗಿಂತ ಉತ್ತಮ ಆಡಳಿತ ಕೊಡ್ತೀವಿ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಮತ್ತೆ ಯಾರನ್ನೋ ಮೆಚ್ಚಿಸಲು ಕಾನೂನು ಸುವ್ಯವಸ್ಥೆಯಲ್ಲಿ ಕೈ ಹಾಕುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಜನ ಎಚ್ಚೆತ್ತುಕೊಳ್ಳದೆ ಇದ್ದರೆ ಎರಡೂ ಪಕ್ಷಗಳಿಂದ ಆಪತ್ತು ಖಂಡಿತ.

ಇದನ್ನೂ ಓದಿ-https://suddilive.in/archives/816

Related Articles

Leave a Reply

Your email address will not be published. Required fields are marked *

Back to top button