ವಿದ್ಯುತ್ ತಂತಿ ತಗುಲಿ ಪೇಂಟರ್ ಸ್ಥಿತಿ ಗಂಭೀರ

ಸುದ್ದಿಲೈವ್/ಶಿವಮೊಗ್ಗ

ಗುಡ್ಡದ ಅರಕೆರೆ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಮನೆ ಕಟ್ಟಡಕ್ಕೆ ಪೇಂಟಿಂಗ್ ಕೆಲಸಕ್ಕೆ ಹೋಗಿದ್ದ ಯುವಕನಿಗೆ ಅಲ್ಯುಮಿನಿಯಂ ಏಣಿ ಹತ್ತಿ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡ ಹಿನ್ನಲೆಯಲ್ಲಿ ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಮಂಜುನಾಥ ಎಂಬ ಪೇಟಿಂಗ್ ಮೇಸ್ತ್ರಿಯವರ ಜೊತೆ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಅಶೋಕ್ ನಗರದ ನಿವಾಸಿ ಚೇತನ್ ಕುಮಾರ್ (30) ನನ್ನ ಅರಕೆರೆ ಗ್ರಾಮದ ರವಿ ಎಂಬುವರ ಮನೆಗೆ ಪೇಂಟಿಂಗ್ ಕೆಲಸ ಮಾಡಲು ಮೇಸ್ತ್ರಿ ಮತ್ತು ಇತರೆ ಕೆಲಸಗಾರರ ಜೊತೆ ತೆರಳಿದ್ದನು
ಯುವಕ ಚೇತನು ಕುಮಾರನು ಮನೆಯ ಟೆರಾಸ್ ಮೇಲೆ ನಿಂತು ಪೇಂಟ್ ಮಾಡಲು ಬಳಸುವ ಅಲ್ಯೂಮಿನಿಯಂ ಏಣಿ ಹಿಡಿದುಕೊಂಡು ಪೇಟಿಂಗ್ ಮಾಡುತ್ತಿದಾಗ ಅಲ್ಯುಮಿನಿಯಂ ಏಣಿ ಮನೆಯ ಮುಂಭಾಗ ಹಾದು ಹೋಗಿರುವ ವಿದ್ಯುತ್ ತಂತಿಗೆ ತಗುಲಿ ಜ್ಞಾನ ತಪ್ಪಿ ಬಿದ್ದನು. ಸ್ಥಳದಲ್ಲಿ ಹಾಜರಿದ್ದ ಮೇಸ್ತ್ರಿ ಮಂಜುನಾಥ, ಇಂಜಿನಿಯರ್ ಮತ್ತು ಮನೆ ಮಾಲೀಕ ಹಾಗು ಕೆಲಸಗಾರರು ತನನ್ನು ಶಿವಮೊಗ್ಗ ಸರ್ಜೆ ಆಸ್ಪತ್ರೆಗೆ ದಾಖಲಿಸಿದ್ದರು.
ಘಟನೆಯಿಂದಾಗಿ ಚೇತನ್ ನ ಎರಡೂ ಕೈಗಳು, ಎರಡೂ ಕಾಲುಗಳು, ಮತ್ತು ಹೊಟ್ಟೆ ತೀವ್ರತರವಾದ ಸುಟ್ಟ ಗಾಯಗಳಾಗಿವೆ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನ.04 ರಂದು ನಡೆದ ಘಟನೆಯಿಂದ ಗಾಯಾಳು ಚೇತನ್ ಇನ್ನೂ ಚೇತರಿಸಿಕೊಂಡಿರುವುದಿಲ್ಲ. ಆತನ ಬಲಗಾಲಿನ ಎರಡೂ ಬೆರಳುಗಳನ್ನು ಕತ್ತರಿಸಲಾಗಿದೆ.
ಎರಡೂ ಕೈಗಳನ್ನು ಕತ್ತರಿಸಿ ತೆಗೆಯಬೇಕಾಗಿರುತ್ತದೆ ಕೆಲಕ್ಕೆ ಕರೆದುಕೊಂಡು ಹೋದ ಮೇಸ್ತ್ತಿ ಮಂಜುನಾಥ, ಇಂಜಿನಿಯರ್ ಹಾಗು ಮನೆಯ ಮಾಲೀಕ ರವಿ ಯಾವುದೇ ಸುರಕ್ಷತೆ ಕ್ರಮ ವಹಿಸದೇ, ಹಾಗು ಮೇಲ್ಬಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ಸುರಕ್ಷತಾ ಪೈಪ್ ಹಾಕದೇ ನಿರ್ಲಕ್ಷಯ ವಹಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ತಾಯಿ ತುಂಗ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
