ಕ್ರೈಂ ನ್ಯೂಸ್

5 ಕ್ವಿಂಟಾಲ್ ಗೋಮಾಂಸ ಪತ್ತೆ!?

ಸುದ್ದಿಲೈವ್/ಶಿವಮೊಗ್ಗ

ಜಿಲ್ಲೆಯ ಗಡಿ ಭಾಗದವಾದ ಜೋಗದಲ್ಲಿ  ಮನೆಯೊಂದರಲ್ಲಿ 5 ಕ್ವಿಂಟಾಲ್ ಗೋಮಾಂಸ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜೋಗದ ಬಜಾರ್ ನ ಅಲಂಕಾರ್ ಬಾರ್ ಹಿಂಭಾಗದ ಜಾಗದಲ್ಲಿ 5 ಕ್ವಿಂಟಾಲ್  ಗೋಮಾಂಸವನ್ನ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ದಾಳಿ ನಡೆದ ಸ್ಥಳ ಮುಬಾರಕ್ ಎಂಬುವರ ಮನೆಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.  5 ಕ್ವಿಂಟಾಲ್ ಗೋಮಾಂಸ ಪತ್ತೆಯಾಗಿದೆ. ಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಜೋಗದಲ್ಲಿ ಭಟ್ಕಳದಿಂದ ಈ ಗೋಮಾಂಸಗಳು ಸಾಗಾಣಿಕೆ ಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಕಾರ್ಗಲ್ ಪಿಎಸ್ಐ ರನ್ನ ಸಂಪರ್ಕಿಸಲಾಗಿತ್ತು. ಪಿಎಸ್ಐ ನವರು ಮೊಬೈಲ್ ಸ್ವೀಕರಿಸಿ ಉತ್ತರಿಸುವ ವ್ಯವಧಾನ ಇಟ್ಟುಕೊಂಡಹಾಗೆ ಕಂಡು ಬಂದಿಲ್ಲ. ಹಾಗಾಗಿ ಸಿಕ್ಕ ಮಾಹಿತಿಯ ಮೇಲೆ ದೂರು ದಾಖಲಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button