ಶಿವಮೊಗ್ಗದಲ್ಲಿ ಪಟಾಕಿ ಸಿಡಿಸಿ ಇಬ್ಬರಿಗೆ ಗಾಯ

ಸುದ್ದಿಲೈವ್/ಶಿವಮೊಗ್ಗ

ಪಟಾಕಿ ಅನಾಹುತಗಳು ಎಂದಿನಂತೆ ಪ್ರತಿ ವರ್ಷ ವರದಿಯಾಗುತ್ತಲೇ ಇವೆ. ಪ್ರತಿವರ್ಷವೂ ಸರ್ಕಾರ ಎಚ್ಚರಿಸುತ್ತಲೇ ಬಂದರೂ ಅನಾಹುತಗಳಿಗೆ ಮಾತ್ರ ಕಡಿವಾಣ ಬೀಳುತ್ತಿಲ್ಲ.
ಹಸಿರು ಪಟಾಕಿಗೆ ಹೆಚ್ಚಿನ ಒತ್ತುಕೊಡಲಾಗುತ್ತಿದೆ. ಸುಪ್ರೀಂ ಕೋರ್ಟ್ ಸಹ ಹಸಿರು ಪಟಾಕಿ ಬಳಸಲು ಸೂಚಿಸಿದೆ. ಸರ್ಕಾರ ಸಹ ಹಸಿರು ಪಟಾಕಿಯ ಭಜನೆ ಮಾಡಿದರೂ ಸಹ ಹಸಿರು ಪಟಾಕಿ ಬಳಕೆ ಎಲ್ಲಿ ಬಳಕೆಯಾಗುತ್ತಿದೆ ಎಂದು ದುರಬಿನ್ ಹಾಕಿಕೊಂಡು ಹುಡುಕುವಂತಾಗಿದೆ.
ದೀಪಾವಳಿಗೂ ಮೊದಲು ಬೆಂಗಳೂರಿನ ಅತ್ತಿಬೆಲೆ ಪಟಾಕಿಗೋದಾಮಿನನಲ್ಲಿ ಬಿದ್ದ ಬೆಂಕಿ ಅನಾಹುತಗಳು ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದೆ.ಆದರೂ ಸಹ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಇದಲ್ಲದೆ ಬೆಂಗಳೂರಿನಲ್ಲಿ 23 ಜನರಿಗೆ ಪಟಾಕಿ ಸಿಡಿಸಿ ಅನಾಹುತಗಳು ನಡೆದಿವೆ.
ಶಿವಮೊಗ್ಗದಲ್ಲಿ ಪರಾವಾನಗಿ ಇಲ್ಲದ ಪಟಾಕಿ ಅಂಗಡಿಯ ಮೇಲೆ ಪೊಲೀಸ್ ದಾಳಿ ನಡೆದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪರವಾನಗಿ ಹೊಂದದೆ ಮಾರಾಟ ಮಾಡುವ ಮಳಿಗೆಗಳ ಮೇಲೆ 13 ಎಫ್ಐಆರ್ ದಾಖಲಾಗಿವೆ. 6 ಎಫ್ಐಆರ್ ನಗರದ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
ಅದರಂತೆ ಶಿವಮೊಗ್ಗದಲ್ಲಿ ಸಧ್ಯದವರೆಗೆ ಪ್ರಮುಖ ಘಟನೆಗಳು ನಡೆದು ಕಣ್ಣು ಅಥವ ಇತರೆ ಭಾಗಗಳಿಗೆ ಅನಾಹುತ ಸಂಭವಿಸಿದ ವರದಿಯಾಗದಿದ್ದರೂ ಪಟಾಕಿ ಸಿಡಿಸಿ ಇಬ್ಬರು ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗದ ಹಾಯ್ ಹೊಳೆ ಯ 23 ವರ್ಷದ ಯುವತಿ ಪಟಾಕಿ ಸಿಡಿಸಲು ಹೋಗಿ ಕೈ ಗಳಿಗೆ ಗಾಯಚಾಗಿದೆ.ಅದರಂತೆ ಮತ್ತೀರ್ವ ಬಾಕನಿಗೆ ಗಾಯಗಳಾಗಿವೆ. ಇಂದು ದೀಪಾವಳಿಯ ಕೊನೆಯ ದಿನವಾಗಿದೆ. ಬಹುತೇಕ ಪಟಾಕಿಗಳು ಇಂದು ಸುಡಲಾಗುತ್ತದೆ. ಬಹಳ ಎಚ್ಚರಿಕೆಯಿಂದ ಸಂಭ್ರಮದಲ್ಲಿ ಪಾಲದಗೊಳ್ಳುವ ಅಗತ್ಯವಿದೆ.
ಇದನ್ನೂ ಓದಿ-https://suddilive.in/archives/3033
