ರಾಜಕೀಯ ಸುದ್ದಿಗಳು

ಸೊಳ್ಳೆಗಳನ್ನ ನಿಯಂತ್ರಿಸುವಂತೆ ಮನವಿ

ಸುದ್ದಿಲೈವ್/ಶಿವಮೊಗ್ಗ

ಈ ಬಾರಿ ಮಳೆ ಕೈಕೊಟ್ಟಿದೆ. ಫೆಬ್ರವರಿ ಮಧ್ಯ ಭಾಗದಲ್ಲಿರುವ ನಮಗೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಈ ಮಧ್ಯೆ ಶಿವಮೊಗ್ಗ ನಗರದಲ್ಲಿ ಮಿತಿಮೀರಿರುವ ಸೊಳ್ಳೆ ಹಾವಳಿ ಹೆಚ್ಚಾಗಿದೆ. ಇದನ್ನ ತಡೆಯುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಇಂದು ಮಲೆನಾಡು ಕೇಸರಿ ಪಡೆ ಚಂದ್ರಶೇಖರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಶಿವಮೊಗ್ಗ ನಗರದಲ್ಲಿ ಸೊಳ್ಳೆಗಳಿಂದ ಮಲೇರಿಯಾ. ಡೆಂಗ್ಯೂ ರೋಗಗಳು ಹರಡುತ್ತಿದ್ದು ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಂಭಂದಪಟ್ಟ ಮಹಾನಗರ ಪಾಲಿಕೆ ಕೂಡಲೇ ಸ್ವಚ್ಚತೆಗೆ ಹೆಚ್ಚಿನ ಗಮನ ಹರಿಸುವಂತೆ ಸಂಘಟನೆ ಆಗ್ರಹಿಸಿದೆ.

ಜೊತೆಗೆ ಫಿನಾಯಿಲ್ ಸಿಂಪಡಣೆ ಫಾಂಗಿಂಗ್ ಕಾರ್ಯವನ್ನ ಕೂಡಲೇ ಮಾಡುವಂತೆ ಸೂಚಿಸಬೇಕು. ಜೊತೆಗೆ, ಪ್ರತಿ ವಾರ್ಡ್‌ಗಳಲ್ಲಿ ಸರ್ಕಾರದ ಆದೇಶದಂತೆ ವಾರ್ಡ್ ಸಮಿತಿಗಳನ್ನು ಅನುಷ್ಠಾನಕ್ಕೆ ತರುವುದರೊಂದಿಗೆ ವಾರ್ಡಿನ ನಾಗರೀಕರ ಜೊತೆಗೆ ಉತ್ತಮವಾದ ಸಂಬಂಧವನ್ನು ಇಟ್ಟುಕೊಂಡು ವಾರ್ಡ್ ಸ್ವಚ್ಛತೆಗೆ ಆದ್ಯತೆ ನೀಡಬೇಕಾಗಿದೆ ಎಂದು ಸಂಬಂಧಪಟ್ಟ ಆರೋಗ್ಯ ಇಲಾಖೆ ಮತ್ತು ಶಿವಮೊಗ್ಗ ಮಹಾನಗರಪಾಲಿಕೆಗೆ ಸೂಚಿಸುವಂತೆ ಸಂಘಟನೆ ಕೋರಿದೆ.

ಇದನ್ನೂ ಓದಿ-https://suddilive.in/archives/9116

Related Articles

Leave a Reply

Your email address will not be published. Required fields are marked *

Back to top button