ವಾರದ ಬಳಿಕವೂ ರಾಗಿಗುಡ್ಡದಲ್ಲಿ ಮುಂದುವರೆದ ಸೆಕ್ಷನ್

ಸುದ್ದಿಲೈವ್/ಶಿವಮೊಗ್ಗ

ರಾಗಿಗುಡ್ಡ ಹೊರತುಪಡಿಸಿ ನಗರದಾದ್ಯಂತ ಸೆಕ್ಷನ್ 144 ಸಡಿಲಗೊಳಿಸಲಾಗಿದೆ. ರಾಗಿಗುಡ್ಡದಲ್ಲಿ ಮುಂದಿನ ಆದೇಶದ ವರೆಗೂ ಸೆಕ್ಷನ್ ಮುಂದುವರೆಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶಿಸಿದ್ದಾರೆ.
ಅ.01 ರಂದು ರಾಗಿಗುಡ್ಡದಲ್ಲಿ ಅಂದರೆ ಕಳೆದ ಭಾನುವಾರ ಈದ್ ಮೆರವಣಿಗೆಯ ವೇಳೆ ನಡೆದ ಗಲಭೆ ನಗರಾದ್ಯಂತ ಸೆಕ್ಷನ್ ಗೆ ಕಾರಣವಾಗಿತ್ತು. ಘಟನೆ ನಡೆದು ಒಂದು ವಾರ ಕಳೆದಿದ್ದು ನಗರಾದ್ಯಂತ ಸೆಕ್ಷನ್ ರಿಲ್ಯಾಕ್ಸ್ ಗೊಳಿಸಿ ಜಿಲ್ಲಾಧಿಕಾರಿಗಳು ರಾಗಿಗುಡ್ಡಕ್ಕೆ ಸೆಕ್ಷನ್ ಸೀಮಿತಗೊಳಿಸಿ ಆದೇಶಿಸಿದ್ದಾರೆ.
1) ನಿಷೇಧಿತ ಅವಧಿಯಲ್ಲಿ ಐದು ಜನಕ್ಕಿಂತ ಹೆಚ್ಚು ಜನರು ಗುಂಪುಗುವುದನ್ನು ಮತ್ತು ಓಡಾಡುವುದನ್ನು ನಿಷೇಧಿಸಲಾಗಿದೆ.
2) ನಿಷೇದಾಜ್ಞೆಯ ಅವಧಿಯಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆ ಹಾಗೂ ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ. 3) ಯಾವುದೇ ರೀತಿಯ ಘೋಷಣೆಗಳನ್ನು ಕೂಗುವುದು, ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದನ್ನು ಹಾಗೂ ಪ್ರಚೋದನಾಕಾರಿ ಪ್ಲೆಕ್ಸ್, ಟ್ಯಾನರ್, ಬಂಟಿಂಗ್ಸ್ ಕಟ್ಟುವುದನ್ನು ನಿಷೇಧಿಸಲಾಗಿದೆ.
4) ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದು ಮತ್ತು ಉಪಯೋಗಿಸುವುದನ್ನು ಹಾಗೂ ಯಾವುದೇ ಸ್ಫೋಟಕ ವಸ್ತುಗಳನ್ನು ಹೊಂದುವುದನ್ನು ಮತ್ತು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.5) ಈ ಹಿಂದೆಯೇ ಪೂರ್ವಾನುಮತಿಯನ್ನು ಪಡೆದು ನಿಗಧಿಯಾದಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಮತಿಸಿದೆ.
ಇದನ್ನೂ ಓದಿ-https://suddilive.in/archives/801
