ಜಮೀರ್ ಯಾನೆ ಬಚ್ಚಾನ ಮತ್ತೊಂದು ಪ್ರಕರಣದ ತೀರ್ಪು ಪ್ರಕಟ

ಸುದ್ದಿಲೈವ್/ಶಿವಮೊಗ್ಗ

ನ್ಯಾಯಾಲಯದ ದಸ್ತಗಿರಿ ವಾರೆಂಟ್ ಹಿಡಿದುಕೊಂಡು ಬಂದಿದ್ದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಪ್ರಕರಣದಲ್ಲಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯ 02 ವರ್ಷ ಸಾದ ಕಾರಾಗೃಹ ಶಿಕ್ಷೆ 20 ಸಾವಿರ ರೂ.ದಂಡ ವಿಧಿಸಿ ತೀರ್ಪುನೀಡಿದೆ.
2016 ರಲ್ಲಿ ಜಮೀರ್ @ ಬಚ್ಚಾನ ವಿರುದ್ಧ ದಾವಣಗೆರೆಯ ಮಾನ್ಯ 1ನೇ ಜೆಎಂಎಫ್.ಸಿ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಅನ್ನು ಹೊರಡಿಸಲಾಗಿತ್ತು. ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂಧಿಗಳಾದ ಪರಶುರಾಮಪ್ಪ ಹೆಚ್.ಸಿ ಮತ್ತು ಸತೀಶ್ ಹೆಚ್.ಸಿ ರವರುಗಳು ವಾರೆಂಟ್ ಜಾರಿಗಾಗಿ ಆರೋಪಿ ಜಮೀರ್ @ ಬಚ್ಚಾ @ ಬಚ್ಚನ್ ನ ಮನೆಯ ಬಳಿ ಬಂದಿದ್ದಾಗ ಪೊಲೀಸ್ ಸಿಬ್ಬಂಧಿಗಳ ಮೇಲೆ ಹಲ್ಲೆ ಮಾಡಿ ಅವರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ತಳ್ಳಿ ಜೀವಬೆದರಿಕೆ ಹಾಕಿ ಪರಾರಿಯಾಗಿದ್ದನು.
ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಆತನ ವಿರುದ್ಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆಯನ್ನು ತೆರಯಲಾಗಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 22 ಪ್ರಕರಣಗಳು ದಾಖಲಾಗಿವೆ.
ಈ ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಸಿಪಿಐ ಗಂಗಾಧರಪ್ಪ, ಆರೋಪಿಯ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭೊಯೋಜಕರಾದ ಶಾಂತರಾಜ್, ಪ್ರಕರಣದ ವಾದ ಮಂಡಿಸಿದ್ದರು,
ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದ ನ್ಯಾಯಾಧೀಶರಾದ ಕೆ.ಮಾನು ಆರೋಪಿ ಜಮೀರ್ @ ಬಚ್ಚಾ @ ಬಚ್ಚನ್(26) ನಿಗೆ 02 ವರ್ಷ ಸಾಧಾ ಕಾರಾಗೃಹ ಶಿಕ್ಷೆ ಮತ್ತು 20,000/- ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 2 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಿರುತ್ತಾರೆ. ಸಧ್ಯಕ್ಕೆ ಬಚ್ಚಾ ಕಲ್ಬುರ್ಗಿ ಜೈಲಿನಲ್ಲಿದ್ದು ಈ ಪ್ರಕರಣದಿಂದ ಸೆರೆವಾಸದ ಶಿಕ್ಷೆ ಮುಂದುವರೆದಿದೆ.
ಇದನ್ನೂ ಓದಿ-https://suddilive.in/archives/2859
