ರಾಜಕೀಯ ಸುದ್ದಿಗಳು

ರಾಘವೇಂದ್ರರನ್ನ ಕೇವಲ ಸಂಸದನಾಗಿ ಗೆಲ್ಸೋದಲ್ಲ ಸಚಿವರನ್ನಾಗಿ ಗೆಲ್ಲಿಸಬೇಕು-ಈಶ್ವರಪ್ಪ

 ಸುದ್ದಿಲೈವ್/ಶಿವಮೊಗ್ಗ

ಸಂಸದ‌ ಬಿ.ವೈ. ರಾಘವೇಂದ್ರರನ್ನ ಈ ಬಾರಿಯ ಲೋಕ ಸಮರದಲ್ಲಿ ಗೆಲ್ಲಿಸುವುದು ಮತ್ರವಲ್ಲ ಅವರನ್ನ ಸಚಿವರನ್ನಾಗಿ‌ ಗೆಲ್ಲಿಸಬೇಕಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಘೋಷಿಸಿದ್ದಾರೆ.

ಅವರು ನಗರದ ಮೈಲಾರೇಶ್ವರ ದೇವಸ್ಥಾನದಲ್ಲಿ ಶಿವಮೊಗ್ಗ ನಗರ ಸಮಿತಿ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನ ಉದ್ಘಾಟಿಸಿ ಮಾತನಾಡಿ, ಮತ್ತೆ ಪ್ರಧಾನಿಯಾಗಿ ಮೋದಿಯನ್ನ ಆರಿಸೊಣ. ರಾಘಣ್ಣನನ್ನ‌ ಗೆಲ್ಲಿಸುವುದು ಮಾತ್ರವಲ್ಲ ಸಚಿವರನ್ನಾಗಿ ಆರಿಸಲು ಗೆಲ್ಲಿಸಬೇಕಿದೆ. ಇದಕ್ಕೆ ಅತಿ ಹೆಚ್ಚು ಮತ ಶಿವಮೊಗ್ಗ ನಗರ ಕ್ಷೇತ್ರದಲ್ಲಿಯೇ ನೀಡಬೇಕಿದೆ ಎಂದು ಈಶ್ವರಪ್ಪ ಕರೆ ನೀಡಿದರು.

ಈ ಬಾರಿ ಚುನಾವಣೆ ಮತ ಕೇಳಲು ಸುಲಭವಾಗಿದೆ. ಮೂರು ಅಂಶಗಳನ್ನ ನಮ್ಮ ಜೀವನದಲ್ಲಿ ನೋಡ್ತೀವೋ ಇಲ್ಲವೋ ಎಂದು ಅಂದುಕೊಂಡಿದ್ವಿ ಅದೆಲ್ಲವೂ ಮೋದಿ ಸರ್ಕಾರದಲ್ಲಿ ಕಾಣುವ ಭಾಗ್ಯ ನಮಗೆ ದೊರೆತಿದೆ ಎಂದರು.

ಅಯೋಧ್ಯ ರಾಮಮಂದಿರ ಪುನರ್ ನಿರ್ಮಾಣ, ಕಾಶೀ ವಿಶ್ವಾನಾಥನ ದೇವಸ್ಥಾನದಲ್ಲಿ ಪೂಜೆಗೆ ಅವಕಾಶ ನೀಡಲಾಗಿರುವುದು.‌ ಅಡ್ವಾನಿಗೆ ಭಾರತ ರತ್ನ ಪ್ರಶಸ್ತಿ ನೀಡಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.

ಹಿಂದುತ್ವದ ಆಧಾರದ ಮೇಲೆ ಬಿಜೆಪಿ ಕೆಲಸ ಮಾಡ್ತಾ ಇದೆ. ಕಾಂಗ್ರೆಸ್ ಸರ್ಕಾರ ಆಡಳಿತ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ. ಹಿಜಾಬ್ ವಿಚಾರದಲ್ಲಿ ಸುಳ್ಳಿನ ನಾಟಕ ವಾಡಿ ಸಿದ್ದರಾಮಯ್ಯ ನೋಬೆಲ್ ಪ್ರಶಸ್ತಿ ದೊರೆಯುವಂತಾಗಿದೆ. ಅಡ್ವಾಣಿಗೆ ಭಾರತ ರತ್ನ ದೊರೆತರೆ. ಸಿದ್ದರಾಮಯ್ಯನಿಗೆ ಸುಳ್ಳಿನ ಸರ್ದಾರ ಎಂದು ನೋಬೆಲ್ ಪ್ರಶಸ್ತಿ ಕೊಡಬೇಕು ಎಂದು ಹೇಳಿದ್ದಾರೆ.

ರಾಜ್ಯಕ್ಕೆ ಅನುದಾನ ಸಿಗ್ತಾ ಇಲ್ಲ ಎಂದು ಡಿಕೆಸುರೇಶ್ ದೇಶದ ವಿಭಜನೆಯ ಮಾತನಾಡಿದ್ರು. ಆದರೆ ಖರ್ಗೆ ಮತ್ತು ಸಿದ್ದರಾಮಯ್ಯ ಇದನ್ನ ಒಪ್ಪಲಿಲ್ಲ. ಇದಕ್ಕೆ ಇಡೀ ದೇಶ ಡಿಕೆಸು ವಿರುದ್ದ ತಿರುಗಿಬೀಳುವಂತಾಗಿದೆ. ಖರ್ಗೆ ಸಂಸತ್ ನಲ್ಲಿ 400 ಸ್ಥಾನ ಎಂದು ಘೋಷಿಸಿದ್ದಾರೆ. ಈ ಬಾರಿ 400 ಹೆಚ್ಚು ಸ್ಥಾನ ಗೆಲ್ಲಿಸುವ ಜವಬ್ದಾರಿ ನಮ್ಮದಾಗಿದೆ ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದಲೇ 60 ಸಾವಿರ ಲೀಡ್ ನೀಡಬೇಕಿದೆ. ಅಯೋದ್ಯ, ಕಾಶಿ ನಂತರ ಮಥುರ ಮಂದಿರವನ್ನೂ ಕಟ್ಟಲಿದ್ದೇವೆ. ಇಷ್ಟುದಿನ ಜೈಶ್ರೀರಾಮ್ ಎಂಬ ಘೋಷಣೆ ಕೂಗಲಾಗಿತ್ತು. ಇನ್ನು‌ಮುಂದೆ ಹರ ಹರ ಮಹಾದೇವ ಮತ್ತು‌ಭೋಲೋ ಶ್ರೀಕೃಷ್ಣ ಪರಮಾತ್ಮಕೀ ಜೈ ಎಂದು ಘೋಷಣೆ ಕೂಗಬೇಕಿದೆ ಎಂದು ಕರೆ ನೀಡಿದರು.

ಇದನ್ಬೂ ಓದಿ-https://suddilive.in/archives/8395

Related Articles

Leave a Reply

Your email address will not be published. Required fields are marked *

Back to top button