ಕ್ರೈಂ ನ್ಯೂಸ್

ಬಲಿ ತೆಗೆದುಕೊಳ್ತಾ ಸ್ಲ್ಯಾಬ್?

ಸುದ್ದಿಲೈವ್/ಶಿವಮೊಗ್ಗ

ನಗರದ ವೀರಣ್ಣ ಲೇಔಟ್ ನ ದೊಡ್ಡ ಮೋರಿಯಲ್ಲಿ ಚಿಂದಿ ಆರಿಸುವ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಇದರಿಂದ ಕಳಪೆ ಕಾಮಗಾರಿಯ ಹಿನ್ನಲೆಯಲ್ಲಿ ಎರಡು ದಿನಗಳಲ್ಲಿ ಎರಡು ಬಲಿಯಾಗಿದೆ.

ಮೂತ್ರ ವಿಸರ್ಜನೆಗೆ ಹೋದ ಮುತ್ತಪ್ಪ ಎಂಬ 50 ವರ್ಷದ ವ್ಯಕ್ತಿ ಮೋರಿಗೆ ಬಿದ್ದು ಸಾವನ್ಬಪ್ಪಿದ್ದಾನೆ. ವೀರಣ್ಣನ ಲೇಔಟ್ ನಲ್ಲಿ ಹಾದು ಹೋಗಿರುವ ಚರಂಡಿ ಮೋರಿಯ ಸ್ಲ್ಯಾಬ್ ನಲ್ಲಿ ನಿಂತು ಮುತ್ತಪ್ಪ ಮೂತ್ರ ವಿಸರ್ಜನೆ ಮಾಡುವ ವೇಳೆಈ ಘಟನೆ ನಡೆದಿದೆ.

ಇದು ಸಹ ಸ್ಲ್ಯಾಬ್ ನ ಕಳಪೆ ಕಾಮಗಾರಿಯ ಪಾಪದ ಕೂಸಿನ ಪರಿಣಾಮ ಈ ಘಟನೆ ನಡೆದಿದೆ ಎನ್ಬಲಾಗಿದೆ. ಈ ಎಲ್ಲಾ ಮಾಹಿತಿಗಳು ಪ್ರಾಥಮಿಕ ಮಾಹಿತಿಗಳಾಗಿವೆ. ಸ್ಥಳಕ್ಕೆ ವಿನೋಬ ನಗರ ಪೊಲೀಸರು ಭೇಟಿ ನೀಡಿದ್ದಾರೆ.

ನಿನ್ನೆ ಮುದ್ದಿನಕೊಪ್ಪದ ಟ್ರೀಪಾರ್ಕ್ ನಲ್ಲಿ ಸಿಮೆಂಟ್ ಜಿಂಕೆ ಪ್ರತಿಮೆ ಮುರಿಗು 6 ವರ್ಷದ ಕಂದಮ್ಮ ಬಲಿಯಾಗಿರುವ ಆಕ್ರೋಶವನ್ನ ಕುಟುಂಬ ಹೊರಹಾಕಿತ್ತು. ಈಗ ಚರಂಡಿ ಸ್ಲ್ಯಾಬ್ ನ ಕಳಪೆಗಾರಿಯಿಂದ ಮತ್ತೊಂದು ಬಲಿಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು ಈ ಕಾಮಗಾರಿ ನನ್ನದಲ್ಲ ಎಂದು ಸ್ಪಷ್ಟಪಡಿಸಿದ್ದು, ರೈಲ್ವೆ ಇಲಾಖೆಯ ಕಾಮಗಾರಿ ಎಂದು ಸ್ಪಷ್ಟಪಡಿಸಿದೆ. ಇಲ್ಲಿಗೆ ಕಳಪೆ ಕಾಮಗಾರಿಗೆ ಜನ ಬಲಿಯಾಗುತ್ತಿದ್ದಾರೆ.

ಇದನ್ನೂ ಓದಿ-https://suddilive.in/archives/7953

Related Articles

Leave a Reply

Your email address will not be published. Required fields are marked *

Back to top button