ಹಣಗೆರೆಕಟ್ಟೆಯ ಬಸವನಗದ್ದೆಯಲ್ಲಿ ಅರಣ್ಯ ಅಧಿಕಾರಿಗಳ ದಾಳಿಗೆ ಅಡ್ಡಿಯಾದ ಆರಗ ಜ್ಞಾನೇಂದ್ರ!

ಸುದ್ದಿಲೈವ್/ಶಿವಮೊಗ್ಗ

ವನ್ಯಜೀವಿಗಳ ಕೊಂಬು, ಉಗುರು ಹಿಂದೆ ಬಿದ್ದಿರುವ ಅರಣ್ಯ ಅಧಿಕಾರಿಗಳಿಗೆ ಇಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅಡ್ಡಿಯಾಗಿದ್ದಾರೆ.
ತೀರ್ಥಹಳ್ಳಿ ತಾಲೂಕು ಹಣಗೆರೆ ಸಮೀಪದ ಬಸವನಗದ್ದೆಯಲ್ಲಿ ಅರಣ್ಯ ಅಧಿಕಾರಿಗಳು ವನ್ಯ ಜೀವಿ ವಸ್ತುಗಳ ಸಂಗ್ರಹ ವಿಚಾರದಲ್ಲಿ ವ್ಯಕ್ತಿಯನ್ನ ಬಂಧಿಸಲು ಮುಂದಾದಾಗ ಮಾಜಿ ಗೃಹ ಸಚಿವರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಮಾಜಿ ಗೃಹಸಚಿವರು ಕರೆ ಮಾಡಿರುವ ಘಟನೆ ನಡೆದಿದೆ.
ನೂರಾರು ವರ್ಷಗಳಿಂದ ಇಟ್ಟುಕೊಂಡು ಬಂದಿರುವ ಕುಟುಂಬದವರನ್ನ ಬಂಧಿಸದಂತೆ ಡಿಸಿಗೆ ಕೋರಿದ್ದಾರೆ. ಬ್ರಾಹ್ಮಣ ಕುಟುಂಬದ ಮನೆಗಳಾದ ಪ್ರಸನ್ನ ಎಂಬುವವರ ಮತ್ತು ಅವರ ಅಣ್ಣನ ಮನೆಯಲ್ಲಿ ಮನೆಯಲ್ಲಿ ವನ್ಯ ಜೀವಿಗಳಾದ ಜಿಂಕೆ, ಕೊಂಬು, ಕಾಡುಕೋಣ ಕೊಂಬು ಮೊದಲಾದ ವಸ್ತುಗಳು ಪತ್ತೆಯಾಗಿದೆ ಎಂಬ ಮಾಹಿತಿ ಕೇಳಿ ಬಂದಿದೆ.
ಅರಣ್ಯ ಇಲಾಖೆ ಪತ್ತೆಯಾದ ವಸ್ತುಗಳ ಬಗ್ಗೆ ಮಾಹಿತಿ ನೀಡಬೇಕಿದೆ. ಈ ವಸ್ತುಗಳನ್ನಬ್ರಾಹ್ಮಣ ಕುಟುಂಬ ನೂರಾರು ವರ್ಷಗಳಿಂದ ಇಟ್ಟುಕೊಂಡು ಬಂದಿದೆ ಎಧು ಹೇಳಲಾಗುತ್ತಿದೆ. ಅರಣ್ಯ ಇಲಾಖೆಯವರು ದಾಳಿ ನಡೆಸಿ ವಸ್ತುಗಳನ್ನ ವಶಪಡಿಸಿಕೊಂಡಿದೆ
ಯಾವಾಗ ಪ್ರಸನ್ನರವನ್ನಬಂಧಿಸಲು ಮುಂದಾದ ಅರಣ್ಯ ಅಧಿಕಾರಿಗಳ ವಿರುದ್ಧ ಮಾಜಿ ಗೃಹ ಸಚಿವರು ಪ್ರತಿಭಟನೆಗೆ ಉಂದಾಗಿದ್ದಾರೆ. ಎಸಿಎಫ್ ಸುರೇಶ್ ನೇತೃತ್ವದ 12 ಜನ ಅರಣ್ಯ ಅಧಿಕಾರಿಗಳು ಈ ದಾಳಿಯಲ್ಲಿ ಭಾಗಿಯಾಗಿದ್ದಾರೆ. ಟ್ರೋಫಿಗಳನ್ನ ವಶಪಡಿಸಿಕೊಂಡ ಅರಣ್ಯಗಳ ತಂಡ ಪ್ರಸನ್ನರನ್ನ ಬಂಧಿಸದೆ ವಾಪಾಸ್ ಆಗಿದೆ.
ಇದನ್ನೂ ಓದಿ-https://suddilive.in/archives/2246
