ಸ್ಥಳೀಯ ಸುದ್ದಿಗಳು

ಟ್ರೀಪಾರ್ಕ್ ಮುಚ್ಚುವಂತೆ ಆಗ್ರಹ

ಸುದ್ದಿಲೈವ್/ಶಿವಮೊಗ್ಗ

ಮೊನ್ನೆ ಮುದ್ದಿನಕೊಪ್ಪದ ಟ್ರೀಪಾರ್ಕ್ ನಲ್ಲಿ 6 ವರ್ಷದ ಸುಮಿಕ್ಷ ಎಂಬ ಮಗು ಸಾವನ್ನಪ್ಪಿದ್ದು ಸಾವನ್ನಪ್ಪಿದ ಬೆನ್ನಲ್ಲೇ ಬಾಹುಸಾರ ಕ್ಷತ್ರಿಯ ಮಹಾಜನ ಸಮಾಜ(ರಿ.) ಮಗು ಸಾವಿಗೆ ಕಾರಣರಾದವರ ವಿರುದ್ಧ ಕ್ರಮವಹಿಸುವಂತೆ ಹಾಗೂ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ಮನವಿ ಸಲ್ಲಿಸಿದೆ.

ಶಿವಮೊಗ್ಗ ನಗರದ ಗಾಂಧಿ ಬಜಾರ್‌ನ ಗೀತಾಂಜಲಿ ಟೆಕ್ಸ್‌ ಟೈಲ್ಸ್ ನ ಮಾಲೀಕರಾದ ಹರೀಶ ಆಂಬೊರೆ ಮತ್ತು ಲಕ್ಷ್ಮೀ ಆಂಬೊರೆ ದಂಪತಿಗಳು ತಮ್ಮ ಪುತ್ರಿ ಸಮೀಕ್ಷಾಳೊಂದಿಗೆ ಜ.28 ರಂದು ಸಂಜೆ ಶಿವಮೊಗ್ಗದ ಮುದ್ದಿನಕೊಪ್ಪದಲ್ಲಿರುವ ಟ್ರೇಪಾರ್ಕ್‌ಗೆ ತೆರಳಿದ್ದರು. ಈ ವೇಳೆ ಆಟವಾಡಲೆಂದ ಸಿಮೆಂಟ್ ಜಿಂಕೆ ಮೇಲೆ ಏರಿದ್ದ 6 ವರ್ಷದ ಮಗು ಸಮೀಕ್ಷಾ ಜಿಂಕೆಯ ಪ್ರತಿಮೆ ಸಮೇತ ಕೆಳಗೆ ಬಿದ್ದು ಸಾವನ್ನಪ್ಪಿದ್ದಳು.

ಮಗಳನ್ನು ಕಳೆದುಕೊಂಡಿರುವ ತಂದೆ-ತಾಯಿ ಹಾಗೂ ಕುಟುಂಬ ಕಣ್ಣೀರಿನಲ್ಲಿ ಕೈತೊಳೆದುಕೊಂಡಿದ್ದಾರೆ. ಇನ್ನೂ ಬಾಳಿ ಬದುಕಬೇಕಾದ ಜೀವ ದುರಂತ ಅಂತ್ಯ ಕಂಡಿರುವುದು ಪ್ರತಿಯೊಬ್ಬರಿಗೂ ನೋವುಂಟು ಮಾಡಿದೆ. ಈ ನೋವಿನಲ್ಲೂ ಮಗುವಿನ ತಂದೆ ಹರೀಶ್‌ ರವರು ತಮ್ಮ ಮಗಳ ಕಣ್ಣನ್ನು ದಾನ ಮಾಡುವ ಮೂಲ ಸಾರ್ಥಕತೆ ಮೆರೆದಿದ್ದಾರೆ. ಈ ಮೂಲಕ ಇನ್ನೋರ್ವರ ಬಾಳಿಗೆ ಬೆಳಕು ತರಲು ಮುಂದಾಗಿದ್ದಾರೆ.

ಈ ಘಟನೆ ಭಾವಸಾರ ಕ್ಷತ್ರೀಯ ಸಮಾಜಕ್ಕೂ ಅತೀವ ನೋವು ತಂದಿದೆ. ಪ್ರತಿಮೆ ಮುರಿದಿದ್ದರೂ ಅದನ್ನು ಸರಿಪಡಿಸದೇ ಉದಾಸೀನ ಮಾಡಿ, ಮಗುವಿನ ಸಾವಿಗೆ ಕಾರಣರಾದವರ ವಿರುದ್ಧ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಇಂತಹ ಘಟನೆ ಆಗದಂತೆ ಎಚ್ಚರವಹಿಸಬೇಕು. ಮೃತ ಮಗುವಿನ ಕುಟುಂಬಕ ಸೂಕ್ತ ಪರಿಹಾರ ನೀಡಬೇಕು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.

ಟಿ. ಡಿ. ಮಂಜುನಾಥ್ ಸತ್ಯನಾರಾಯಣ ಎನ್. ಕೆ. ವಿನಯ್ ವಿ. ತಾಂದಳೆ ನವೀನ್ ಸಾಕ್ರೆ ಸಂತೋಷ್ ಸಾಕ್ರೆ ವೆಂಕಟೇಶ್ ಎಂ. ಆ‌ರ್. ವಿನಯ್ ತೇಲ್ಕರ್ ನಿಖಿಲ್ ನವಲೆ ಕಲ್ಯಾಣ್ ಕುಮಾರ್ ಸಂತೋಷ್ ಮಹೇಂದ್ರಕರ್ ಮನವಿಕೊಡುವ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/8011

Related Articles

Leave a Reply

Your email address will not be published. Required fields are marked *

Back to top button