ರಾಜ್ಯೋತ್ಸವದ ಅಂಗವಾಗಿ ಪಥಸಂಚಲನ

ಸುದ್ದಿಲೈವ್/ಶಿವಮೊಗ್ಗ

ಕನ್ನಡ ರಾಜ್ಯೋತ್ಸವವನ್ನ ಎಟಿಎನ್ ಸಿ ಸಿ ಕಾಲೇಜು ಅದ್ಧೂರಿ ಹಾಗೂ ವಿಭಿನ್ನವಾಗಿ ಆಚರಿಸಿದೆ. ಇಂದು ರಾಜ್ಯೋತ್ಸವದ ಅಂಗವಾಗಿ ಪಥ ಸಂಚಲನ ನಡೆಸಿದೆ. ನಾಡು ನುಡಿ ಉಳಿಸುವ ನಿಟ್ಟಿನಲ್ಲಿ ಈ ಪಥ ಸಂಚಲನ ಅರ್ಥಗರ್ಭಿತವಾಗಿದೆ.
ಕನ್ನಡವೇ ಸತ್ಯ ಕನ್ನಡವೇ ನಿತ್ಯ, ನವೆಂಬರ್ ಒಂದೇ ತಿಂಗಳು ಕನ್ನಡದ ಉತ್ಸವವಾಗಬಾರದು, ಕನ್ನಡ ಮಾತಾಕಿ ಜೈ ಎಂಬ ಘೋಷಣೆಗಳೊಂದಿಗೆ ಹೊರಟ ಈ ಪಥ ಸಂಚಲನ ಕನ್ನಡದ ಕಿಚ್ಚನ್ನ ಹುಟ್ಟಿಸಿದೆ. ಕಾಲೇಜು ಮಕ್ಕಳ ಈ ಪಥ ಸಂಚಲನ ಕನ್ನಡಿಗರ ಸ್ವಾಭಿಮಾನವನ್ನ ಸಾರಿ ಸಾರಿ ಹೇಳುತ್ತಿದೆ.
ಎಟಿ ಎನ್ ಸಿಸಿ ಕಾಲೇಜಿನ ನೋಟೀಸ್ ಬೋರ್ಡ್ ಮೇಲೆ, ನೆಲದ ಮೇಲೆ ಅಂಟಿಸಿದ ಪ್ಲಕಾರ್ಡ್ ಗಳು ಸಹ ಕನ್ನಡ ಭಾಷೆಯನ್ನ ಅಪ್ಪಿಕೊಳ್ಳುವಂತೆ ಮಾಡಿದೆ, ಕನ್ನಡ ಉಳಿಸಿ ಬೆಳಸಿ, ಹೆಸರಾಯಿತು ಕನ್ನಡ, ಉಸಿರಾಗಲಿ ಕನ್ನಡ, ಹಸಿಗೋಡೆಯ ಹರಳಿನಂತೆ ಹುಸಿಹೋಗದ ಕನ್ನಡ
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ಕನ್ನಡವಾಗಿರು ಎಂಬ ಘೋಷಣೆ ಮೂಲಕ ವಿದ್ಯಾರ್ಥಿಗಳು ಎಟಿಎನ್ ಸಿಸಿ, ಡಿವಿಎಸ್ ರಸ್ತೆ ಬಿಹೆಚ್ ರಸ್ತೆ, ಶಿವಪ್ಪ ನಾಯಕ ವೃತ್ತ, ಎಎ ವೃತ್ತ, ನೆಹರೂ ರಸ್ತೆ, ಗೋಪಿ ವೃತ್ತ, ಬಾಲರಾಜ್ಅರಸ್ರಸ್ತೆ, ಮಹಾವೀರ ವೃತ್ತದ ಮೂಲಕ ಎಟಿಎನ್ ಸಿಸಿ ಕಾಲೇಜು ತಲುಪಿದೆ.
ಇದನ್ನೂ ಓದಿ-https://suddilive.in/archives/2375
