ಸ್ಥಳೀಯ ಸುದ್ದಿಗಳು

ಸಾಂದೀಪಿನಿ ಶಾಲೆಯ ಮೇಷ್ಟ್ರನ್ನ ಠಾಣೆಗೆ ಕರೆದುಕೊಂಡು ಹೋದ ಪೊಲೀಸರು

ಸುದ್ದಿಲೈವ್/ಶಿವಮೊಗ್ಗ

ಬೊಮ್ಮನ್ ಕಟ್ಟೆ ಅರವಿಂದ ನಗರದಲ್ಲಿರುವ ಖಾಸಗಿ ಶಾಲೆಯ ಮೇಸ್ಟ್ರೊಬ್ಬರು ವಿದ್ಯಾರ್ಥಿಯೊಬ್ಬನ ಮೇಲೆ ಹೊಡೆದಿರುವ ಹೊಡೆತ ಈಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಪೋಷಕರ ದಂಡು ಶಾಲೆ ಪ್ರವೇಶದ್ವಾರದ ಮುಂದೆ ಪ್ರತಿಭಟನೆ ನಡೆಸಿದೆ.

ಸಾಂದೀಪಿನಿ ಶಾಲೆಯ ಎಸ್ ಎಸ್ ಎಲ್ ಸಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ವಸ್ತುಪ್ರದರ್ಶನ ವೇಳೆ  ತಾಯಿಯ ಮೊಬೈಲ್ ಪಡೆದು ವಿಡಿಯೋ ತೆಗೆದ ವಿಷಯಕ್ಕೆ ಗಣಿತ ಶಾಸ್ತ್ರದ ಮೇಸ್ಟ್ರು ಹಲ್ಲೆ ನಡೆಸಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಆದರೆ ಮಗು ಮೊಬೈಲ್ ಶೂಟ್ ಮಾಡಿಲ್ಲ ಎಂದು ಹೇಳಿಕೆ ನೀಡಿದೆ.

ಶಾಲೆಯ ಕಾರಿಡಾರ್ ನಲ್ಲಿ ವಿದ್ಯಾರ್ಥಿಯನ್ನ ಮನಸ್ಸೋ ಇಚ್ಛೆ ಹೊಡೆದಿರುವುದಾಗಿ ಪೋಷಕರು ಆರೋಪಿಸಿದ್ದು ಮಗನನ್ನ ಮೆಗ್ಗಾನ್ ನಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ ಕರೆದುಕೊಂಡು ಹೋಗಲಾಗಿದೆ. ಮಗುವಿನ ಪೋಷಕರು ಮಗ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಜವಬ್ದಾರರು ಎಂದು ಆರೋಪಿಸಿ‌ ಶಾಲೆಯ ಮುಂಭಾಗದಲ್ಲಿ ದಿಡೀರ್ ಧರಣಿ ನಡೆಸಿದ್ದಾರೆ.

ಮೇಷ್ಟ್ರು ಹೊಡೆಯುವಾಗ ವಿದ್ಯಾರ್ಥಿ ಟಿಫಿನ್ ಕ್ಯಾರಿಯರ್ ಅಡ್ಡ ನೀಡಿದ್ದು ಟಿಫಿನ್ ಕ್ಯಾರಿಯರ್ ನುಜ್ಜುಗುಜ್ಜಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲೆಯ ಮುಂದೆ ನಡೆದ ಧರಣಿಯ ವೇಳೆ ಹಿಂಭಾಗದಲ್ಲಿಯೇ ಇದ್ದ ಮೇಷ್ಟ್ರನ್ನ ಹೊರಗೆ ಬರುವಂತೆ ಕರೆಯಲಾಗಿದೆ. ಸ್ಥಳದಲ್ಲಿಯೇ ಇದ್ದ 112 ಪೊಲೀಸರು ಮೇಸ್ಟ್ರನ್ನ ಸೆಕ್ಯೂರ್ ಮಾಡಿ ಠಾಣೆಗೆ ಕರೆದೊಯ್ಯಿದ್ದಾರೆ.

ಸಧ್ಯಕ್ಕೆ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪೋಷಕ ಗಿರೀಶ್ ದೂರು ನೀಡಿದ್ದಾರೆ. ದೂರಿನ ಹಿನ್ನಲೆಯಲ್ಲಿ  ಮೇಷ್ಟ್ರನ್ನ ಠಾಣೆಗೆ ಕರೆದೊಯ್ಯಲಾಗಿದೆ.  ಮೇಷ್ಟು  ಹೊಡೆದಿರುವುದನ್ನ ಶಾಲೆಯ ನಿರ್ದೇಶಕ ರಾಜೇಶ್ ಸ್ಪಷ್ಟಪಡಿಸಿ ಶಾಲೆ ಆಡಳಿತ ಮಂಡಳಿ ಸಭೆ ನಡೆಸಿ ಘಟನೆ ಬಗ್ಗೆ ತೀರ್ಮಾನಿಸಲಾಗುವುದು ಎಂದರು. 

ಇದನ್ನೂ ಓದಿ-https://suddilive.in/archives/3453

Related Articles

Leave a Reply

Your email address will not be published. Required fields are marked *

Back to top button