ಕ್ರೈಂ ನ್ಯೂಸ್

ಹೊರಬೈಲಿನಿಂದ ಹೊರಟ ಬೃಹತ್ ಕಾಲ್ನಡಿಗೆ ಜಾಥಾ

ಸುದ್ದಿಲೈವ್/ಶಿವಮೊಗ್ಗ

ತಾಲೂಕಿನ ಹೊರೆಬೈಲಿನಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಆರಂಭಗೊಂಡಿತುವ ಬೃಹತ್ ಕಾಲ್ನಡಿಗೆ ಜಾಥಾ ಕುಂಸಿ ಗ್ರಾಮವನ್ನ ದಾಟಿದೆ.

ಹೊರೆಬೈಲು ಗ್ರಾಮದಲ್ಲಿ ದಲಿತ ಯುವತಿಯ್ನ ಮದುವೆಯಾದ ಹಿನ್ನಲೆಯಲ್ಲಿ ಸಾಮಾಜಿಕ ಬಹಿಷ್ಕಾರವನ್ನ ಮತ್ತು ಜಾತಿನಿಂದನೆ ಪ್ರಕರಣದ ದೂರು ದಾಖಲಾಗಿತ್ತು. ಈ ಘಟನೆಯ ಹಿಂದೆ ಡಿಎಸ್ ಎಸ್ ಅಂಬೇಡ್ಕರ್ ವಾದದ ಮುಖಂಡರ ಕೈವಾಡವಿದ್ದು ಇದನ್ನ ವಿರೋಧಿಸಿ ಡಿಎಸ್ ಎಸ್ ಗುರುಮೂರ್ತಿ ಬಣ ಪ್ರತಿಭಟಿಸಿದೆ.

ಹೊರೆಬೈಲಿನಿಂದ ಜಾಥಾ ಆರಂಭವಾಗಿದೆ. ಡಿಎಸ್ ಎಸ್ ಗುರುಮೂರ್ತಿ ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಅಘೋಷಿತ ಸಾಮಾಜಿಕ ಬಹಿಷ್ಕಾರದ ಹಿನ್ನಲೆಯಾದರೂ ಏನು? ಹಾಲೇಶಪ್ಪನವರು ಸಾಮಾಜಿಕ ಬಹಿಷ್ಕಾರ ಹಾಕಿರುವ ಬಗ್ಗೆ ಇರುವ ದಾಖಲಾತಿಯಾದರೂ ಏನು ಎಂದು ಒತ್ತಾಯಿಸಿ ಜಾಥಾ ಆರಂಭವಾಗಿದೆ.

ಇಂದಿನ ಜಾಥಾ ಹಿನ್ನಲೆಯಲ್ಲಿ ವಿವಾಹಿತ ಮಹಿಳೆ ವಿಷ ಸೇವಿಸಿ ಮೆಗ್ಗಾನ್ ಗೆ ದಾಖಲಾಗಿದ್ದಾರೆ. ಈ ಪ್ರಕರಣ ಏಲ್ಲಿಗೆ ಬಂದು ನಿಲ್ಲಲಿದೆ ಕಾದು ನೋಡಬೇಕಿದೆ.

ಇದನ್ನೂ ಓದಿ-https://suddilive.in/archives/8054

Related Articles

Leave a Reply

Your email address will not be published. Required fields are marked *

Back to top button