ರಾಜಕೀಯ ಸುದ್ದಿಗಳು

ಮತ್ತೆ ಇವಿಎಂ ವಿರುದ್ಧ ಕಾಂಗ್ರೆಸ್ ಆರೋಪ-ಸಂಸದರ ವಿರುದ್ಧ ಸುದರೇಶ್ ಗಂಭೀರ ಆರೋಪ

ಸುದ್ದಿಲೈವ್/ಶಿವಮೊಗ್ಗ

ಲೀಲಾವತಿಯರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಶ್ರದ್ಧಾಂಜಲಿ ಸೂಚಿಸಿದೆ ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸೂಚಿಸಲಾಯಿತು. ನಂತರ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯವರ  ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯಗಳನ್ನ‌ ಪಕ್ಷದ ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ತಿಳಿಸಿದರು.

ತರವಾಯು ಜಿಲ್ಲಾಧ್ಯಕ್ಷ ಹೆಚ್ ಎಸ್ ಸುಂದರೇಶ್ ಸುದ್ದಿ ಗೋಷ್ಠಿ ನಡೆಸಿ, ಬಿಜೆಪಿಯ ವೈಫಲ್ಯದ ವಿರುದ್ಧ ಹಾಗೂ ಮೂರು ರಾಜ್ಯಗಳಲ್ಲಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಇವಿಎಂ ಮೂಲಕ ಎಂದು ಗಂಭೀರ ಆರೋಪ ಮಾಡಿದರು.

ಬೆಳಗಾವಿ ಅಧಿವೇಶನವನ್ನ ವಿಪಕ್ಷನಾಯಕರಾಗಿ ಬಿಜೆಪಿ ಸಂಪೂರ್ಣವಾಗಿ ವಿಫಲರಾಗಿದೆ. ಅಧಿವೇಶನದಲ್ಲಿ ಬಿಜೆಪಿ ಶಾಸಕರು ಭಾಗಿಯಾಗುತ್ತಿಲ್ಲ. ಮೌಲ್ವಿ ತನ್ವೀರ್ ಪೀರಾ ಅವರ ಬಗ್ಗೆ ಹೇಳಲು ಹೋಗಿ ಶಾಸಕ ಯತ್ನಾಳ್ ತಮ್ಮ ಗುಂಡಿಯನ್ನ ಅವರೇ ತೋಡಿಕೊಂಡಿದ್ದಾರೆ. ಜನರಿಗೆ ಬೇಡವಾದ ವಿಚಾರವನ್ನ‌ ಹೇಳಿ ಗೊಂದಲ ಹುಟ್ಟಿಸುತ್ತಿದ್ದಾರೆ. ವಿಪಕ್ಷ ನಾಯಕನಾಗಿ ಅಶೋಕ್ ಗೆ ಕೆಲಸ ಮಾಡಿರುವ ಅನುಭವದ ಕೊರತೆ ಎದ್ದುಕಾಣುತ್ತಿದೆ. ವಿಜೇಂದ್ರರವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಫಲರಾಗಿದ್ದಾರೆ ಎಂದು ದೂರಿದರು.

