ನವವಿವಾಹಿತೆ ನಿಗೂಢ ಕಾಯಿಲೆಗೆ ಬಲಿ

ಸುದ್ದಿಲೈವ್/ರಿಪ್ಪನ್‌ಪೇಟೆ

ನವವಿವಾಹಿತೆ ನಿಗೂಢವಾದ ಕಾಯಿಲೆಗೆ ಬಲಿಯಾಗಿದ್ದು ಫೋರೆನ್ಸಿಕ್ ವರದಿ ಬಂದ ಮೇಲೆ ಸಾವಿಗೆ ನಿಖರವಾದ ಕಾರಣವೇನು ಎಂಬುದು ತಿಳಿದು ಬರಲಿದೆ ಎಂದು ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಿಪ್ಪನ್ ಪೇಟೆ ಪಟ್ಟಣದ ಶಬರೀಶ ನಗರದ ಮಧುರ (31) ವರ್ಷದ ಎಂಬುವರು ಈ ನಿಗೂಢ ಕಾಯಿಲೆಗೆ ಬಲಿಯಾದ ಮಹಿಳೆಯಾಗಿದ್ದಾಳೆ. ಅ.05 ರಂದು ಒಪಿಡಿಯಲ್ಲಿ ಚಿಕಿತ್ಸೆ ಪಡೆದಿದ್ದ ಮಹಿಳೆ ಅ.06 ರಂದು ಸಾಗರದ ಆಸ್ಪತ್ರೆಯಲ್ಲಿ ಎಂದು ದಾಖಲಾಗಿದ್ದರು ಎಂದು ತಿಳಿದು ಬಂದಿದ್ದಾರೆ.
ನಿನ್ನೆ ಬೆಳಗ್ಗೆ ಸಾಗರ ಆಸ್ಪತ್ರೆಯಿಂದ ಮಹಿಳೆ ವೈದ್ಯಕೀಯ ವರದಿಯ ವಿರುದ್ಧ ಡಿಸ್ಚಾರ್ಜ್ ಆಗಿ ತಾಳಗುಪ್ಪದ ತಾಯಿ ಮನೆಗೆ ವಾಪಾಸ್ ಆಗಿದ್ದರು. ನಿನ್ನೆ ಸಂಜೆ ವೇಳೆ ಮತ್ತೆ ತಲೆ ನೋವು, ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಪ್ಲೇಟ್ ಲೇಟ್ಸ್ ಗಳು ಹೆಚ್ಚಿಗೆ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ. ಬ್ರೈನ್ ಹೆಮರೇಜ್ ಕಾಯಿಲೆಯಿಂದ ಅವರನ್ನ ಸಾಗರ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿತ್ತು.
ನಂತರ ವೈದ್ಯರ ಸಲಹೆಯಂತೆ ಬೆಳಗ್ಗೆ 5 ಗಂಟೆಗೆ ಸಾಗರದಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಈಕೆ ಕಳೆದ 6 ತಿಂಗಳ ಹಿಂದಷ್ಟೆ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಮಂಜುನಾಥ ಎಂಬುವವರೊಂದಿಗೆ ಸಪ್ತಪದಿ ತುಳಿದಿದ್ದರು. ಇದೀಗ ಶಬರೀಶ ನಗರದಲ್ಲಿ ಗಂಡನ ಮನೆ ಮತ್ತು ತಾಳಗುಪ್ಪದಲ್ಲಿ ನೀರವಮೌನ ಆವರಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇಂದು ಮಧ್ಯಾಹ್ನ ರಿಪ್ಪನ್‌ಪೇಟೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೆಲವರು ಈಕೆ ಡೆಂಗ್ಯೂವಿನಿಂದ ಮೃತಪಟ್ಟಿರುವುದಾಗಿ ಹೇಳಿದ್ದರೂ ವೈದ್ಯಾಧಿಕಾರಿಗಳು ಡೆಂಗ್ಯೂ ಅಲ್ಲ ಎಂದು ಹೇಳುತ್ತಿದ್ದಾರೆ.
ಫೋರೆನ್ಸಿಕ್ ಪ್ರಯೋಗಾಲಯದಿಂದ ವರದಿ ಬಂದ ಮೇಲೆ ನಿಖರ ಖಾಯಿಲೆ ಹೇಳಬಹುದು. ಬ್ರೈನ್ ಹೆಮರೇಜ್ ನಿಂದ ಮಹಿಳೆ ಸಾವನ್ನಪ್ಪಿರುವ ಶಂಕೆಯಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ-https://suddilive.in/archives/766
