ಕ್ರೈಂ ನ್ಯೂಸ್

ವಿಷ ಸೇವಿಸಿದ ಯುವಕ ಸಾವು- ಸಾವಿಗೆ ಆಸ್ಪತ್ರೆಯ ನಿರ್ಲಕ್ಷ ಕಾರಣ ಎಂದು ಕುಟುಂಬ ಆಕ್ಷೇಪ

ಸುದ್ದಿಲೈವ್/ಶಿವಮೊಗ್ಗ

ಚಿಕಿತ್ಸೆ ಫಲಕಾರಿಯಾಗದ ಮೆಗ್ಗಾನ್ ನಲ್ಲಿ ಇಂದು ಸಾವನ್ನಪ್ಪಿದ ಯುವಕನ ಪರವಾಗಿ ಕುಟುಂಬಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಭದ್ರಾವತಿ ತಾಲೂಕಿನ ಸಾಗರ್ (21) ಭದ್ರಾವತಿ ಹಳೇಕೋಡೆಹಳ್ಳಿಯ ನಿವಾಸಿ ಸಾಗರ್ ಎಂಬ 21 ವರ್ಷದ ಯುವಕ , ಫೆ.19 ರಂದು ಜ್ಯೂಸ್ ಗೆ ಇಲಿಪಾಶಾಣ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಆತನನ್ನ ಮೆಗ್ಗಾನ್ ಆಸ್ಪತ್ರೆಗೆ ತಂದು ದಾಖಲಿಸಲಾಗಿತ್ತು.

ಇವತ್ತು ಡಿಸ್ ಚಾರ್ಜ್ ಮಾಡುವುದಾಗಿ ಆಸ್ಪತ್ರೆ ತಿಳಿಸಿದ್ದರು ಎಂದು ಹೇಳಿರುವ ಕುಟುಂಬ. 241 ನೇ ಕೊಠಡಿಯಲ್ಲಿದ್ದ ಸಾಗರ್ ಗೆ ನರ್ಸ್ ಒಬ್ಬರು ಇಂದು ಬೆಳಿಗ್ಗೆ ಬಂದು ಇಂಜೆಕ್ಷನ್ ಕೊಡಲು ಮುಂದಾಗಿದ್ದರು. ಆದರೆ ರೋಗಿ ಬೇಡ ಎಂದಿದ್ದನು. ನಿನ್ನೆನೂ ಹೀಗೆ ಮಾಡಿದ್ದರಿಂದ ಆತನ ಕೈಗೆ ಇನ್ಫೆಕ್ಷನ್ ಆಗಿದ್ದರಿಂದ ಆತ ಬೇಡ ಎಂದಿದ್ದನು.ಇವರು ಇಂಜೆಕ್ಷನ್ ನೀಡಿದ್ದರಿಂದ ಓವರ್ ಡೋಸ್ ಆಗಿ ಸಾಗರ್ ಸಾವನ್ನಪ್ಪಿರುವುದಾಗಿ ಕುಟುಂಬ ಆಕ್ಷೇಪಿಸಿದೆ.

ಚಿಕಿತ್ಸೆ ವೈಫಲ್ಯಕ್ಕೆ ಅಲ್ಲಿನ ವೈದ್ಯರ ಮತ್ತು ನರ್ಸ್ ಗಳ ನಿರ್ಲಕ್ಷವೇ ಕಾರಣ ಎಂಬುದು ಕುಟುಂಬಸ್ಥರ ಆಕ್ಷೇಪವಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರುಕೊಡುವುದಾಗಿ ದೂರಲಾಗಿದೆ. ಆದರೆ ವೈದ್ಯರ ನಿರ್ಲಕ್ಷವೋ ಅಥವಾ ಬೇರೆಯಾವುದೇ ಉದ್ದೇಶವಿದ್ದರೂ ವರದಿಯಲ್ಲಿ ತಿಳಿಯಬೇಕಿದೆ.

ಸಾಗರ್ ಕೆಲಸಕ್ಕೆ ಹೋಗುತ್ತಿಲ್ಲವೆಂಬ ಕಾರಣಕ್ಕೆ ಕುಟುಂಬ ಕೆಲಸಕ್ಕೆ ಹೋಗು ಎಂದು ಹೇಳಿದ್ದರು. ಇದರಿಂದ ಬೇಸತ್ತ ಸಾಗರ್ ಇಲಿಪಾಶಾಣ ಸೇವಿಸಿರುವುದಾಗಿ ಆರೋಪಿಸಿದೆ. ಇವತ್ತು ಇಂಜೆಕ್ಷನ್ ಕೊಡುವ ತನಕ ಚೆನ್ನಾಗಿದ್ದ ಸಾಗರ್ ಇಂಜೆಕ್ಷನ್ ನಂತರ ಸಾವನ್ನಪ್ಪಿದ್ದಾನೆ. ಆತನ ಸಾವಿಗೆ ಆಸ್ಪತ್ರೆ ನಿರ್ಲಕ್ಷ‌ ಕಾರಣ ಎಂದು ದೂರಲಾಗಿದೆ.

ಇದನ್ನೂ ಓದಿ-https://suddilive.in/archives/9372

Related Articles

Leave a Reply

Your email address will not be published. Required fields are marked *

Back to top button