ಸ್ಥಳೀಯ ಸುದ್ದಿಗಳು

ರೈತರು ಆತಂಕ ಪಡುವ ಅಗತ್ಯವಿಲ್ಲ-ಕಿಮ್ಮನೆ

ಸುದ್ದಿಲೈವ್/ಶಿವಮೊಗ್ಗ

ಶುಗರ್ ಫ್ಯಾಕ್ಟರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದ ರೈತರು ಮತ್ತು ವಸತಿ ಮಾಡಿಕೊಂಡು ಬಂದ‌ ಸಾರ್ವಜನಿಕರು ಒಕ್ಕಲೆಬ್ಬಿಸುವ ಆರಂಕದಲ್ಲಿ ಇರುವುದು ಬೇಡ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆಗ್ರಹಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಬ್ಬುಬೆಳೆಗಾರರು ಹೋರಾಟದಿಂದ ಫ್ಯಾಕ್ಟರಿ ನಷ್ಟವಾಗಿತ್ತುತ್ತೆ. ರೈತರು ಕಬ್ಬನ್ನ ಬೇರೆಡೆ ಕೊಡಲು ಶುರುವಾದ್ದ ಕಾರಣ,  ಲಿಕ್ವಿಡೇಷನ್ ಆಗಿತ್ತು. ಈಗ ಫ್ಯಾಕ್ಟರಿ ನ್ಯಾಯಾಲಯದಮೂಲಕ ಹಣ ತುಂಬಿಸಿಕೊಂಡು ಬಂದು ನಮ್ಮ.ಭೂಮಿ ಕೊಡಿ ಎಂದು ಹೇಳುತ್ತಿದೆ.

ಸದಾಶಿವ ನಗರದಲ್ಲಿ ಭೂಮಿ ಹಂಚಿಕೆ ವಿಚಾರದಲ್ಲಿ ಹೈಕೋರ್ಟ್ ನಲ್ಲಿ ಪ್ರಕರಣ ಬಾಕಿ ಇದೆ. 700 ಎಕರೆಯಲ್ಲಿ ಹೊಳೆಬೆನವಳ್ಳಿಯ  ಸದಾಶಿವ ನಗರದ ಜಾಗವೂ ಸೇರಿದೆ. ಜನವರಿ 12 ರಂದು ಹೊರಹಾಕಲಾಗುವುದು ಎಂಬ ರೈತರ ಆತಂಕದಲ್ಲಿದೆ. ಆದರೆ ರೈತರು ಆತಂಕ ಬೇಡ ಎಂದರು.

ತಹಶೀಲ್ದಾರ್ ಅವರು ನ್ಯಾಯಾಲಯದ ಆರ್ಡರ್ ಕಾಪಿ ಸ್ವೀಕರಿಸಿದ ದಿನದಿಂದ ಮೂರು ತಿಂಗಳು ಬಿಟ್ಟು ಭೂಮಿ ಗುರುತಿಸಿ ಕೊಡಬೇಕೆಂಬ ಮಾಹಿತಿ ಇದೆ.  ಶುಗರ್ ಫ್ಯಾಕ್ಟರಿ ಲಿಕ್ವಡೇಷನ್ ವಿಷಯದಲ್ಲಿ  ಹೈಕೋರ್ಟ್  ನಲ್ಲಿ ಒಂದು ಆದೇಶ ಬಾಕಿ ಇದೆ.  ಇನ್ಬೊಂದು ಆದೇಶದಲ್ಲಿ ಭೂಮಿ ಕೊಡಲು ಆದೇಶವಿದೆ. ಎರಡೂ ನ್ಯಾಯಾಲಯದ ಆದೇಶವಾಗಿದೆ.

ಎರಡನ್ನೂ ನ್ಯಾಯಾಲಯದಲ್ಲಿಯೇ ಬಗೆಹರಿಸಿಕೊಳ್ಳಬೇಕಿದೆ. ಒಂದು ಸರ್ಕಾರದ ಗಮನಕ್ಕೂ ತರಲಾಗುವುದು. ಇದರಿಂದ ಒಕ್ಕಲೆಬ್ಬಿಸುವ ಆತಂಕ ದೂರವಾಗಲಿದೆ ಎಂದರು. ರೈತರನ್ನ ಒಕ್ಕಲೆಬ್ಬಿಸದಂತೆ ನೋಡಿಕೊಳ್ಳುವ ಜವಬ್ದಾರಿ  ಸರ್ಕಾರದ್ದಾಗಿದೆ. ಅವರಿಗೆ ರಕ್ಷಣೆ ಕೊಡುವ ಜವಬ್ದಾರಿ ಜಿಲ್ಲಾ ಕಾಂಗ್ರೆಸ್ ದೂ ಸಹವಾಗಿದೆ. 645 ಎಕರೆ ಜಮೀನು ಲಿಕ್ವಿಡೇಷನ್ ಇದೆ.

ಬಿಜೆಪಿ ರೈತರ ಭೂಮಿ ಖರೀದಿ ವಿಚಾರದಲ್ಲಿ ತಂದ ಸುಧಾರಣೆಯಿಂದ ಒಂದು ಕುಟುಂಬ ಸಾವಿರ ಎಕರೆ ಖರೀದಿಗೆ ಅವಕಾಶಕೊಟ್ಟ  ಪರಿಣಾಮ ರೈತರು ಕಂಗಾಲಾಗಿದ್ದಾರೆ. ಒಂದು ಫ್ಯಾಕ್ಟರಿಯ ಮಾಲೀಕ 1000 ಎಕರೆ ಭೂಮಿ ಹೊಂದಲು ಶಕ್ತವಾಗಿದ್ದರಿಂದ ಈ ಸಮಸ್ಯೆ ತಲೆದೂಗಿದೆ. ಈ ಜಮೀನಿನ ಮೇಲೆ ಕಣ್ಣಿಟ್ಟು ರೈತರ‌ ಭೂಮಿ ಖರೀದಿಯ ವಿಚಾರದಲ್ಲಿ ತಿದ್ದುಪಡಿಯಾಗಿದೆಯಾ ಎಂದು ಶಂಕೆ ವ್ಯಕ್ತಪಡಿಸಿದರು.

ಯರಗನಾಳ್ ಮತ್ತು ಸದಾಶಿವ ನಗರದಲ್ಲಿ ಡಿಸಿ ಸೃವೆ ನಡೆಸಬೇಕು ಎಂದು ಆಗ್ರಹಿಸಿದರು. ಆದರೆ ಕಾಂಗ್ರೆಸ್ ಪಕ್ಷದ ನಾಯಕರ ಪುತ್ರನೇ ಕಾರ್ಖಾನೆ ತೆರವುಗೊಳಿಸಲು ಮುಂದಾಗಿರುವ ಬಗ್ಗೆ ಮಾಧ್ಯಮಗಳು ಪ್ರಶ್ನೆಗೆ ಉತ್ತರಿಸಿದ ಕಿಮ್ಮನೆ‌ ರತ್ನಾಕರ್ ಯಾರ ಪುತ್ರರಿದ್ದರೂ ಸರ್ಕಾರ ರೈತರ ಪರ ಇದೆ ಎಂದರು.

Related Articles

Leave a Reply

Your email address will not be published. Required fields are marked *

Back to top button

Notice: ob_end_flush(): Failed to send buffer of zlib output compression (0) in /home/twzwscfi/suddilive.in/wp-includes/functions.php on line 5373