ರಾಷ್ಟ್ರೀಯ ಸುದ್ದಿಗಳು

ಶಾಹೀ ಎಕ್ಸಪೋರ್ಟ್ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವಂತೆ ಗ್ರಾಪಂನಿಂದ ಮನವಿ

ಸುದ್ದಿಲೈವ್/ಶಿವಮೊಗ್ಗ

ಶಾಹೀ ಎಕ್ಸ್ ಪೋರ್ಟ್ ವಿರುದ್ಧ ನಿಧಿಗೆ ಗ್ರಾಮ ಪಂಚಾಯಿತಿ ಕಾರ್ಯಾಲಯ ತುಂಗ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ. ಕಂಪನಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬೇಕು. ಹಾಗೂ ಎಫ್ಐಆರ್ ದಾಖಲಿಸುವಂತೆ ಕಾರ್ಯಾಲಯವೇ ಪೊಲೀಸ್ ಠಾಣೆಯ‌ಮೆಟ್ಟಿಲೇರಿದೆ.

ಶಾಹೀ ಎಕ್ಸ್ ಪೋರ್ಟ್ ನವರು ಕಲುಷಿತ ನೀರನ್ನ ಉಚ್ಚಣಿ ಕೆರೆಗೆ ಭದ್ರಾ ಚಾನೆಲ್ ಮೂಲಕ ಹರಿದು‌ ಬಿಟ್ಟಿದ್ದಾರೆ. ಅನೇಕ‌ ಕೆರೆಗಳಿಗೆ ತಲುಪುವ ಈ ಭದ್ರಾ ಎಡದಂಡೆ ಚಾನೆಲ್ ನೀರು ಅನೇಕ‌ ಕೆರೆಗೆ ಸೇರುವುದರಿಂದ ನೀರನ್ನ ಕಲೂಷಿತಗೊಳಿಸಿದೆ. ಇದರಿಂದ ಕೆರೆಗಳಲ್ಲಿರುವ ಜೀವ‌ಸಂಕುಲಗಳು ಜೀವ ಕಳೆದುಕೊಳ್ಳುವ‌ಂತಾಗಿದೆ.

ಈ ಬಗ್ಗೆ ಅನೇಕ ಬಾರಿ ನಿದಿಗೆ ಗ್ರಾಮಪಂಚಾಯತ್ ಕಾರ್ಯಾಲಯ ನೋಟೀಸ್ ನೀಡಿದರೂ ಸಂಸ್ಥೆ ನೋಟೀಸ್ ನ್ನೇ ಕಡೆಗಣಿಸಿ ಪದೇ ಪದೇ ಚಾನೆಲ್ ಮೂಲಕ ನೀರು ಬಿಡಲಾಗುತ್ತಿದೆ. ಆದರೆ ಯಾವುದೇ ಕ್ರ‌ಮ‌ ಕೈಗೊಂಡಿಲ್ಲ ಎಂದು ಕಾರ್ಯಾಲಯ ಮನಿ ಪತ್ರದಲ್ಲಿ ಅಗ್ರಹಿಸಿದೆ.

ಹಾಗಾಗಿ ಪುನಾರಾವರ್ತಿತ ತಪ್ಪುಗಳನ್ನ‌ ಮಾಡುತ್ತಾ ಬಂದಿರುವ ಕಂಪನಿಯ ವಿರುದ್ಧ ಕ್ರಿಮಿನಲ್‌ ಮೊಕ್ಕದ್ದಮೆ ದಾಖಲಿಸಿ ಎಫ್ ಐಆರ್ ಮಾಡಿಕೊಳ್ಳುವಂತೆ ತುಂಗಾನಗರ ಪೊಲೀಸ್ ಠಾಣೆ ಪಿಐ‌ ಮಂಜುನಾಥ್ ಗೆ ಕಾರ್ಯಾಲಯ ಮನವಿ ನೀಡಿದೆ.

2022 ರಲ್ಲಿ ನಿಧಿಗೆ ಗ್ರಾಮ ಪಂಚಾಯತ್ ನ ಪಿಡಿಒಗೆ ಶಾಹೀ ಎಕ್ಸಪೋರ್ಟ್ ಪ್ರೈ.ಲಿ., ಮುಚ್ಚಳಿಕೆ ಪತ್ರ ಬರೆದು‌ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿತ್ತು.‌ ಆಗ‌ ದುಮ್ಮಳ್ಳಿ, ಸಂತೇಕಡೂರು, ಸೋಗಾನೆಯಲ್ಲಿ ನೀರು ಕಲೂಷಿತವಾಗಿರುವ ಬಗ್ಗೆ ಕಂಪನಿಯ ಸಿದ್ದಲಿಂಗಪ್ಪ, ಶಿವಕುಮಾರ್ ಮತ್ತು ಸುನೀಲ್ ಗುಪ್ತರವರು ತಿಳಿಸಿರುವುದನ್ನ‌ ಉಲ್ಲೇಖಿಸಿ ಕಂಪನಿಯೆ ಪತ್ರ ಬರೆದು ಸರಿಪಡಿಸುವ ಭರವಸೆ ನೀಡಿತ್ತು.

ಇದಾದ ನಂತರ 2023 ಸೆಪ್ಟಂಬರ್ ನಲ್ಲಿ ಕಾರ್ಖಾನೆಯ ವಿರುದ್ಧ ನಿಧಿಗೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಮತ್ತೊಂದು ನೋಟೀಸ್ ನೀಡಿ ಸುರಕ್ಷಿತ ನಿಯಮ‌ಪಾಲಿಸುತ್ತಿಲ್ಲ ಎಂದು ಎಚ್ಚರಿಕೆ ನೀಡಿತ್ತು.

ಆದರೆ ಈ ಪತ್ರಕ್ಕೆ ಕಿಮ್ಮತ್ತಿಲ್ಲದಂತಾಗಿದೆ. ಗ್ರಾಮ ಪಂಚಾಯಿತಿ ಕಾರ್ಯಾಲಯದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರೆಲ್ಲಾ ಸೇರಿ ಪೊಲೀಸ್ ಠಾಣೆಗೆ ದೂರು ನೀಡಿರುವುದರಿಂದ ಸುದ್ದಿಗೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ-https://suddilive.in/archives/8080

Related Articles

Leave a Reply

Your email address will not be published. Required fields are marked *

Back to top button