ಕ್ರೈಂ ನ್ಯೂಸ್

ಕಳ್ಳತನ ಮಾಡಿ ಮನೆಗೆ ಬೆಂಕಿಹಚ್ಚಿ ಪರಾರಿಯಾಗಿದ್ದ ಆರೋಪಿಗಳು ಅರೆಸ್ಟ್!

ಸುದ್ದಿಲೈವ್/ಶಿವಮೊಗ್ಗ

ಮನೆಯ ಕಳ್ಳತನ ಮಾಡಿ ಮೆಗೆ ಬೆಂಕಿ ಇಟ್ಟು ಹೋಗಿದ್ದ ಪ್ರಕರಣವನ್ನ ಕೋಟೆ ಪೊಲೀಸರು ಪತ್ತೆಹಚ್ಚಿ ಇಬ್ವರು ಆರೋಪಿಗಳನ್ನ ಹಿಡಿದಿದ್ದಾರೆ.‌

ಮಾ.17 ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾನಗರದ ವಾಸದ ಮನೆಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿ ನಂತರ ಮನೆಯಲ್ಲಿನ ಹಾಸಿಗೆಗೆ ಬೆಂಕಿ ಹಾಕಿ ಹೋಗಿದ್ದರು. ಈ ಪ್ರಕರಣ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದಲ್ಲಿ ಆರೋಪಿ ಮತ್ತು ಕಳುವಾದ ಮಾಲಿನ ಪತ್ತೆಗಾಗಿ ಎಸ್ಪಿ ಮಿಥುನ್ ಕುಮಾರ್ ಜಿ.ಕೆ. ಅಡಿಷನಲ್ ಎಸ್ಪಿ ಅನಿಲ್ ಭೂಮರೆಡ್ಡಿ, ಮತ್ತು. ಕಾರ್ಯಪ್ಪ, ರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಾಬು ಆಂಜನಪ್ಪನವರ ಮೇಲ್ವಿಚಾರಣೆಯಲ್ಲಿ, ಕೋಟೆ ಪಿಐ ಗುರುಬಸವರಾಜ ಹೆಚ್,ನವರ ನೇತೃತ್ವದಲ್ಲಿ ಪಿಎಸ್ ಐ ಶಿವಕುಮಾರ್ ಡಿ, ಕೂಡಲ, ಎಎಸ್ಐ ಶ್ರೀಹರ್ಷ, ಎ.ಎಸ್.ಐ ಅಮೃತಬಾಯಿ, ಹಾಗೂ ಹೆಚ್.ಸಿ. ಅಣ್ಣಪ್ಪ, ನಾಗರಾಜ, ಸಿಪಿಸಿ ಗೊರವರ ಅಂಜಿನಪ್ಪ, ಕಿಶೋರ, ಜಯಶ್ರೀ ರವರನ್ನು ಒಳಗೊಂಡ ತನೀಖಾ ತಂಡವನ್ನು ರಚಿಸಲಾಗಿರುತ್ತದೆ.

ತನಿಖಾ ತಂಡವು ಮಾ.20 ರಂದು ಆರೋಪಿಗಳಾದ 1) ಆನಂದ.ಎ, 23 ವರ್ಷ ಸಾಯಿ ಇಂಟರ್ನ್ಯಾಷಿನಲ್ ಹೊಟೇಲ್ ಹತ್ತಿರ, ಶಿವಮೊಗ್ಗ, ಮತ್ತು 2) ಸಂಗೀತಾ.ಸಿ.ಎಸ್, 32 ವರ್ಷ, ಅಶೋಕ ರಸ್ತೆ. ಗಾಂಧಿಬಜಾರ್, ಶಿವಮೊಗ್ಗ, ರವರನ್ನು ಬಂಧಿಸಲಾಗಿದೆ.

ಆರೋಪಿತರಿಂದ ಪ್ರಕರಣಕ್ಕೆ ಸಂಬಂಧಿಸಿದ ರೂ 1,75,500/-ನಗದು ಹಣ, ಅಂದಾಜು ಮೌಲ್ಯ 1,49,450/- ರೂಗಳ ಒಟ್ಟು 2 ಕೆಜಿ 135 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, ಅಂದಾಜು ಮೌಲ್ಯ 1,26,000/- ರೂಗಳ ಒಟ್ಟು 19 ಗ್ರಾಂ ಬಂಗಾರದ ಒಡವೆಗಳು, ಅಂದಾಜು ಮೌಲ್ಯ 10,000/- ರೂಗಳ ಪ್ಲಂಬಿಂಗ್ ವಸ್ತುಗಳು ಮತ್ತು ಅಂದಾಜು ಮೌಲ್ಯ 1,15,000/- ರೂಗಳ ಕೃತ್ಯಕ್ಕೆ ಉಪಯೋಗಿಸಿದ 02 ಬೈಕ್ ಗಳು, ಅಂದಾಜು ಮೌಲ್ಯ 93,000/- ರೂಗಳ 02 ಮೊಬೈಲ್ ಗಳು ಸೇರಿ ಒಟ್ಟು 6,59,950/- ರೂ ಮೌಲ್ಯದ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ತನಿಖಾ ತಂಡದ ಉತ್ತಮವಾದ ಕಾರ್ಯವನ್ನು, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಅಭಿನಂದಿಸಿ ಪ್ರಶಂಸಿಸಿರುತ್ತಾರೆ.

ಇ್ಲದನ್ನೂ ಓದಿ-https://suddilive.in/archives/11423

Related Articles

Leave a Reply

Your email address will not be published. Required fields are marked *

Back to top button