ಸಂಸತ್ ನಡೆಯುತ್ತಿದ್ದರೂ ಕರ್ನಾಟಕ ಸಂಸದರು ಒಬ್ಬರು ರಾಜ್ಯದ ಬರದ ಬಗ್ಗೆ ಮಾತನಾಡಿದ್ದು ಕಾಣುತ್ತಿಲ್ಲ. ಬರಗಾಲ ಬಂದಿದೆ. ಶಿವಮೊಗ್ಗ ಲೋಕಸಭಾ ಸಂಸದರಿಗೆ ಚುನಾವಣೆ ಚಿಂತನೆಯಾಗಿದೆ. ಏರ್ ಪೋರ್ಟ್ ನಿರ್ಮಾಣ ಮತ್ತು ರೈಲ್ವೆ ಫ್ರೈಓವರ್ ಯೋಜನೆ ಸಹ ಕಾಂಗ್ರೆಸ್ ಸರ್ಕಾರದ‌ ಕಲ್ಪನೆಯಾಗಿದೆ. ಅದಕ್ಕೆ ಬಿಎಸ್ ವೈ ಸಿಎಂ ಆದ ನಂತರ ಹಣ ಬಿಡುಗಡೆ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಯಾವುದೇ ಕಾರ್ಖಾನೆ ಅಥವಾ ಉದ್ಯೋಗ ಸೃಷ್ಠಿಸುವ ಯೋಜನೆಯನ್ನ ಸಂಸದರು ಕ್ಷೇತ್ರಕ್ಕೆ ತಾರದೆ ಐದು ವರ್ಷ ಕಾಲಕಳೆದಿದ್ದಾರೆ. ಮುಂಬರುವ ಲೋಕಸಭ ಚುನಾವಣೆಯಲ್ಲಿ ಕರ್ನಾಟಕದಿಂದ ಬಿಜೆಪಿ 5 ಸೀಟು ಗೆಲ್ಲಲಿಲ್ಲ. ಮೂರು ರಾಜ್ಯಗಳಲ್ಲಿ ಇವಿಎಂ‌ನಿಂದ ಬಿಜೆಪಿ ಗೆದ್ದಿದೆ. ವಕೀಲರು ಮತ್ತು‌ ಸುಬ್ರಹ್ಮಣ್ಯ ಸ್ವಾಮಿಯವರು ಈಗಾಗಲೇ ಇವಿಎಂ ಲೋಪದೋಷ ಕುರಿತು ಸುಪ್ರೀಂ‌ಕೋರ್ಟ್ ನ ಕದತಟ್ಟಿದ್ದಾರೆ ಎಂದರು.

ಇವಿಎಂ‌ನಲ್ಲಿ ಗೋಲ್ ಮಾಲ್ ನಡೆದಿರುವ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಹಾಗಾಗಿ ಮುಂಬರುವ ಚುನಾವಣೆಗಳು ಬ್ಯಾಲೆಟ್ ಪೇಪರ್ ನಲ್ಲಿ ನಡೆಯಬೇಕಿದೆ ಎಂದು ಒತ್ತಾಯಿಸಿದ ಸುಂದರೇಶ್, ಮುಂದಿನ ವಾರದಿಂದ ಕಾಂಗ್ರೆಸ್ ಮುಖಂಡರೊಂದಿಗೆ ಗ್ರಾಪಂ‌ ಮತ್ತು ಬೂತ್ ಮಟ್ಟದ ವ್ಯಾಪ್ತಿಯಲ್ಲಿ ಪ್ರವಾಸ ಮತ್ತು ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಬಿಜೆಪಿ 10 ವರ್ಷದಿಂದ ಅಧಿಕಾರಕ್ಕೆ ಬಂದಿದ್ದು, ಸುಳ್ಳು ಭರವಸೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಇವಿಎಂ ಬಿಜೆಪಿಗೆ ಯಾಕೆ ಬೇಕು, ಅಮೇರಿಕಾ ಜಪಾನ್ ಮೊದಲಾದ‌ ಅಭಿವೃದ್ಧಿ ದೇಶದಲ್ಲಿ ಇವಿಎಂ ಇಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ಕದತಟದಟಲಾಗುತ್ತಿದೆ ಎಂದು ತಿಳಿಸಿದರು.

ಇವಿಎಂ ಲೋಪದೋಷಗಳಿದ್ದರೆ ಅಥವಾ ಹ್ಯಾಕ್ ಮಾಡಬಹುದಾಗಿದ್ದರೆ ಬಂದು ಸಾಕ್ಷಿ ತೋರಿಸಿ ಎಂದು ಈ ಹಿಂದೆ ಚುನಾವಣೆ ಆಯೋಗ ತಿಳಿತ್ತು. ಆಗ ಒಬ್ಬರು ಹೋಗದೆ  ಈಗ ಇವಿಎಂ ಲೋಪವಿದೆ ಹ್ಯಾಕ್ ಆಗುತ್ತೆ ಎಂಬ ಆರೋಪ ಎಷ್ಟು ಸರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಕಾಂಗ್ರೆಸ್ ಗೆ ಈ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಮತ್ತೆ ಸುಪ್ರೀಂ ಮೆಟ್ಟಿಲೇರಿರುವುದಾಗಿ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಮುಖಂಡರಾದ ಮುಜೀಬ್, ಚೇತನ್ ರಮೇಶ್ ಇಕ್ಕೇರಿ, ಚಂದ್ರಶೇಖರ್ ಕಲೀಂ‌ಪಾಶ, ಹಬೀಬ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ-https://suddilive.in/archives/4504

Related Articles

Leave a Reply

Your email address will not be published. Required fields are marked *

Back to top button