ಕ್ರೈಂ ನ್ಯೂಸ್
ಅರಳಸುರಳಿಯಲ್ಲಿ ಮೂವರು ಸಾವು!

ಸುದ್ದಿಲೈವ್/ತೀರ್ಥಹಳ್ಳಿ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಬಳಿಯಲ್ಲಿ ಭೀಕರ ಘಟನೆಯೊಂದು ಸಂಭವಿಸಿದೆ. ಮನೆಯಲ್ಲಿ ಬೆಂಕಿ ತಗಲಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಗಾಯವಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಹೊಸನಗರ ರಸ್ತೆ ಸಮೀಪ ಇರುವ ಅರಳಸುರಳಿ ಗಣಪತಿ ಕಟ್ಟೆ ರೈಸ್ ಮಿಲ್ ಹತ್ತಿರ ಇರುವ ಮನೆಯೊಂದರಲ್ಲಿ ಈ ಘಟನೆ ಸಂಭವಿಸಿದೆ.
ಕಲ್ಲೋಣಿ ಎಂದು ಕರೆಯಲ್ಪಡುವ ಮನೆ ರಾಘವೇಂದ್ರ ಕೆಕೋಡ (63) ಎಂಬವರಿಗೆ ಸೇರಿದ್ದಾಗಿದ್ದು ರಾಘವೇಂದ್ರ ಕೆಕೋಡು, ನಾಗರತತ್ನ 55 ಶ್ರೀರಾಂ (34) ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ ಭರತ್ 33 ರವರಿಗೆ ಗಂಭೀರ ಗಾಯವಾಗಿದ್ದು ಅವರನ್ನ ಜೆಸಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮತ್ತೊಂದು ಮಾಹಿತಿ ಪ್ರಕಾರ ಇದೊಂದು ಆತ್ಮಹತ್ಯೆ ಎಂದು ಸಮಕಿಸಲಾಗುತ್ತಿದೆ ಇದನ್ನ ತನಿಖೆ ಮೂಲಕ ಸತ್ಯ ಬಹುರಂಗವಾಗಬೇಲಿದೆ. ಸ್ಥಳಕ್ಕೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನ ಓದಿ-https://suddilive.in/archives/755
