ನ್ಯಾಯಾಲಯದ ಆದೇಶವಿದ್ದರೂ, ಬೀದಿಯಲ್ಲಿ ನಿಂತಿದ್ದಾರೆ ಸಿನಿಯರ್ ಸಿಟಿಜನ್ ಪುಟ್ಟಸ್ವಾಮಿ-ನ್ಯಾಯಾ ಎಲ್ಲಿದೆ ದೇವ್ರು?

ಸುದ್ದಿಲೈವ್/ಶಿವಮೊಗ್ಗ

ಶಿವಮೊಗ್ಗದಲ್ಲಿ ದಿನಬೆಳಗಾದರೇ ಜಾಗದ ವಿಚಾರವಾಗಿ ನಡೆಯುವ ವಿವಾದಗಳು ಒಂದಲ್ಲ ಒಂದು ಪೊಲೀಸ್ ಸ್ಟೇಷನ್ ಮೆಟ್ಟಿಲೇರುತ್ತದೆ. ಆದರೆ ಇವುಗಳಲ್ಲಿ ಎಷ್ಟರಮಟ್ಟಿಗೆ ನ್ಯಾಯ ಸಿಗುತ್ತವೆ ಎಂದು ಹೇಳುವುದು ಕಷ್ಟ.. ಆದರೆ ಇಲ್ಲೊಬ್ಬ ಬಡಪಾಯಿ ಸೀನಿಯರ್ ಸಿಟಿಜನ್ ಗೆ ನ್ಯಾಯ ಸಿಗಬೇಕಿದೆ.. ನ್ಯಾಯಕ್ಕಾಗಿ ಹಳ್ಳಿಯ ಹಿರಿಯ ಸಿಕ್ಕಸಿಕ್ಕವರನ್ನ ಭೇಟಿಯಾಗಿ ನ್ಯಾಯ ಕೊಡಿಸಿ ಎಂದು ಜೆರಾಕ್ಸ್ ಮಾಡಿಸಿದ ಕಾಗದ ಪತ್ರಗಳನ್ನ ಹಿಡಿದು ಓಡಾಡುತ್ತಿದ್ದಾರೆ..ಸ್ವಂತ ಮಗನನ್ನೆ ಕಳೆದುಕೊಂಡರೂ ಹಿರಿಯಣ್ಣನಿಗೆ ನ್ಯಾಯ ಮಾತ್ರ ಒದಗಿಸುವ ಕೆಲಸ ಪೊಲೀಸ್ ಇಲಾಖೆಯಿಂದಲೂ ಆಗುತ್ತಿಲ್ಲ ಎನ್ನುವ ವಿಚಾರ ಗಮನಾರ್ಹವಾಗಿದೆ..
ಏನಿದು ಪ್ರಕರಣ,
ವಿನೋಬನಗರ ಸ್ಟೇಷನ್ ವ್ಯಾಪ್ತಿಯಲ್ಲಿ 22-10-2023 ರಂದು ಆತ್ಮಹತ್ಯೆ ಪ್ರಕರಣವೊಂದು ದಾಖಲಾಗಿತ್ತು. ಅಂದು ಸಂಜೆ ಗೆಜ್ಜೇನಹಳ್ಳಿಯ ಹನುಮಂತನಗರದ ಜಮೀನು ಸರ್ವೆ ನಂಬರ್ 111 ರಲ್ಲಿ ಮೋಹನ್ 37 ವರ್ಷದ ಯುವಕನೊಬ್ಬ ಕ್ರಿಮಿನಾಶಕ ಕುಡಿದಿದ್ದರು. ಆ ತಕ್ಷಣವೇ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಪ್ರಕ್ರಿಯೆಯ ಪ್ರಕಾರ ಪೊಲೀಸರು ಪ್ರಕರಣವನ್ನು ಉಲ್ಲೇಖಿಸಿದ್ದರು. ಆನಂತರ 24 ಗಂಟೆ ಮೋಹನ್ ಜೀವಂತವಾಗಿದ್ದರು. ತದನಂತರ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಈ ನಡುವೆ ಮೃತ ಮೋಹನ್ ಸಾವಿಗೂ ತಮ್ಮ ಆತ್ಮಹತ್ಯೆ ಕಾರಣವನ್ನ ಸಹ ಪೊಲೀಸರ ಸಮ್ಮುಖದಲ್ಲಿಯೇ ಹೇಳಿದ್ದಾಗಿ ಅವರ ತಂದೆ ಪುಟ್ಟಸ್ವಾಮಿ ಹೇಳಿದ್ದಾರೆ. ಈ ಸಂಬಂಧ ವಿನೋಬನಗರ ಪೊಲೀಸ್ ಸ್ಟೇಷನ್ ನಲ್ಲಿ ಐಪಿಸಿ 306 ಪ್ರಕಾರ ಎಫ್ಐಆರ್ ಸಹ ದಾಖಲಾಗಿದೆ. ಇಬ್ಬರು ವ್ಯಕ್ತಿಗಳ ವಿರುದ್ಧ ಜೀವ ಬೆದರಿಕೆ ಹಾಕಿ ಆತ್ಮಹತ್ಯೆ ಬೆದರಿಕೆ ಹಾಕಿದ ಬಗ್ಗೆ ಆರೋಪಿಸಲಾಗಿದೆ..
