ಸ್ಥಳೀಯ ಸುದ್ದಿಗಳು

ದೇವಾಲಯಗಳಿರುವ ಜಾಗದಲ್ಲಿ ಸೈಟ್ ಬೇಡ ಎಂದ ಗ್ರಾಮಸ್ಥರು, ಏನಿದು ಸುದ್ದಿ?

ಸುದ್ದಿಲೈವ್/ಶಿವಮೊಗ್ಗ

ನಮಗೆ ಸೈಟ್ಗಳು ಬೇಡ ! ನಮ್ಮ ಊರಿನ ಗ್ರಾಮಠಾಣ ನಮ್ಮ ಸ್ಥಳಿದೇವಿ ಮಾರಮ್ಮ ಮತ್ತು ಬಸವಣ್ಣನ ನ ಜಾತ್ರೆ ಗೆ ಮೀಸಲಿಡಬೇಕು ಎಂದು ವೀರಣ್ಣನಬೆನವಳ್ಳಿ  ಗ್ರಾಮಸ್ಥರ ಮನವಿ ಮಾಡಿಕೊಂಡಿದ್ದಾರೆ.

ಶಿವಮೊಗ್ಗ ತಾಲೂಕು ಆಯನೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ವೀರಣ್ಣನ ಬೆನವಳ್ಳಿ ಸರ್ವೆ ನಂ ೧೬ ರಲ್ಲಿ ೪.ಎಕರೆ ಮೂವೈತ್ತೈದು ಗುಂಟೆ ಜಮೀನು ( ಸೋಮಗೊಪ್ಪ ) ಅನಾದಿಕಾಲದಿಂದಲೂ ಗ್ರಾಮಠಾಣ ವ್ಯಾಪ್ತಿಗೆ ಒಳಪಟ್ಟಿದೆ.‌

ಆದರೆ ಗ್ರಾಮಪಂಚಾಯ್ತಿಯವರು ಏಕಾಏಕಿ ಸ್ಥಳಿಯರಿಗೆ ಮಾಹಿತಿ ತಿಳಿಸದೆ , ಇಂದು ಬೆಳಗ್ಗೆ ಯಾವುದೆ ಮಾನದಂಡಗಳನ್ನು ಪಾಲಿಸದೆ ಯಾವುದೆ ರೆಗ್ಯಲೆಷನ್ ಇಲ್ಲದೆ ಒಂದು ಪಟ್ಟಿಯನ್ನು ತಯಾರು ಮಾಡಿ, ಅವರಿಗೆ ಬೇಕಾದ ಪಕ್ಕದ ಊರಿನ ಜನಗಳನ್ನು ತಂದು ಗುಡಿಸಲು ಹಾಕೊದಿಕ್ಕೆ ಅಕ್ರಮವಾಗಿ ವಾಸಿಸಲು ಅವಕಾಶ ಕಲ್ಪಿಸಿರುವ ಬಗ್ಗೆ ಆರೋಪಕೇಳಿ ಬಂದಿದೆ.

ಆದ್ದರಿಂದ ವಿಷಯ ತಿಳಿದ ಸ್ಥಳಿಯರು ಇದು ಸ್ಥಳಿಯ ದೇವತೆ ಮಾರಮ್ಮ,ಮತ್ತು ಬಸವಣ್ಣ ನ ದೇವಾಲಾಯಗಳು ಇರುವ ಜಾಗ ,ನಾವು ಆ ದೇವರನ್ನೆ ನಂಬಿ ಬದುಕುತ್ತಿದ್ದೆವೆ ,ದಯವಿಟ್ಟು ಆ ಧಾರ್ಮಿಕ ನಂಬಿಕೆಗೆ ಚ್ಯತಿಬಾರದು.

ಹಾಗಾಗಿ ,ದಯವಿಟ್ಟು ಈ ವಿಷಯವನ್ನು ಕುರಿತು ನಾವು ನಾಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೆವೆ ಎಂದು ಸ್ಥಳಿಯ ಮುಖಂಡರಾದ ತಿಪ್ಪಜ್ಜ ಚಂದ್ರಪ್ಪ, ದಬ್ಬುಳ್ಳಿ ಶಂಕ್ರಪ್ಪ ,ಮಲ್ಲೇಶ್ ,ರವಿ, ಆಯಾಸ್ ಸಾಹೆಬ್ರು ,ಮೇಶಪ್ಪ, ಪ್ಲೆಂಬರ್ ಮಂಜು , ,ಆಟೋ ಪ್ರಕಾಶ್ ,ಮೈಲಾರಿ ,ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ-https://suddilive.in/archives/786

Related Articles

Leave a Reply

Your email address will not be published. Required fields are marked *

Back to top button