ರಾಜಕೀಯ ಸುದ್ದಿಗಳು

ಈಶ್ವರಪ್ಪನವರಿಗೆ ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ ಬೆಂಬಲ

ಸುದ್ದಿಲೈವ್/ಶಿವಮೊಗ್ಗ

ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆಯು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಂಡಾಯವಾಗಿ ಸ್ಪರ್ಧಿಸುತ್ತಿರುವ ಈಶ್ವರಪ್ಪನವರಿಗೆ ಬೆಂಬಲ ಘೋಷಣೆ ಮಾಡಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ವೇದಿಕೆಯ ರಾಮಕೃಷ್ಣ ಮೂಲಿ ಮಾತನಾಡಿ, ಈಶ್ವರಪ್ಪನವರು ಪಕ್ಷಕಟ್ಟಿದ್ದಾರೆ. ಬಿಜೆಪಿಯಲ್ಲಿ ಅವರ ಕೊಡುಗೆ ಅಪರ. ಮಗನಿಗೆ ಪಕ್ಷದಿಂದ ಟಿಕೇಟ್ ನೀಡದೆ ಅನ್ಯಾಯವಾಗಿದೆ. ಹಾಗಾಗಿ ಅವರ‌ ಬಂಡಾಯ ಸ್ಪರ್ಧಿಸುತ್ತಿದ್ದಾರೆ.

2001 ರಲ್ಲಿ ರೇಷ್ಮೆ ಮಂಡಳಿ ಅಧ್ಯಕ್ಷರಾಗಿದ್ದ ಈಶ್ವರಪ್ಪನವರಿಗೆ ಪಕ್ಷ ಕನಕಪುರ ಕ್ಷೇತ್ರದಿಂದ ಉಪಚುನಾವಣೆ ಎದುರಿಸಲು ಸೂಚಿಸಿತ್ತು. ಸೂಚನೆಯ ಮೇರೆಗೆ ರೇಷ್ಮೆ ಮಂಡಳಿಗೆ ರಾಜೀನಾಮೆ ನೀಡಿ ಚುನಾವಣೆ ಸ್ಪರ್ಧಿಸಿದ್ದರು ಎಂದು ತಿಳಿಸಿದರು.

ಅಣ್ಣ ತಮ್ಮಂದಿರಾಗಿ ಪಕ್ಷ ಕಟ್ಟಿಕೊಂಡು ಬಂದ ಈಶ್ವರಪ್ಪ ಮತ್ತು ಯಡಿಯೂರಪ್ಪನವರು, ನಙತರದ ದಿನಗಳಲ್ಲಿ ಬಿಎಸ್ ವೈ ಸಿಎಂ ಆದ ನಂತರ ಈಶ್ವರಪ್ಪನವರನ್ನ ತುಳಿಯುತ್ತಾ ಬಂದಿದ್ದಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ನಿರ್ಮಿಸಿದಾಗ ಸಮಾವೇಶ ನಡೆಸಲಾಗಿತ್ತು.

ಸಮಾವೇಶದಲ್ಲಿ ಒಂದು ಲಕ್ಷ ಜನ‌ಸೇರಿದ್ದರು. ಇದರಿಂದ‌ ಬಿಎಸ್ ವೈಗೆ ಕಣ್ಣು ಕೆಂಪಾಗಿ ಬಿಜೆಪಿ ಹೈಕಮಾಂಡ್ ಗಮನಕ್ಕೆ ತಂದು ಬ್ರಿಗೇಡ್ ನಿಷ್ಕ್ರಿಯ ಆಗುವ ನಿಟ್ಟಿನಲ್ಲಿ ನೋಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು ಎಂದು ದೂರಿದರು.

28 ರಾಜ್ಯ ಲೋಕಸಭಾ‌ ಚುನಾವಣೆಗೆ ಒಬ್ಬ ಕುರುಬ ಸಮಾಜದವರಿಗೆ ಟಿಕೇಟ್ ನೀಡಿಲ್ಲ.‌ಕುರುಬರನ್ನ ತುಳಿದವರು ಎಲ್ಲೂ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಈಗಾಗಲೇ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನ ಬುದ್ದಿ ಕಲಿಸಿದ್ದಾರೆ. ಚುನಾವಣೆ ನಂತರ ಬಿಜೆಪಿಯಲ್ಲಿ ಬದಲಾವಣೆ ನಿಶ್ಚಿತ ಎಂದರು.

ಅವರು ಚುನಾವಣೆ ಸ್ಪರ್ಧಿಸಿದ್ದಾರೆ. ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಈಶ್ವರಪ್ಪನವರು ಅತ್ಯಂತ ಲೀಡ್ ಗಳಿಂದ ಗೆಲುವು ಸಾಧಿಸಲು ಕಾರಣಕರ್ತರಾಗಿದ್ದಾರೆ ಎಂದರು.

ಇದನ್ನೂ ಓದಿ-https://suddilive.in/archives/11272

Related Articles

Leave a Reply

Your email address will not be published. Required fields are marked *

Back to top button