ಇದಿಷ್ಟು ಕಾನೂನು ಪ್ರಕ್ರಿಯೆಯಲ್ಲಿ ನಡೆದ ವಿಚಾರವಾದರೆ, ಇದುವರೆಗು ಹಿರಿಯ ಪುಟ್ಟಸ್ವಾಮಿಯವರು ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸ್ತಿಲ್ಲ ಎಂದು ಹೋರಾಡುತ್ತಿದ್ದಾರೆ. ಇದಕ್ಕಾ ಎಸ್ಪಿ ಕಚೇರಿ ಮೆಟ್ಟಿಲೇರಿದ್ದರೂ ಅವರನ್ನ ಎಸ್ಪಿಯವರನ್ನ ಭೇಟಿ ಮಾಡಲು ಅವಕಾಶ ಮಾಡಿಕೊಡದೇ ಹಿಂಬರಹ ಬರದುಕೊಟ್ಟಿದ್ದಾರೆ ಎನ್ನಲಾಗಿದೆ.. ಇನ್ನೂ ಸಂಬಂಧ ಪಟ್ಟ ಪೊಲೀಸ್ ಸ್ಟೇಷನ್ನಲ್ಲಿಯು ಪ್ರಕರಣದ ಬಗ್ಗೆ ನ್ಯಾಯ ಕೊಡಿಸುತ್ತಿಲ್ಲವಂತೆ. ತಂದೆಯೊಬ್ಬ ಮಗನ ವಿಚಾರವಾಗಿ ದಾಖಲಿಸಿದ ಕೇಸ್ ನ ಮಾಹಿತಿಯು ಸಮರ್ಪಕವಾಗಿ ನೀಡುತ್ತಿಲ್ಲ ಎನ್ನುತ್ತಿದ್ದಾರೆ ಪುಟ್ಟಸ್ವಾಮಿಯವರ ಕುಟುಂಬಸ್ಥರು..
ಇನ್ನೂ ಈ ಪ್ರಕರಣದಲ್ಲಿ ಜಮೀನು ವಿವಾದ ಕೂಡ ಅಂಟಿಕೊಂಡಿದೆ. ಪುಟ್ಟಸ್ವಾಮಿಯವರಿಗೆ ಸಂಬಂಧಿಸಿದ ಜಾಗದ ವಿವಾದ ಕೋರ್ಟ್ನಲ್ಲಿದ್ದು, ಅದಕ್ಕೆ ಸಂಬಂಧಿಸಿದ ಆದೇಶ ಸಹ ಆಗಿದೆ. ಇದರ ನಡುವೆ ಮತ್ಯಾರೋ ಕುಟುಂಬಸ್ಥರು ಇಲ್ಲದ ಹೊತ್ತಿನಲ್ಲಿ ಸಂಬಂಧಿಸಿದ ಜಮೀನನಲ್ಲಿ ಬೇಲಿ ಹಾಕಿದ್ದರಂತೆ.. ಅದೇ ವಿಚಾರದಲ್ಲಿ 21 ರಂದು ಸ್ಥಳದಲ್ಲಿ ಗಲಾಟೆ ನಡೆದು ಜೀವ ಬೆದರಿಕೆ ಹಾಕಿದ್ದಕ್ಕೆ ಮೋಹನ ವಿಷ ಕುಡಿದು ಆತ್ಮಹತ್ಯೆ ಯತ್ನಿಸಿದ್ದಾರೆ.
ನಡೆದ ಘಟನೆ ಇಷ್ಟಾದರೆ, ತಮ್ಮದೇ ಆಸ್ತಿ ಕೋರ್ಟ್ನಲ್ಲಿ ವ್ಯಾಜ್ಯಗೆದ್ದು ಆದೇಶ ಕಾಪಿ ಹಿಡಿದುಕೊಂಡಿರುವ ಪುಟ್ಟಸ್ವಾಮಿ, ತಮ್ಮ ಭೂಮಿಯನ್ನ ದಕ್ಕಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಸ್ವಂತಃ ಮಗನನ್ನು ಸಹ ಕಳೆದುಕೊಂಡಿದ್ದಾರೆ. ಅನ್ನ ಕೊಡುವ ಭೂಮಿ ಉಳಿಸಿಕೊಳ್ಳುವ ಕಾಗದ ಪತ್ರದ ಜೊತೆಗೆ ತಮ್ಮ ಮಗನ ಸಾವಿಗೆ ಸಂಬಂಧಿಸಿದ ಪತ್ರಗಳನ್ನ ಹಿಡಿದು ಸಾರ್ ನ್ಯಾಯ ಕೊಡಿಸಿ ಎನ್ನುತ್ತಿದ್ದಾರೆ. ಎಲ್ಲವೂ ಇದ್ದೂ ಏನೂ ಸಿಗದೇ ಅನ್ಯಾಯಕ್ಕೆ ಒಳಗಾದ ವ್ಯಕ್ತಿಗೆ ಕಾನೂನು ನ್ಯಾಯ ಒದಗಿಸಬೇಕಿದೆ.
ಇದನ್ನೂ ಓದಿ-https://suddilive.in/archives/2839
