ಸ್ಥಳೀಯ ಸುದ್ದಿಗಳು

ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದ ಕೋಟೆ ಸೀತಾರಾಮ ಆಂಜನೇಯ ಸ್ವಾಮಿ ದೇವಿಯ ಬ್ರಹ್ಮರಥೋತ್ಸವ ನಡೆದಿದೆ. ಬ್ರಹ್ಮರಥೋತ್ಸವಕ್ಕೆ ಭಕತರ ಸಮೂಹವೇ ಹರಿದು ಬಂದಿದೆ.

ಪ್ರತಿವರ್ಷದಂತೆ ಈ ವರ್ಷ ದಂತೆ ಈ ವರ್ಷವೂ ದೇವರ ಬ್ರಹ್ಮರಥೋತ್ಸವ ನಡೆದಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಎಸ್ಪಿಎಂ ರಸ್ತೆ ಮೂಲಕ ಗಾಂಧೀಬಜಾರ್ ಗೆ ತಲುಪಿ ವಾಪಾಸ್ ಅದೇ ರಸ್ತೆಯ ಮೂಲಕ ಕೋಟೆ ಮಾರಿಕಾಂಬ ದೇವಸ್ಥಾನದ ಬಳಿ ಸಧ್ಯಕ್ಕೆ ರಥವನ್ನ ತಂದಿರಿಸಲಾಗಿದೆ.

ಈ ವೇಳೆ ರಥ ಬರುವ ದಾರಿಯಲ್ಲಿ ನೀರು ಹಾಕಿ ರಂಗೋಲಿ ಹಾಕುವ ಮೂಲಕ ಭಕ್ತರು‌ ಭಕ್ತಿ ಮೆರೆದಿದ್ದಾರೆ. ಅದರಂತೆ ಈ ಬಾರಿ ರಥೋತ್ಸವಕ್ಕಾಗಿ ಅಂಗಡಿಮುಂಗಟ್ಟುಗಳು ಹೆಚ್ಚಾಗಿದ್ದವು.

ಇಂದು ರಾತ್ರಿಯೂ ಸಹ‌ ಬ್ರಹ್ಮರಥೋತ್ಸವ ಜರುಗಲಿದೆ. ರಾತ್ರಿ 9 ಗಂಟೆಗೆ ದೇವರರಥವನ್ನ ಕೋಟೆ ಮಾರಿಕಾಂಬ ದೇವಸ್ಥಾನದಿಂದ ಆಂಜನೇಯ ಸ್ವಾಮಿ ದೇವಸ್ಥಾನದ ವರೆಗೆ ಎಳೆಯಲಾಗುತ್ತದೆ.

ಇದನ್ನೂ ಓದಿ-https://suddilive.in/archives/9532

Related Articles

Leave a Reply

Your email address will not be published. Required fields are marked *

Back to top button